ಇತ್ತೀಚಿನ ವರ್ಷಗಳಲ್ಲಿ ಹಣ ಕೊಟ್ಟು ಆಡುವ ಆನ್ಲೈನ್ ಆಟಗಳು ಸದ್ದಿಲ್ಲದೆ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಯಾಗಿ ಬೆಳೆದಿವೆ. ಆಕರ್ಷಕ ಅಪ್ಲಿಕೇಶನ್ಗಳು ಮತ್ತು ಜಾಹೀರಾತುಗಳ ಹಿಂದೆ ಒಂದು ಕಂಟಕವೇ ಇದೆ. ಲಕ್ಷಾಂತರ ಯುವಜನರು ಈಗ ಗೇಮಿಂಗ್ ವ್ಯಸನದಲ್ಲಿ ಸಿಲುಕಿದ್ದಾರೆ. ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ದೇಶದ ಡಿಜಿಟಲ್ ವ್ಯವಸ್ಥೆಯನ್ನು ವಂಚಕರು ಮತ್ತು ಭಯೋತ್ಪಾದಕ ಸಂಘಟನೆಗಳು ಕೂಡ ಬಳಸಿಕೊಳ್ಳುತ್ತಿವೆ.
ಎಚ್ಚರಿಕೆಯ ಕರೆಗಂಟೆ: 2025-26ರ ಮೊದಲ 4 ತಿಂಗಳಲ್ಲಿ, ಡಿಜಿಟಲ್ ಆಟಗಳಿಗಾಗಿ ಜನರು ತಿಂಗಳಿಗೆ ಸರಾಸರಿ 10,000 ಕೋಟಿ ರೂ. ಹಣವನ್ನು ಯುಪಿಐ ಮೂಲಕ ಪಾವತಿಸಿದ್ದಾರೆ. ಏಪ್ರಿಲ್ ಮತ್ತು ಜುಲೈ ನಡುವೆ, ಆನ್ಲೈನ್ ಆಟಗಳಿಗೆ 40,992 ಕೋಟಿ ರೂ. ಪಾವತಿಸಲಾಗಿದೆ. ಅಂದರೆ ಗ್ರಾಹಕರಿಂದ ವರ್ತಕರಿಗೆ ಮಾಡುವ ಯುಪಿಐ ವಹಿವಾಟುಗಳಲ್ಲಿ ಇದರ ಪ್ರಮಾಣ ಶೇ. 1.5ರಷ್ಟಿದೆ. ಒಟ್ಟಾರೆಯಾಗಿ, ಭಾರತದ ಆನ್ಲೈನ್ ಗೇಮಿಂಗ್ ಮಾರುಕಟ್ಟೆ ಈಗಾಗಲೇ 33,000 ಕೋಟಿ ರೂ.ಗಳಷ್ಟಿದ್ದು, 2028ರ ವೇಳೆಗೆ 66,000 ಕೋಟಿ ರೂ.ಗೆ ತಲುಪುವ ನಿರೀಕ್ಷೆ ಇದೆ. ಅಂದರೆ ಈ ಮೊತ್ತ ದುಪ್ಪಟ್ಟಾಗಲಿದೆ (ಪಿಡಬ್ಲ್ಯೂಸಿ 2024).
ಇದು ಕೇವಲ ಮನರಂಜನೆಯ ವಿಷಯವಲ್ಲ. ಅಕ್ರಮ ಹಣ ವರ್ಗಾವಣೆಯ ದಂಧೆಗೆ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸಲು ಆನ್ಲೈನ್ ಗೇಮಿಂಗ್ ಪ್ಲಾಟ್ಫಾಮರ್್ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಹೇಳಿದೆ. ಸರ್ಕಾರದಿಂದ ಪರಿಶೀಲನೆಗೊಳಪಡದೆ ನಡೆಯುವ ಗೇಮಿಂಗ್ ಪೋರ್ಟಲ್ಗಳು ಅಪರಾಧ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿವೆ ಎಂದು ಹಣಕಾಸು ಸಂಸದೀಯ ಸ್ಥಾಯಿ ಸಮಿತಿ (2023) ಎಚ್ಚರಿಸಿದೆ. ಅನೇಕ ಪ್ಲಾಟ್ಫಾಮರ್್ಗಳು ದೇಶದ ಹೊರಗಿನಿಂದ ಕಾರ್ಯನಿರ್ವಹಿಸುತ್ತವೆ. ಇವು ಭಾರತದ ಕಾನೂನು ಜಾಲದಿಂದ ತಪ್ಪಿಸಿಕೊಳ್ಳುತ್ತವೆ. ತೆರಿಗೆಗಳನ್ನೂ ಪಾವತಿಸುವುದಿಲ್ಲ. ಜೊತೆಗೆ ಕುಟುಂಬಗಳನ್ನು ವಂಚನೆಯ ಜಾಲಕ್ಕೆ ತಳ್ಳುತ್ತಿವೆ.
ಈ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2025ರ ಆಗಸ್ಟ್ 20ರಂದು ಸಂಸತ್ತಿನಲ್ಲಿ ‘ಆನ್ಲೈನ್ ಗೇಮಿಂಗ್ ಪ್ರಮೋಶನ್ ಮತ್ತು ರೆಗ್ಯುಲೇಶನ್ ಮಸೂದೆ 2025’ ಮಂಡಿಸಿದೆ. ಇದು ಆನ್ಲೈನ್ ಗೇಮಿಂಗ್ ವ್ಯವಸ್ಥೆಯನ್ನು ನಿಯಂತ್ರಿಸುವ, ಮೇಲ್ವಿಚಾರಣೆ ಮಾಡುವ ಮತ್ತು ಸುಧಾರಿಸುವ ದಿಸೆಯಲ್ಲಿ ದೊಡ್ಡ ಮೈಲಿಗಲ್ಲು.
