ಒಂದೊಂದು ದೇಶವೂ ಅನುಭವಿಸಿದ ನರಕಯಾತನೆ, ದುಃಖ ದುಮ್ಮಾನ ಹೇಳತೀರದು. ಈ ಮೂರು ರಾಷ್ಟ್ರಗಳಲ್ಲಿ ದೀರ್ಘಕಾಲ ಕಣ್ಣೀರಿನಲ್ಲಿ ತೊಳಲಾಡಿದ್ದು ಇಸ್ರೇಲ್. ರೋಮನ್ನರ ದೌರ್ಜನ್ಯಕ್ಕೆ ತುತ್ತಾಗಿ ತಮ್ಮ ದೇಶದಿಂದಲೇ ಹೊರದಬ್ಬಲ್ಪಟ್ಟು ಸುಮಾರು ಎರಡು ಸಾವಿರ ವರ್ಷಗಳಷ್ಟು ಕಾಲ ಬೇರೆ ಬೇರೆ ರಾಷ್ಟ್ರಗಳಲ್ಲಿ ಚದುರಿ ಹೋಗಿ ಪರದೇಶಿಗಳಂತೆ ಅಲೆಯುತ್ತ ಇನ್ನಿಲ್ಲದ ಬವಣೆಗೆ ಒಳಗಾಗಿದ್ದು ಇಸ್ರೇಲ್. ಅವರನ್ನು ಗೌರವದಿಂದ ನಡೆದುಕೊಂಡ ಏಕಮೇವ ರಾಷ್ಟ್ರ ಭಾರತ. 1948ರಲ್ಲಿ ಇಸ್ರೇಲ್ ನಿರ್ವಣವಾದ ಮೇಲೆ ಅವರ ಪಾರ್ಲಿಮೆಂಟಿನಲ್ಲಿ ಜಾರಿ ಮಾಡಿದ ಮೊಟ್ಟಮೊದಲ ಮಸೂದೆಯೇ ಭಾರತಕ್ಕೆ ಕೃತಜ್ಞತೆ ಅರ್ಪಿಸಿದ್ದು. ಇದರ ಶೀರ್ಷಿಕೆಯೇ ಖಜಚ್ಞk ್ಗ್ಠ ಐಛಜಿಚ ಎಂದು. ಇಂದು ಇಡೀ ವಿಶ್ವದಲ್ಲಿ ಭಾರತಕ್ಕೆ ಅತ್ಯಂತ ನಂಬಿಕಸ್ತ ಮಿತ್ರರಾಷ್ಟ್ರ ಎಂದರೆ ಇಸ್ರೇಲ್. ಅವರು ಪಟ್ಟ ಬವಣೆ, ಹೆಪ್ಪುಗಟ್ಟಿದ ಅವಮಾನ, ಹರಿಸಿದ ಕಣ್ಣೀರ ಕೋಡಿ ಅದೆಲ್ಲಾ ಸಾಮಗ್ರಿಗಳು ಸೇರಿ ಒಂದು ಅದ್ಭುತ ಸಂಪತ್ತನ್ನು ನಿರ್ಮಾಣ ಮಾಡಿವೆ. ಅದೇ ಸಾಟಿಯಿಲ್ಲದ ರಾಷ್ಟ್ರಪ್ರೇಮ, ಅದ್ಭುತ ಸ್ವಾವಲಂಬನಾ ಪ್ರವೃತ್ತಿ ಮತ್ತು ತಾಯಿನಾಡು, ಸಂಸ್ಕೃತಿ, ದೇಶ, ಭಾಷೆಗಳ ಮೇಲಿನ ಅಭಿಮಾನ. ಸಂಪೂರ್ಣವಾಗಿ ಶತ್ರುರಾಷ್ಟ್ರಗಳಿಂದ ಸುತ್ತುವರಿಯಲ್ಪಟ್ಟಿದ್ದರೂ ಇಸ್ರೇಲ್ ಕಡೆಗೆ ಇಣುಕಿ ನೋಡುವ ಧೈರ್ಯ ಕೂಡ ಇಲ್ಲ ಈ ರಾಷ್ಟ್ರಗಳಿಗೆ.
