ಅಂಕಣ

ಅಪ್ಪನೆಂಬ ಅದ್ಭುತ| ನನ್ನನ್ನು ಸೈನಿಕನಾಗಿ ಮಾಡಿದ ಅಪ್ಪ

ಮಕ್ಕಳ ಪಾಲಿನ ಮೊದಲ ಹೀರೋ ಎಂದರೆ ಅಪ್ಪನೇ. ಬದುಕಿನ ಪ್ರತಿ ಹಂತದಲ್ಲಿಯೂ, ಹೆಜ್ಜೆ ಹೆಜ್ಜೆಗೂ ಮಕ್ಕಳನ್ನು ಕಣ್​ರೆಪ್ಪೆಯಂತೆ ಕಾಯುವ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ಸಲುವಾಗಿ ಬಂದಿದೆ ಫಾದರ್ಸ್ ಡೇ. ಅಪ್ಪನ ಜತೆಗಿನ ನೆನಪುಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ್ದ ಕರೆಗೆ 11 ಸಾವಿರಕ್ಕೂ ಅಧಿಕ ಪತ್ರಗಳು ನಮಗೆ ಬಂದಿವೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ನಾನಿಂದು ಭಾರತೀಯ ಸೇನೆಗೆ ಸೇರಿ, ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ನನ್ನಪ್ಪ ನನ್ನಲ್ಲಿ ಬಿತ್ತಿರುವ ಶಿಸ್ತು, ದೇಶಪ್ರೇಮ. ದಿನವೂ ನನ್ನನ್ನು ಶಾಲೆಯಿಂದ ಎತ್ತಿಕೊಂಡು ಬರುತ್ತಿದ್ದ ಅಪ್ಪ. ಅದೊಂದು ದಿನ ಜೋರಾದ ಮಳೆಬಂದಾಗ ತನ್ನ ರುಮಾಲನ್ನು ನನಗೆ ಹೊದಿಸಿ, ನಾನು ತೊಟ್ಟ ಬನಿಯನ್​ನಿಂದ ನನ್ನ ಪುಸ್ತಕಗಳನ್ನು ರಕ್ಷಣೆ ಮಾಡಿದ ನೆನಪು ಇನ್ನೂ ನನ್ನ ಕಣ್ಣಮುಂದೆ ಇದೆ. ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದರೂ ಅದಕ್ಕೆ ಬೇಸರಿಸದೇ ಸದಾ ನನ್ನನ್ನು ಹುರಿದುಂಬಿಸುತ್ತಿದ್ದ ಅವರ ಪ್ರೀತಿಯಿಂದಲೇ ಇಂದು ಈ ಮಟ್ಟಕ್ಕೆ ಬೆಳೆದುನಿಂತಿದ್ದೇನೆ. | ಮಂಜಪ್ಪಾ ಆರೂಡಪ್ಪಾ ಕಾತರಕಿ ಭಾರತೀಯ ಬಿಆರ್​ಒ ಆರ್ವಿು, ಮನಾಲಿ, ಹಿಮಾಚಲ ಪ್ರದೇಶ