ಅಸತ್ಯವನ್ನು ಸತ್ಯವೆಂದು ಭಾವಿಸಿದಾಗ ದುಃಖದ ಪರಂಪರೆ ಕಟ್ಟಿಟ್ಟ ಬುತ್ತಿ. ಇದಕ್ಕೆ ಪರಿಹಾರವೇ ಜ್ಞಾನಿ ಆಗುವುದು. ಉಪನಿಷತ್ ಸಾರವೇ ಆಗಿರುವ "ತತ್ವಮಸಿ', "ಅಹಂ ಬ್ರಹ್ಮಾಸ್ಮಿ', "ಅಯಮಾತ್ಮ ಬ್ರಹ್ಮ', "ಪ್ರಾನಂ ಬ್ರಹ್ಮ' ಈ ಮಹಾವಾಕ್ಯಗಳ ಶ್ರವಣ, ಮನನ ಮತ್ತು ಅನುಷ್ಠಾನ (ನಿಧಿದ್ಯಾಸನ) ಗಳ ಮೂಲಕ ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿ "ನಾನು ಯಾರು' ಎಂಬುದನ್ನು ಸಾಾತ್ಕರಿಸಿಕೊಳ್ಳುವುದು.
ಕ್ರಿ.ಶ 788ರಲ್ಲಿ ಕೇರಳದ ಕಾಲಟಿಯಲ್ಲಿ ಜನನ. ಎರಡೇ ವರ್ಷಕ್ಕೆ ಅರಾಭ್ಯಾಸ; ಐದನೇ ವರ್ಷಕ್ಕೆ ಉಪನಯನ; ಏಳನೇ ವರ್ಷಕ್ಕೆ ನಾಲ್ಕು ವೇದ, ಆರು ವೇದಾಂಗಗಳು, ಪುರಾಣ ಮತ್ತಿತರ ಪ್ರಚಲಿತ ಶಾಸ್ತ್ರಗಳ ಪರಿಪೂರ್ಣ ಅಧ್ಯಯನ. ಈ ಬಾಲಕನ ಅಭೂತಪೂರ್ವ ಬುದ್ಧಿಮತ್ತೆ, ದಂಗು ಬಡಿಸುವ ಶಾಸ್ತ್ರ ಪಾಂಡಿತ್ಯ ಇವುಗಳನ್ನು ಕೇಳಿ ಅಚ್ಚರಿಗೊಂಡ ನಾಡಿನ ದೊರೆ ಸಕಲ ರಾಜಮರ್ಯಾದೆಗಳೊಂದಿಗೆ ಶಂಕರರ ಸ್ವಗೃಹಕ್ಕೇ ಬಂದು ತಾನು ರಚಿಸಿದ್ದ ಮೂರು ನಾಟಕಗಳನ್ನು ಅವರ ಮುಂದೆ ವಾಚಿಸಿ ಒಪ್ಪಿಗೆಯ ಮುದ್ರೆ ಪಡೆದು "ಧನ್ಯೋಸ್ಮಿ' ಎನ್ನುತ್ತಾನೆ. ಬಾಲಕನ ಅಲೌಕಿಕ ತೇಜಸ್ಸು, ವಿದ್ವತ್ ಪ್ರಭೆ, ವಯಸ್ಸಿಗೆ ಮೀರಿದ ಪ್ರಬುದ್ಧ ವ್ಯಕ್ತಿತ್ವಕ್ಕೆ ಮಾರು ಹೋಗಿ ಅವರಲ್ಲಿ ಸ್ವಯಂ ಶಿವನನ್ನೇ ಕಂಡು ಅವರಂಥ ಪುತ್ರನೊಬ್ಬ ತನಗೆ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿ ಪುತ್ರರತ್ನವನ್ನೂ ಪಡೆಯುತ್ತಾನೆ. ಇನ್ನೂ ಎಂಟು ತುಂಬದ ಶಂಕರನನ್ನು ಕಂಡ ಸುತ್ತಲಿನ ವಿದ್ವಾಂಸರು ಹೇಳುತ್ತಿದ್ದುದು& "ಈತನು ವೇದಗಳಲ್ಲಿ ಬ್ರಹ್ಮನಿಗೂ, ಷಡಂಗಗಳಲ್ಲಿ ಗಾರ್ಗ್ಯನಿಗೂ, ಪೌರಾಣಿಕರಲ್ಲಿ ಬೃಹಸ್ಪತಿಗೂ, ಕರ್ಮಕಾಂಡದಲ್ಲಿ ಜೈಮಿನಿಗೂ, ಾನಕಾಂಡದಲ್ಲಿ ವ್ಯಾಸನಿಗೂ ಸಮನಾಗಿದ್ದಾನೆ' ಎಂದು. ವಿಚಿತ್ರ ಸನ್ನಿವೇಶವೊಂದರಲ್ಲಿ ತಾಯಿಯಿಂದ ಸಂನ್ಯಾಸಕ್ಕೆ ಅಪ್ಪಣೆ ಪಡೆದ ಶಂಕರರಿಗೆ ಮುಂದಿನ ದಾರಿ ಗೋಚರಿಸಿದ್ದು ನರ್ಮದೆಯ ತಟದೆಡೆಗೆ!
ಗೋವಿಂದ ಭಗವತ್ಪಾದರಿಂದ ಸಂನ್ಯಾಸ ಪಡೆದ ಶಂಕರರು ಇದೇ ಸಂದರ್ಭದಲ್ಲಿ ಗುರುಗಳಿಗೆ ಒಂದು ದಿನ ಬಿನ್ನವಿಸಿದ್ದು ತಾವು ಉಪನಿಷತ್ತುಗಳಿಗೆ ಭಾಷ್ಯ ಬರೆಯಲು ಅನುಮತಿ ನೀಡಬೇಕೆಂದು. ಹಾಲುಗೆನ್ನೆ ಬಲಿಯದ, ಹತ್ತು ಹನ್ನೆರಡರ ಶಿಷ್ಯನ ಉತ್ಸಾಹಕ್ಕೆ ಭಂಗ ತರಲಿಚ್ಛಿಸದ ಗುರುಗಳು ಕೊಟ್ಟ ಉತ್ತರ; "ಅದು ಬಹು ಕಷ್ಟದ ಕೆಲಸ, ಬೇಕಿದ್ದರೆ ವಿಷ್ಣು ಸಹಸ್ರನಾಮಕ್ಕೆ ಭಾಷ್ಯ ಬರೆ'. ಒಂದು ರಾತ್ರಿಯಲ್ಲಿ ಬರೆದು ಮುಗಿಸಿದ ಆ ಭಾಷ್ಯದಲ್ಲಿ ಗುರುಗಳು ಕಂಡಿದ್ದು ತಾವೇ ಅರಿಯದಿದ್ದ ಏಷ್ಟೋ ಅದ್ಭುತಗಳನ್ನು. ಅಸಾಧಾರಣ ಅರ್ಥಗಳನ್ನು! ಆನಂದತುಂದಿಲರಾದ ಗುರುಗಳು ಉದ್ಗರಿಸುತ್ತಾರೆ, "ಶಂಕರ ನೀನು ಏನನ್ನು ಬೇಕಾದರೂ ಬರೆ. ಉಪನಿಷತ್ತುಗಳು ನಿನ್ನ ಭಾಷ್ಯಗಳಿಂದ ಹೊಸ ಜೀವವನ್ನೇ ಪಡೆಯಲಿವೆ'. ಗುರುವಿನ ಅಣತಿಯನ್ನು ಹೊತ್ತು ಶಂಕರರು ನಡೆದಿದ್ದು ವಾರಾಣಸಿಯ ಕಡೆಗೆ. ಹಿಮಾಲಯದ ತಪ್ಪಲಲ್ಲಿರುವ ಬದರೀಕಾಶ್ರಮದಲ್ಲಿ ನಾಲ್ಕು ವರ್ಷಗಳ ಕಾಲ ನೆಲೆಸಿ ಪ್ರಮುಖ ಉಪನಿಷತ್ತುಗಳಾದ ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ , ತೈತ್ತರಿಯ, ಐತರೇಯ, ಛಾಂದೋಗ್ಯ, ಬೃಹದಾರಣ್ಯಕ, ಶ್ವೇತಾಶ್ವತರ ಮುಂತಾದ ಉಪನಿಷತ್ತುಗಳಿಗೆ ಮತ್ತು ಬಾದರಾಯಣರೇ ರಚಿಸಿದ್ದ ಬ್ರಹ್ಮಸೂತ್ರಗಳಿಗೆ ಮತ್ತು ಭಗವದ್ಗೀತೆಗೆ ಭಾಷ್ಯಗಳನ್ನು ರಚಿಸಿದ್ದಲ್ಲದೆ ಉಪದೇಶ ಸಾಹಸ್ರಿ, ದಣಾಮೂರ್ತಿಸ್ತೋತ್ರ, ದೃಗ್ ದೃಶ್ಯ ವಿವೇಕ ಇತ್ಯಾದಿ ಸುಮಾರು 100ಕ್ಕೂ ಮೇಲ್ಪಟ್ಟು ಸಾಹಿತ್ಯರತ್ನಗಳನ್ನೇ ಸೃಷ್ಟಿಸಿದರು. ಇದನ್ನು ಪ್ರಸ್ತಾಪಿಸಿ ಮುಂದೆ ತಮ್ಮ ಸುಪ್ರಸಿದ್ಧ ಮದ್ರಾಸ್ ಭಾಷಣಗಳಲ್ಲಿ ಒಂದಾದ "ಭಾರತೀಯ ಸಂತ ಮಹಾಪುರುಷರು' ಎಂಬಲ್ಲಿ ಸ್ವಾಮಿ ವಿವೇಕಾನಂದರು ಹೇಳುತ್ತಾರೆ, "ಇವರೇ ಅದ್ಭುತ ಶಂಕರಾಚಾರ್ಯರು, ಈ ಹದಿನಾರು ವರ್ಷದ ಯುವಕನ ಗ್ರಂಥಗಳು ಆಧುನಿಕ ಪ್ರಪಂಚದ ಅದ್ಭುತ, ವಿಸ್ಮಯ. ಹಾಗೆಯೇ ಹುಡುಗನು ಕೂಡ'.
ಮಹಾನ್ ಚಿಂತಕರು, ಮೇಧಾವಿಗಳು ಆದ ವಾಚಸ್ಪತಿಮಿಶ್ರರು ತಮ್ಮ ಭಾಮತಿ ಗ್ರಂಥದಲ್ಲಿ ಶಾಂಕರ ಭಾಷ್ಯಗಳ ಬಗ್ಗೆ ಹೀಗೆ ಉದ್ಗರಿಸುತ್ತಾರೆ& "ನತ್ವಾ ವಿಶುದ್ಧ ವಿಾನಂ ಶಂಕರಂ ಕರುಣಾನಿಧಿಂ> ಬಾಹ್ಯಂ ಪ್ರಸನ್ನ ಗಂಭೀರಂ ತತಣೀತಂ ವಿಭಜ್ಯತೇ>>'. ಜಗತ್ತಿನಾದ್ಯಂತ ಪೂರ್ವಪಶ್ಚಿಮವೆನ್ನದೇ ವಿದ್ವನ್ಮಣಿಗಳ ಮನಸೂರೆಗೊಳ್ಳುವ ಆಕರ್ಷಣೆ ಮತ್ತು ಆಯಸ್ಕಾಂತೀಯ ಶಕ್ತಿ ಇವುಗಳಿಗಿವೆ.