ಇನ್ನು ಜಪಾನ್. 1904 ಮತ್ತು 1931ರಲ್ಲಿ ವಿಶ್ವದಲ್ಲಿಯೇ ಬೃಹತ್ ರಾಷ್ಟ್ರಗಳಾದ ರಷ್ಯಾ(ವಿಸ್ತೀರ್ಣದಲ್ಲಿ) ಮತ್ತು ಚೈನಾ (ಜನಸಂಖ್ಯೆಯಲ್ಲಿ)ಗಳನ್ನು ಯುದ್ಧದಲ್ಲಿ ಸೋಲಿಸಿ ಪೂರ್ವಾರ್ಧ ಗೋಳದ ಇಂಗ್ಲೆಂಡಿನಂತೆ ಸಾರ್ವಭೌಮತ್ವವನ್ನು ವಿಸ್ತರಿಸಿ ಮೆರೆಯುತ್ತಿದ್ದ ಜಪಾನಿಗೆ ಕುಠಾರಪ್ರಾಯವಾಗಿದ್ದು 1945ರ ಹಿರೋಷಿಮಾ ಮತ್ತು ನಾಗಸಾಕಿಗಳ ಮೇಲಿನ ಬಾಂಬ್ ದಾಳಿ. ಆದರೆ ಕೆಲ ರಾಷ್ಟ್ರಗಳಲ್ಲಿ, ಜನಾಂಗಗಳಲ್ಲಿ ಒಂದು ಅದ್ಭುತವಾದ ಗುಣವಿರುತ್ತದೆ. ಪಾತಾಳದಲ್ಲಿ ಬಿದ್ದಿದ್ದರೂ
ಫೀನಿಕ್ಸ್ನಂತೆ ಮೈ ಕೊಡವಿಕೊಂಡು ಎದ್ದು ನಿಲ್ಲಬಲ್ಲರು ಅವರು. ಇಂತಹ ರಾಷ್ಟ್ರಗಳು ಸಾಮಾನ್ಯವಾಗಿ ಸೋಲುಗಳನ್ನು ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ಸೋಲುಗಳನ್ನು, ಅವಮಾನಗಳನ್ನು, ಗೆಲ್ಲಬೇಕೆಂಬ ಛಲವನ್ನಾಗಿ ಪರಿವರ್ತಿಸಿಕೊಳ್ಳುತ್ತವೆ. ಉದ್ಧಾರದ ಲಕ್ಷಣವೇ ಅದು! ಹಿಂದೆ ಗ್ರೀಸ್ನ ಅಥೆನ್ಸ್, ಪರ್ಷಿಯನ್ನರು ಮತ್ತು ಸ್ಪಾರ್ಟನ್ನರ ಗುಲಾಮಗಿರಿಯಿಂದ ಪಾರಾಗಿ ಸ್ವತಂತ್ರಗೊಂಡ ನಂತರ ಅದು ತನ್ನನ್ನು ಕಟ್ಟಿಕೊಂಡ ಪರಿಯನ್ನು ನೋಡಬೇಕು! ಜಪಾನ್, ಇಸ್ರೇಲ್ಗಳಿಗೆ ಇದು ಗೊತ್ತಿತ್ತೊ ಇಲ್ಲವೊ ಆದರೆ ಅವು ಅನುಸರಿಸಿದ ನೀತಿ ಮಾತ್ರ ಅಥೆನ್ಸ್ ನದ್ದೇ. ಮೈ ಕೊಡವಿ ಎದ್ದು ನಿಂತು ಮುಯ್ಯಿಗೆ ಮುಯ್ಯಿ ಎನ್ನುವ ರೀತಿಯಲ್ಲಿ ರಾಷ್ಟ್ರಗಳನ್ನು ಅದ್ಭುತವಾಗಿ ನಿರ್ವಿುಸಿಕೊಂಡಿವೆ ಇವು.
1945ರಿಂದ 1948 ರವರೆಗಿನ ಮೂರು ವರುಷಗಳ ಅವಧಿಯಲ್ಲಿ ಮೂರು ರಾಷ್ಟ್ರಗಳು ಹೊಸಜನ್ಮ ಪಡೆದವು ಎಂದು ಹೇಳಿದ್ದೆ, ಮೂರನೆಯದ್ದೇ ನಮ್ಮ ನೆಚ್ಚಿನ ತಾಯ್ನಾಡು.
ಇಡೀ ವಿಶ್ವದಲ್ಲೇ ಭಾರತವರ್ಷಕ್ಕೆ ಭಗವಂತ ವರ್ಷಿಸಿರುವಷ್ಟು ಆಶೀರ್ವಾದ ಅನುಗ್ರಹಗಳನ್ನು ಬೇರಾವ ರಾಷ್ಟ್ರಕ್ಕೂ ಅನುಗ್ರಹಿಸಿಲ್ಲ. ಆದರೆ ಇಸ್ರೇಲ್, ಜಪಾನ್ಗಳಂತೆ ಟಟಡಿಛ್ಟಿf್ಝ ಞಜ್ಞಿಛಠಛಿಠಿಗಳನ್ನು ಭವಿಷ್ಯ ಭಾರತದ ನಿರ್ವಪಕರಾದ ಯುವ ಜನತೆಯಲ್ಲಿ ನಿರ್ವಿುಸಲು ಯಾವುದೇ ಗಂಭೀರ ಪ್ರಯತ್ನ ನಡೆಯದಿದ್ದುದು ದುರಂತ. ಮೆಕಾಲೆ ಶಿಕ್ಷಣ ಅನಿರ್ಬಂಧಿತವಾಗಿ ನಡೆದುಕೊಂಡು ಬಂದು ಕೇವಲ ಹುಟ್ಟು ಮತ್ತು ಬಣ್ಣಗಳಲ್ಲಿ ಭಾರತೀಯರು; ಆದರೆ ದೃಷ್ಟಿಕೋನವೆಲ್ಲಾ ಯುರೋಪಿಯನ್ ಎಂಬ ಲಕ್ಷಣವುಳ್ಳ ವ್ಯಕ್ತಿಗಳ ನಿರ್ಮಾಣ ನಡೆದುಕೊಂಡು ಬರುತ್ತಿದೆ. ಖಜಛಿ ಜ್ಟಛಿಚಠಿಛಿಠಠಿ ಚಠಠಛಿಠಿ ಜ್ಞಿ ಠಿಜಛಿ ಡಿಟ್ಟ್ಝ ಜಿಠ Mಜ್ಞಿಛಠಛಿಠಿ ಟ್ಛ Mಚ್ಞ ಎನ್ನುವುದು ಮರೆತುಹೋದಂತಿದೆ ನಮಗೆ. ಪ್ರಾಚೀನ ಭಾರತದ ಸಾಟಿಯಿಲ್ಲದ ಸಾಧನೆಗಳನ್ನು, ಇಡೀ ಪಶ್ಚಿಮಾರ್ಧ ಗೋಳ ಇನ್ನೂ ಪೂರ್ತಿಯಾಗಿ ಮನುಷ್ಯನಾಗಿ ವಿಕಾಸಗೊಳ್ಳುವ ಮೊದಲೇ ಭಾರತ ವಿಜ್ಞಾನ-ತಂತ್ರಜ್ಞಾನ, ಆರ್ಥಿಕತೆ, ಸಂಸ್ಕೃತಿ, ರಾಜಕೀಯ, ಅಧ್ಯಾತ್ಮ ಇತ್ಯಾದಿ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳನ್ನು ಪಠ್ಯಪುಸ್ತಕಗಳಲ್ಲಿ ರಾರಾಜಿಸುವಂತೆ ಮಾಡಬೇಕಿತ್ತು. ಇಂಗ್ಲೆಂಡ್, ಅಮೆರಿಕ, ಜಪಾನ್ಗಳು ಬೆಳೆಯುವ ಹದಿಹರೆಯದ ಮನಸ್ಸುಗಳಲ್ಲಿ ಪ್ರಚಂಡ ರಾಷ್ಟ್ರಾಭಿಮಾನ, ಆತ್ಮವಿಶ್ವಾಸಗಳನ್ನು ಮೊದಲಿನಿಂದಲೂ ತುಂಬಿಕೊಂಡು ಬರುತ್ತಿರುವುದೇ ಹೀಗೆ. ರಾಷ್ಟ್ರೀಯ ಹಿತ ಸ್ವಹಿತಕ್ಕಿಂತ ಮುಖ್ಯ ಎನ್ನುವುದೇ ರಾಷ್ಟ್ರವನ್ನು ಕಟ್ಟುವವರ ಹಿಂದಿನ ಬಲವತ್ತರವಾದ ಪ್ರೇರಣೆ. ರಾಷ್ಟ್ರದ ಕುರಿತ ಅಭಿಮಾನ ಹೆಮ್ಮೆಗಳೇ ರಾಷ್ಟ್ರ ಕ್ಕಾಗಿ ಮಾಡುವ ಸೇವೆ ಹಾಗೂ ತ್ಯಾಗಗಳ ಹಿಂದಿನ ಪ್ರೇರಕ ಶಕ್ತಿಗಳು.
ಸೇವೆ ಹಾಗೂ ತ್ಯಾಗಗಳ ಹಿಂದೆ ಕೆಲಸ ಮಾಡುವುದೇ ಉಜ್ವಲ ಪ್ರೇಮ ಹಾಗೂ ಅಭಿಮಾನ. ಆದರೆ ದುರಂತವೆಂದರೆ ನಮ್ಮ ಇತಿಹಾಸ ನಕಾರಾತ್ಮಕ ಎಂದು ಸ್ವಾಮಿ ವಿವೇಕಾನಂದರಾದಿಯಾಗಿ ಈ ದೇಶದ ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತಿಸಿದ ಪ್ರತಿಯೊಬ್ಬರೂ ಭಾವಿಸಿದ್ದಾರೆ. ರಾಷ್ಟ್ರಾಭಿಮಾನ ಸ್ವಜನಾಭಿಮಾನಗಳು ಕ್ರಾಂತಿಯನ್ನೇ ನಿರ್ವಿುಸಿದೆ ಎಂಬುದನ್ನು ಐರಿಶ್, ಫ್ರೆಂಚ್ ಮತ್ತು ಚೈನಾ ಕ್ರಾಂತಿಗಳಿಂದ ನೋಡುತ್ತೇವೆ. ಭಾರತೀಯ ಸ್ವಾತಂತ್ರ್ಯ ಚಳವಳಿ ತೀವ್ರ ರೂಪವನ್ನು ಪಡೆದುಕೊಂಡಿದ್ದೇ ಸ್ವಾಮಿ ವಿವೇಕಾನಂದರ ರಾಷ್ಟ್ರಪ್ರೇಮಿ, ಉಜ್ವಲ ಭಾಷಣಗಳಿಂದ ಎಂದು ಫ್ರೆಂಚ್ ಕಾದಂಬರಿಕಾರ ರೋಮೈರೋಲಾ ಹೇಳುತ್ತಾರೆ. ಫ್ರೆಂಚ್ ಕ್ರಾಂತಿಯ ರೂವಾರಿಗಳಲ್ಲೊಬ್ಬರಾದ ರೂಸೋ ಹೇಳುತ್ತಾರೆ- ‘ಮನುಷ್ಯನಿಗೆ ಗೊತ್ತಿರುವ ಮತ್ತಾವುದೇ ವಿಷಯಕ್ಕಿಂತ ತಿರುಚಲ್ಪಟ್ಟ ಚರಿತ್ರೆ ಅವನ ಪ್ರಗತಿಗೆ ಹೆಚ್ಚು ಅಡ್ಡಿಯಾಗಿದೆ.’ ಇಂದು ಭಾರತದಲ್ಲಿ ನಾವು ಕಾಣುವುದು ಅದನ್ನೇ. ಆಕ್ರಮಣಕಾರರನ್ನು, ಇಲ್ಲಿಯ ಸಂಸ್ಕೃತಿ, ಸಾಹಿತ್ಯ, ವಿದ್ಯೆ, ರಾಷ್ಟ್ರೀಯ ಹಾಗೂ ಜನಾಂಗೀಯ ವಿಶೇಷತೆಗಳನ್ನು ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಿದ, ಆತ್ಮಗೌರವ ಎಂಬ ಪದವೇ ನಮ್ಮ ಶಬ್ದಕೋಶದಿಂದ ನಿರ್ಗಮಿಸುವಂತೆ ಮಾಡಿದವರನ್ನು ದೇಶದ ಉದ್ಧಾರಕರೆಂದು ಪ್ರತಿಬಿಂಬಿಸಿದ್ದು ದುರಂತ. ಸ್ವಾಮಿ ವಿವೇಕಾನಂದರ ಈ ಎಚ್ಚರಿಕೆ ನಮ್ಮ ಕಿವಿಯನ್ನು ತಲುಪಲೇ ಇಲ್ಲ-‘ವ್ಯಕ್ತಿಯೊಬ್ಬ ಯಾವಾಗ ತನ್ನನ್ನು ತಾನೇ ದ್ವೇಷಿಸುತ್ತಾನೋ ಆಗ ಅವನನ್ನು ನಾಶ ಮಾಡುವ ಕೊನೆಯ ಪೆಟ್ಟು ಬಿತ್ತೆಂದು ತಿಳಿಯಿರಿ. ಯಾವನು ತನ್ನ ಪೂರ್ವಿಕರಿಂದ ತನಗೆ ಅವಮಾನವಾಯಿತೆಂದು ಖಿನ್ನ ಮನಸ್ಕನಾಗುವನೋ ಆಗ ಅವನಿಗೆ ಕೊನೆಗಾಲ ಸಮೀಪಿಸಿತೆಂದು ತಿಳಿಯಿರಿ.’ ದೇಶವನ್ನು ಒಗ್ಗೂಡಿಸುವುದುಕ್ಕೆ ಸ್ವಾಮಿ ವಿವೇಕಾನಂದರು ಕಂಡುಕೊಂಡ ಪರಿಣಾಮಕಾರಿ ಉಪಾಯವೇ ನಮ್ಮ ಧರ್ಮದ ಹೆಗ್ಗಳಿಕೆ ಮತ್ತು ಉತ್ಕೃಷ್ಟತೆಯನ್ನು ಪ್ರತಿ ಮನಸ್ಸಿಗೂ ತಲುಪಿಸುವುದು. ಆದರೆ ದುರಂತವೆಂದರೆ ನಮ್ಮಲ್ಲಿ ಶಿಕ್ಷಣ ಸಂಸ್ಥೆಗಳನ್ನು ‘ಧರ್ಮ’ ಎಂಬ ಮೌಲ್ಯದಿಂದ ಮುಕ್ತಿಗೊಳಿಸಲಾಯಿತು. ರಾಷ್ಟ್ರೀಯ ಅಸ್ಮಿತೆಯ ಭದ್ರ ಬುನಾದಿಯ ಮೇಲೆ ನಿರ್ವಣವಾಗಬೇಕಿದ್ದ ರಾಷ್ಟ್ರಾಭಿವೃದ್ಧಿ ಯಾವುದೇ ಇಂಬು ಸಿಗದೇ ವೇಗವನ್ನು ಕಳೆದುಕೊಂಡಿತು.
ಅಷ್ಟೇ ಅಲ್ಲ ಯಾವುದೋ ಸ್ಮೃಯಲ್ಲಿನ ಒಂದೆರಡು ವಾಕ್ಯಗಳನ್ನು ‘ಧರ್ಮ’ ಎಂದು ಪ್ರತಿಬಿಂಬಿಸಿ ಸಮಾಜದ ವಿವಿಧ ವರ್ಗಗಳಲ್ಲಿ ದ್ವೇಷ, ಮಾತ್ಸರ್ಯಗಳನ್ನು ಬೆಳೆಸಿದ್ದು ಈ ಕುತಂತ್ರದ ಇನ್ನೊಂದು ರೂಪ. ಆರ್ಯ-ದ್ರಾವಿಡ, ಮೇಲ್ವರ್ಗ-ಕೆಳವರ್ಗಗಳೆಂಬ ಭ್ರಮಾತ್ಮಕ ವಿಭಜನೆಗಳನ್ನು ನಿರಂತರ ಪೋಷಿಸಿಕೊಂಡು ಪ್ರತಿಭೆಗಳಿಗೆ ಅವಕಾಶವೇ ಇಲ್ಲದಂತೆ, ಅವೆಲ್ಲಾ ಕಾಲು ಕೀಳುವಂತೆ ಮಾಡಿದ್ದೇ ಇದು. ಅಮೆರಿಕಾ, ಇಂಗ್ಲೆಂಡ್ಗಳಂಥ ಮುಂಚೂಣಿ ರಾಷ್ಟ್ರಗಳ ನಾಯಕರಾಗ ಹೊರಟವರು ಭಾರತೀಯರು. ಆದರೆ ಅವರು ಇಲ್ಲಿಂದ ತೆರಳಿದ್ದು ಅವಕಾಶ ವಂಚಿತ ರಾಗಿ. ಅಬ್ರಹಾಂ ಲಿಂಕನ್ ಮಾತು ನೆನಪಿಗೆ ಬರುತ್ತದೆ- ‘ಪ್ರಬಲರನ್ನು ಬಳಸಿಕೊಂಡೇ ದುರ್ಬಲರನ್ನು ಮೇಲೆತ್ತಬಹುದು.’ ಮೊದಲಿನಿಂದಲೂ ಭಾರತ ನಡೆದು ಬಂದದ್ದೇ ಹಾಗೆ. ಅದಕ್ಕೆ ಕೊಟ್ಟ ಹೆಸರೇ ‘ಯಜ್ಞ’ ಎಂದು.
ಕೃಷ್ಣನು ಗೀತೆಯಲ್ಲಿ ‘ಜಗತ್ತಿನ ಹಿತ ನಿಂತಿರುವುದು ಯಜ್ಞದ ಮೇಲೆ. ಆದ್ದರಿಂದ ಪ್ರತೀ ಗೃಹಸ್ಥನೂ ಯಜ್ಞವನ್ನು ಆಚರಿಸಲೇಬೇಕು’ ಎಂದು ಹೇಳುತ್ತಾನೆ. ಈ ಯಜ್ಞಕ್ಕೆ ಎರಡು ರೂಪ ಇದೆ. ಒಂದು ‘ತಪಸ್ಸು’ ಇನ್ನೊಂದು ‘ದಾನ . ‘ತಪಸ್ಸು ’ಎಂದರೆ ತಾನು ಶಕ್ತನಾಗುವುದು. ‘ದಾನ’ ಎಂದರೆ ಮತ್ತೊಬ್ಬರನ್ನು ಶಕ್ತರನ್ನಾಗಿಸುವುದು.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)