ಮಸೂದೆಯಲ್ಲಿರುವ ಅಂಶಗಳು ಮತ್ತು ಮಹತ್ವ: ? ಇ-ಕ್ರೀಡೆ, ಸೋಶಿಯಲ್ ಗೇಮಿಂಗ್, ಶೈಕ್ಷಣಿಕ ಗೇಮ್ ಹಣ ಆಧಾರಿತ ಗೇಮ್ಳನ್ನು ನಿಯಂತ್ರಿಸಲು ರಾಷ್ಟ್ರೀಯ ಗೇಮಿಂಗ್ ನಿಯಂತ್ರಣ ಪ್ರಾಧಿಕಾರ ಸ್ಥಾಪನೆ. ? ಆವಿಷ್ಕಾರ ಹಾಗೂ ಡಿಜಿಟಲ್ ಮನರಂಜನೆಯ ಹೆಸರಿನಲ್ಲಿ, ಜನರನ್ನು ಆರ್ಥಿಕವಾಗಿ ಶೋಷಿಸುವ ಆನ್ಲೈನ್ ಗೇಮ್ಳ ನಿಷೇಧ. ? ಗ್ರಾಹಕರ ರಕ್ಷಣೆ, ಖಾಸಗಿತನದ ರಕ್ಷಣೆ. ಜೊತೆಗೆ ದೇಶದ ಹೊರಗಿನಿಂದ ನಡೆಯುವ ವಂಚನೆ ಹಾಗೂ ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡುವುದಕ್ಕೆ ತಡೆ. ? ಸರ್ಕಾರದ ನೀತಿ-ನಿಯಮ ಮೀರುವ ಪ್ಲಾಟ್ಫಾಮರ್್ಗಳ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ವಿದೇಶಗಳಲ್ಲಿರುವ ಪ್ಲಾಟ್ಫಾಮರ್್ಗಳ ವಿರುದ್ಧವೂ ಕ್ರಮ ವಹಿಸಲು ಸ್ಪಷ್ಟವಾದ ಕಾನೂನು ಬಲ.
ನಿರಂತರ ಸುಧಾರಣೆ: ಈ ಮಸೂದೆ 21ನೇ ಶತಮಾನದಲ್ಲಿ ಮಾನವೀಯತೆಯ ದೃಷ್ಟಿಯಲ್ಲಿ ಕಾನೂನು ಸುಧಾರಣೆಗಳನ್ನು ತರುವ ಮೋದಿ ಸರ್ಕಾರದ ಕ್ರಮಗಳ ಭಾಗವಾಗಿದೆ. ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್ ಕಾನೂನಿನ ಮೂಲಕ ಘನತೆ ನೀಡಿದಂತೆ, ದತ್ತಾಂಶ ಸಂರಕ್ಷಣಾ ಕಾಯ್ದೆಯು ನಾಗರಿಕರ ಡಿಜಿಟಲ್ ಹಕ್ಕುಗಳನ್ನು ರಕ್ಷಿಸಿದಂತೆ, ಕ್ರಿಪ್ಟೋ ನಿಯಂತ್ರಣ ಕ್ರಮಗಳು ಭಾರತದ ಹಣಕಾಸು ವ್ಯವಸ್ಥೆಯನ್ನು ರಕ್ಷಿಸಿದಂತೆ, ಈ ಆನ್ಲೈನ್ ಗೇಮಿಂಗ್ ಮಸೂದೆ ಕೂಡ ಬಂದಿದೆ. ತಂತ್ರಜ್ಞಾನಗಳು ಕುಟುಂಬಗಳಿಗೆ ಒಳಿತು ತರಬೇಕು, ಸಂಕಷ್ಟ ತರಬಾರದು ಎಂಬ ಸಂದೇಶವನ್ನು ಈ ಮಸೂದೆ ನೀಡುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಆನ್ಲೈನ್ ಗೇಮಿಂಗ್ ಅನ್ನು ಈ ಕಾನೂನು ವ್ಯಸನ, ಶೋಷಣೆ ಮತ್ತು ಅಪಾಯ ಎಂಬುದಕ್ಕೆ ಬದಲಾಗಿ, ಹೊಣೆಗಾರಿಕೆ, ಸುರಕ್ಷತೆ ಮತ್ತು ನಾವೀನ್ಯತೆಯ ಕೇಂದ್ರವಾಗಿ ಪರಿವರ್ತಿಸುತ್ತದೆ.
ದೇಶದ ಆರ್ಥಿಕತೆಯ ಮೇಲೆ ಮಾತ್ರವಲ್ಲದೆ, ಸಾಮಾಜಿಕ ವ್ಯವಸ್ಥೆ ಮತ್ತು ರಾಷ್ಟ್ರೀಯ ಭದ್ರತೆಯ ಮೇಲೂ ಪರಿಣಾಮ ಬೀರುವ ಸಮಸ್ಯೆಯನ್ನು ಪರಿಹರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ತನ್ನ ದೂರದೃಷ್ಟಿಯನ್ನು ತೋರಿಸಿದೆ. ಈ ಸುಧಾರಣೆಯನ್ನು ಎಲ್ಲರೂ ಬೆಂಬಲಿಸಿ ಭಾರತದ ಯುವಜನರು ಮತ್ತು ಕುಟುಂಬಗಳನ್ನು ರಕ್ಷಿಸಲು ಕೈ ಜೋಡಿಸಬೇಕಿದೆ. (ಲೇಖಕರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರು)