ಅಂಕಣ

ಹೊಸ ವಿಧಾನದಲ್ಲಿ ನಡೆಯಲಿ ಪರೀಕ್ಷೆ

ಕೋವಿಡ್​ ಮಹಾಮಾರಿಯಿಂದ ಬದುಕಿನ ಎಲ್ಲ ೇತ್ರಗಳ ಚಿತ್ರಣವೇ ಬದಲಾಗಿದ್ದು, ಇದಕ್ಕೆ ಶಿಣ ೇತ್ರವೂ ಹೊರತಾಗಿಲ್ಲ. ಈ ವರ್ಷದ ಎಸ್ಸೆಸ್ಸೆಲ್ಸಿ ಪರೀೆಗಳು ಮುಂದೂಡಲ್ಪಟ್ಟಿವೆ. ಸರ್ಕಾರ ಕೋವಿಡ್​ ಕಡಿಮೆ ಆದ ನಂತರ ವೇಳಾಪಟ್ಟಿ ಪ್ರಕಟಿಸಲು ಮುಂದಾಗಿದೆ. ಆದರೆ ಈ ದುರಿತ ಕಾಲದಲ್ಲಿ ಹೊಸ ರೀತಿಯ ಕಲಿಕೆಯ ಸಂಶೋಧನೆಗಳು ಅನಿವಾರ್ಯವಾದ ಹಿನ್ನೆಲೆಯಲ್ಲಿ ಪರೀೆಗಳೂ ಹೊಸ ರೀತಿಗೆ ತೆರೆದುಕೊಳ್ಳಬೇಕಾಗಿದೆ. ಈ ವರ್ಷ ಹತ್ತನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದೇ ಜನವರಿ ತಿಂಗಳಿಂದ. ಅದೂ ಮೂರು ತಿಂಗಳು ಮಾತ್ರ. ಅದಕ್ಕೂ ಪೂರ್ವದಲ್ಲಿನ ವಿದ್ಯಾಗಮ ಹಾಗೂ ಸಂವೇದ ತರಗತಿಗಳು ಅಷ್ಟೇನೂ ಪರಿಣಾಮಕಾರಿಯಾಗಿಲ್ಲ ಎಂಬುದು ವಾಸ್ತವ.

ಮತ್ತೆ ಈಗ ಶಾಲಾ ವಾತಾವರಣದಿಂದ ಹೊರಗೆ ಹೋಗಿ ಎರಡು ತಿಂಗಳು ಸಮೀಪಿಸುತ್ತಿವೆ. ಕಳೆದ ವರ್ಷ ಯಶಸ್ವಿಯಾಗಿ ಪರೀೆ ನಡೆಸಿದ್ದರೂ ಆ ಶೆಣಿಕ ವರ್ಷ ವಿದ್ಯಾರ್ಥಿಗಳು ಪೂರ್ಣ ಒಂದು ವರ್ಷ ಶಾಲಾ ವಾತಾವರಣದಲ್ಲಿ ಇದ್ದರು ಎನ್ನುವುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಈ ವರ್ಷ ಆಯಾ ಶಾಲೆಯಲ್ಲಿಯೇ ಮೌಲ್ಯಾಂಕನ ಮಾದರಿಯಲ್ಲಿ ಒಂದೇ ದಿನ ಪರೀೆ ನಡೆಸಿ ಲಿತಾಂಶ ಪ್ರಕಟಿಸುವುದು ಉತ್ತಮ. ಸರ್ಕಾರ ಪರೀೆ ನಡೆಸುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಸರ್ವ ಸಮ್ಮತ ತೀರ್ಮಾನ ತೆಗೆದುಕೊಂಡು ಮುಂದಿನ ಶೆಣಿಕ ವರ್ಷ ಪ್ರಾರಂಭಿಸಲು ಯೋಚಿಸಬೇಕಾಗಿದೆ.

| ಶಿವಬಸವ ಎಂ. ಹಾವೇರಿ