ಅಂಕಣ

ಅಪ್ಪನೆಂಬ ಅದ್ಭುತ| ನಿಮಗೆ ಅರ್ಪಿತ ಕವನ ಪುಷ್ಪ

ಮಕ್ಕಳ ಪಾಲಿನ ಮೊದಲ ಹೀರೋ ಎಂದರೆ ಅಪ್ಪನೇ. ಬದುಕಿನ ಪ್ರತಿ ಹಂತದಲ್ಲಿಯೂ, ಹೆಜ್ಜೆ ಹೆಜ್ಜೆಗೂ ಮಕ್ಕಳನ್ನು ಕಣ್​ರೆಪ್ಪೆಯಂತೆ ಕಾಯುವ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ಸಲುವಾಗಿ ಬಂದಿದೆ ಫಾದರ್ಸ್ ಡೇ. ಅಪ್ಪನ ಜತೆಗಿನ ನೆನಪುಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ್ದ ಕರೆಗೆ 11 ಸಾವಿರಕ್ಕೂ ಅಧಿಕ ಪತ್ರಗಳು ನಮಗೆ ಬಂದಿವೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ಸಿ.ಎಂ.ಉದಾಸಿ

ನೀವು ಹೆಸರು ವಾಸಿ

ನಿಮ್ಮ ಕಾಯಕ ಶಿವಕಾಶಿ

ನಿಮ್ಮ ಮಾತಿಗೆ ಮನವೇ ಸಾಕ್ಷಿ

ಎತ್ತಣ ಮಾಮರ ಎತ್ತಣ ಕೋಗಿಲೆ

ಎತ್ತಣ ಹರವಿ ಎತ್ತಣ ಹಾನಗಲ್

ಅಲ್ಲಿಂದ ಇಲ್ಲಿಗೆ ಬಂದು ನೆಲೆನಿಂತ

ಎತ್ತರೆತ್ತರಕೆ ಬೆಳೆದ ಭಾಗ್ಯವಂತ

ಸರಳ ಸಜ್ಜನಿಕೆಯ ಸಾಕಾರರೂಪದಿ

ಬದುಕನೇರಿಳಿತವನು ಎದುರಿಸಿದ ಧೀರ

ನಿರಾಡಂಬರದ ಬದುಕು: ನಿರಹಂಕಾರ ವ್ಯಕ್ತಿತ್ವ

ಸಮಾಜ, ಸಮುದಾಯದ ಸೇವೆಗೆ ಕಂಕಣಬದ್ಧ

| ಜಯಶ್ರೀ ಉದಾಸಿ ಬೆಂಗಳೂರು