| ಗಂಗಾಧರ್ ಬೈರಾಪಟ್ಟಣ ರಾಮನಗರ
ಬೆಂಗಳೂರು - ಮೈಸೂರು ನಡುವೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 275ರ ಕಾಮಗಾರಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೊಸ ಶಕ್ತಿ ತುಂಬಿದೆ. ಕರೊನಾದಿಂದಾಗಿ ಜಿಲ್ಲೆಯ ಪಾತಾಳಕ್ಕೆ ಇಳಿದಿದ್ದ ರಿಯಲ್ ಎಸ್ಟೇಟ್ ಉದ್ಯಮ ಇದೀಗ ಯಥಾಸ್ಥಿತಿಗೆ ಮರಳುತ್ತಿದೆ.
ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲೇ ಇರುವ ರಾಮನಗರ ಜಿಲ್ಲೆ ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಿಗೆ ಆಶಾಕಿರಣವಾಗಿರುವ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ಗೆ ಪೂರಕ ವಾತಾವರಣವಿದ್ದು, ಬೆಂಗಳೂರು, ಮೈಸೂರು ಹೊರತುಪಡಿಸಿ ಬೇರೆ ಎಲ್ಲಿಗೆ ಹೋಗಬೇಕು ಎನ್ನುವ ಪ್ರಶ್ನೆ ಬಂದಾಗ ರಾಮನಗರ ನೆನಪಾಗುತ್ತದೆ. ಇದರ ಜತೆಗೆ ಈಗಾಗಲೇ ಬೃಹತ್ ಕೈಗಾರಿಕೆಗಳ ಮೂಲಕ ವಿಶ್ವ ಭೂಪಟದಲ್ಲಿ ಸ್ಥಾನ ಪಡೆದುಕೊಂಡಿರುವ ಬಿಡದಿ ಹಾಗೂ ರೇಷ್ಮೆ ನಗರಿ ರಾಮನಗರ, ಗೊಂಬೆನಗರಿ ಚನ್ನಪಟ್ಟಣ ನಡುವೆ ಬೈಪಾಸ್ ನಿರ್ವಣವಾಗುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆ ಭವಿಷ್ಯದಲ್ಲಿ ಹೆಚ್ಚಿನ ಲಾಭ ತಂದುಕೊಡಲಿದೆ.
ಬಿಡದಿಯಲ್ಲಿ 7 ಕಿ.ಮೀ. ಬೈಪಾಸ್ ರಸ್ತೆ ಹಾಗೂ ರಾಮನಗರ- ಚನ್ನಪಟ್ಟಣ ಅವಳಿ ನಗರಗಳ ನಡುವೆ 23 ಕಿ.ಮೀ. ಬೈಪಾಸ್ ರಸ್ತೆ ನಿರ್ವಣವಾಗುತ್ತಿದೆ. ಈ ಎರಡೂ ಬೈಪಾಸ್ಗಳು ಪಾಕೃತಿಕ ಸೊಬಗಿನ ನಡುವೆಯೇ ಹಾದು ಹೋಗುವುದರಿಂದ ಈ ಭಾಗದಲ್ಲಿ ತನ್ನದೇ ಆದ ಸುಂದರ ಮನೆ ಕಟ್ಟಿಕೊಳ್ಳಬೇಕು ಎನ್ನುವ ಆಸೆ ಉಂಟಾಗುವುದು ಖಂಡಿತ. ಇದರ ಜತೆಗೆ ಈ ಎರಡೂ ನಗರಗಳು ಅತ್ತ ಐಟಿ ಹಬ್ ಬೆಂಗಳೂರು-ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಮಧ್ಯದಲ್ಲಿ ಇರುವುದರಿಂದ ಈ ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬಂಡವಾಳ ಹೂಡಿಕೆ ಭವಿಷ್ಯದ ಹಿತದೃಷ್ಟಿಯಿಂದ ಉತ್ತಮ ನಿರ್ಧಾರವಾಗುವುದು ಖಂಡಿತ.
ಭೂಮಿಗೆ ಚಿನ್ನದ ಬೆಲೆ
ಬೆಂಗಳೂರು - ಮೈಸೂರು ನಡುವಿನ ಭೂಮಿಗೆ ಹಿಂದಿನಿಂದಲೂ ಭಾರಿ ಬೇಡಿಕೆ ಇದೆ. ಕರೊನಾ ನಂತರದ ಪರಿಸ್ಥಿತಿಯಲ್ಲಿ ರಿಯಲ್ ಎಸ್ಟೇಟ್ ನೆಲಕಚ್ಚಿದ ಪರಿಣಾಮ, ಕೃಷಿ ಭೂಮಿ ಬೆಲೆಯಲ್ಲಿ ಇಳಿಕೆಯಾಗಿತ್ತು. ಆದರೆ, ಈಗ ಮತ್ತೆ ಏರಿಕೆ ಹಾದಿ ಹಿಡಿದಿದ್ದು, ಭೂಮಿಗೆ ಚಿನ್ನದ ಬೆಲೆ ಬಂದಿದೆ.
ಬೆಂಗಳೂರು - ಮೈಸೂರು ಹೆದ್ದಾರಿ ನಿರ್ಮಾಣ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪೂರಕವಾಗಿದೆ. ಇಲ್ಲಿ ಬೈಪಾಸ್ಗಳನ್ನು ನಿರ್ವಿುಸುತ್ತಿರುವುದರಿಂದ ನಗರ ಪ್ರದೇಶಗಳ ವ್ಯಾಪ್ತಿ ಹೆಚ್ಚುತ್ತಿದ್ದು, ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಖರೀದಿದಾರಿಗೆ ಉತ್ತಮ ಅವಕಾಶವನ್ನು ಕಲ್ಪಿಸುತ್ತದೆ. | ಎಚ್.ಎಸ್.ಮುರಳೀಧರ್ ಅಧ್ಯಕ್ಷರು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ
ಹೈವೆ ವಿಶೇಷವೇನು?