ಶಂಕರರು ಬೋಧಿಸಿದ್ದು ವೇದಕಾಲದಿಂದಲೂ ಪ್ರಚಲಿತವಿರುವ ಅದ್ವೆ ೃತ ಸಿದ್ಧಾಂತವನ್ನೇ. ಅದ್ವೆ ೃತ ಎಂದರೆ ಎರಡಲ್ಲದ್ದು. ಎರಡಿಲ್ಲದೇ ಕೇವಲ ಒಂದೇ ಇರಬೇಕು ಎಂದರೆ ಗಣಿತದ ವಿದ್ಯಾರ್ಥಿಗಳಾದ ನಮಗೆಲ್ಲ ಗೊತ್ತು. ಅನಾದಿಯಿಂದ ಇರುವ ಏಕಮೇವ ವಸ್ತು ಬ್ರಹ್ಮಅನಂತ (infinity)ವೇ. ಬ್ರಹ್ಮನನ್ನು ಕುರಿತು ಹೇಳುವ ತೈತ್ತೀರಿಯ ಉಪನಿಷತ್ "ಬ್ರಹ್ಮವೇ ಸತ್ಯ ಅದೇ ಾನ ಅದೇ ಅನಂತ' ಎಂದಿದೆ. ಸತ್ಯ ಅನಾದಿ ಹಾಗೂ ಅನಂತ. ಆದ್ದರಿಂದ ಬ್ರಹ್ಮವೂ ಅನಾದಿ ಅರ್ಥಾತ್ ಎಲ್ಲಕ್ಕೂ ಮೂಲ. ಸದೇವ ಸೋಮ್ಯ ಇದಮಗ್ರ ಆಸಿತ್; ಏಕಮೇವ ಅದ್ವೀತಿಯಂ ಎನ್ನುತ್ತದೆ ಉಪನಿಷತ್. ಅರ್ಥಾತ್ ಸೋಮ್ಯನೇ ಪ್ರಾರಂಭದಲ್ಲಿ ಅದೇ ಇತ್ತು ಎರಡನೆಯದಕ್ಕೆ ಆಸ್ಪದವಿಲ್ಲದಂತೆ (ಏಕಂ ಏವ ಅದ್ವೀತಿಯಂ). ಹಾಗಾದರೆ ಈಗ ನಾವು ಕಾಣುತ್ತಿರುವ ಜಗತ್ತು? ತಾನೇ ತಾನಾಗಿರುವ ಜಗತ್ತು? ಇದಕ್ಕೆ ಉತ್ತರ ಅದು ಮಿಥ್ಯೆ! ಹಾಗೆಂದರೆ ಹೇಗೆ? ಪ್ರಪಂಚದ ಪ್ರತಿಯೊಬ್ಬರಿಗೂ ಪ್ರತಿನಿತ್ಯವೂ ಅನುಭವಕ್ಕೆ ಬರುತ್ತಿರುವ ಜಗತ್ತು ಮಿಥ್ಯೆಯೇ? ಶಂಕರರಿಗಿಂತಲೂ ಮುಂಚೆ ಬಂದ ವಿಾನವಾದಿಗಳೆಂಬ ಬೌದ್ಧಶಾಖೆಯವರೂ ಮಿಥ್ಯೆ ಎಂಬ ಅರ್ಥದಲ್ಲಿಯೇ ಇದನ್ನು ಸಮರ್ಥಿಸಿದ್ದರು. ಎಲ್ಲರ ಅನುಭವಕ್ಕೆ ಬಂದಿದೆ ಎಂದ ಮಾತ್ರಕ್ಕೆ ಸತ್ಯವಾಗಿರಬೇಕೆಂದೇನೂ ಇಲ್ಲ. ಕನಸಿನ ಹುಲಿ ಸತ್ಯವೇ? ಇಲ್ಲದ ಹುಲಿ ಇರುವ ಹುಲಿಯಷ್ಟೇ ಪರಿಣಾಮಕಾರಿ. ಅರ್ಥಾತ್ ಭ್ರಮೆಯೂ ಸತ್ಯದಷ್ಟೇ ಪರಿಣಾಮಕಾರಿ. ಕೇವಲ ಪರಿಣಾಮ ಅಥವಾ ಅನುಭವದ ಆಧಾರದ ಮೇಲೆ ಭ್ರಮೆ ಸತ್ಯವಾಗುವುದಿಲ್ಲ. ಇದೇ ಬೌದ್ಧರ ವಿಾನವಾದ. ಶಾಂಕರ ತತ್ತ$$$್ವವಾದರೋ ಕಾಣುತ್ತಿರುವ ಜಗತ್ತು ಜಾಗ್ರದಾವಸ್ಥೆಯಲ್ಲಿ ಸತ್ಯ. ಜಾಗ್ರದಾವಸ್ಥೆ ಪ್ರೆಯ ಒಂದು ಕೆಳಸ್ತರ ಮಾತ್ರ. ಕಾಣುವ ಜಗತ್ತು ಸ್ವಪ್ನ, ಸುಷುಕ್ತಿಗಳಲ್ಲಿ ಬೇರೆಯೇ. ಎಲ್ಲಕ್ಕಿಂತ ಮುಖ್ಯವಾಗಿ ಪ್ರೆಯ ಶುದ್ಧ ಮತ್ತು ಉನ್ನತಸ್ತರವಾದ "ತುರಿಯ'ದಲ್ಲಿ ಜಗತ್ತಿನ ಸುಳಿವೇ ಇಲ್ಲ. ಅಲ್ಲಿರುವುದು ಬ್ರಹ್ಮ ಮಾತ್ರ. ಅಲ್ಲದೆ, "ಸತ್ಯ' ತ್ರಿಕಾಲಾಬಾಧಿತ! ಕಾಲ, ದೇಶ ನಿಮಿತ್ತಗಳಿಂದ ಅಭಾದಿತ. ಬ್ರಹ್ಮವೇ ಜಗತ್ತಾಗಿರಬಹುದಲ್ಲ ಎಂದರೆ ಅದೂ ಸಾಧ್ಯವಿಲ್ಲ. ಏಕೆಂದರೆ ಅನಂತವು ಪರಿಣಾಮವನ್ನು ಹೊಂದಲಾರದು (Immutable). ಸಾಂತವಸ್ತು ಮಾತ್ರ ಪರಿಣಾಮಾಧೀನ. ಆದ್ದರಿಂದ ಶಂಕರರು ಬ್ರಹ್ಮ ಬ್ರಹ್ಮವಾಗಿಯೇ ಉಳಿದು ಬೇರೊಂದು ರೀತಿಯಲ್ಲಿ ನಮ್ಮ ಅನುಭವಕ್ಕೆ ಬರುತ್ತಿದೆ, ಅದಕ್ಕೆ ಅಂತಹ ಅದ್ಭುತ ಶಕ್ತಿ ಇದೆ. ಆ ಶಕ್ತಿಯೇ ಮಾಯೆ. "ಬಹಿರನ್ಯಥಾ ಆತ್ಮಾನಂ ಪ್ರಕಾಶ್ಯ ಅನ್ಯಥೈವ ಕಾರ್ಯಂ ಕರೋತಿ ಸಾ ಮಾಯಾ' ಎಂದು ವಿಶ್ಲೇಷಿಸುತ್ತಾರೆ. ಜಗತ್ತಿನ ಈ ವಿಚಿತ್ರ ಸ್ಥಿತಿಯನ್ನೇ "ಮಿಥ್ಯಾ' ಎಂದು ಅವರು ಕರೆದದ್ದು. "ಮಿಥ್ಯಾ' ಎಂದರೆ ಇಲ್ಲದ್ದು ಎಂದು ಅಲ್ಲ. "ಅನಿರ್ವಚನೀಯ'& ವರ್ಣಸಿಲಾಗದ್ದು ಎಂದು. ಅವರೇ ಅದನ್ನು ಸ್ಪಷ್ಟೀಕರಿಸಿದ್ದಾರೆ. ನಾನು ಮಿಥ್ಯೆ ಎಂದರೆ ಬಂಜೆಯ ಮಗನಂತೆಯೋ ಮೊಲದ ಕೊಂಬಿನಂತೆಯೋ ಅಸಂಭವವಾದದ್ದಲ್ಲ ಅದು ಎಂದು. ಜಗತ್ತಿಗೆ ಸತ್ಯದ ಸ್ಥಾನಮಾನ ಕೊಡಲೇಬೇಕು ಎಂತಿದ್ದರೆ ಅದನ್ನು "ವ್ಯಾವಹಾರಿಕ ಸತ್ಯ' ಎನ್ನಬಹುದು ಎಂದು ಹೇಳಿ ಸತ್ಯವನ್ನು ತ್ರಿಕಾಲಾಭಾದಿತ ಪಾರಮಾರ್ಥಿಕ ಸತ್ಯ, ವ್ಯಾವಹಾರಿಕ ಸತ್ಯ, ಪ್ರಾತಿಭಾಸಿಕ ಸತ್ಯ ಎಂದು ವಿಂಗಡಿಸುತ್ತಾರೆ. ಹಾಗೆಯೇ ಸ್ವಪ್ನದ ಸತ್ಯಾಸತ್ಯತೆಯನ್ನು ಜಾಗ್ರದಾವಸ್ಥೆಯಲ್ಲೆ ಹೇಗೆ ನಿಶ್ಚಯಿಸುತ್ತೇವೆಯೋ ಹಾಗೆಯೇ ಜಾಗ್ರದಾವಸ್ಥೆಯ ಸತ್ಯಾಸತ್ಯಗಳನ್ನು ತುರೀಯಾವಸ್ಥೆಯಲ್ಲಿಯೇ ನಿಶ್ಚಯಿಸಬೇಕು ಎನ್ನುತ್ತಾರೆ.
ಇನ್ನು "ಜೀವ'ನನ್ನು ಕುರಿತು ಶಂಕರರು ಹೇಳುವುದಿಷ್ಟು. ಕುರಿಮಂದೆಯಲ್ಲಿ ಬೆಳೆದ ಸಿಂಹದ ಮರಿಯೊಂದು ಪರಿಸರದ ಪ್ರಭಾವದಿಂದ ತನ್ನನ್ನು ಕುರಿಯೆಂದು ಭಾವಿಸಿದಂತೆ ಜೀವಿಯೂ ಸುಲಭಗ್ರಾಹ್ಯವಾದ ಶರೀರ&ಮನಸ್ಸುಗಳ ಸಂಕೀರ್ಣವನ್ನು "ನಾನು' ಎಂದು ಭಾವಿಸುತ್ತಾನೆ. ಅಸತ್ಯದಲ್ಲಿ ಬದುಕುತ್ತಾನೆ. ಅಸತ್ಯವನ್ನು ಸತ್ಯವೆಂದು ಭಾವಿಸಿದಾಗ ದು@ಖದ ಪರಂಪರೆ ಕಟ್ಟಿಟ್ಟ ಬುತ್ತಿ. ಇದಕ್ಕೆ ಪರಿಹಾರವೇ ಾನಿ ಆಗುವುದು. ಮತ್ತಾವ ಸಾಧನವೂ ಇಲ್ಲ. ಉಪನಿಷತ್ ಸಾರವೇ ಆಗಿರುವ "ತತ್ವಮಸಿ', "ಅಹಂ ಬ್ರಹ್ಮಾಸ್ಮಿ', "ಅಯಮಾತ್ಮ ಬ್ರಹ್ಮ', "ಪ್ರಾನಂ ಬ್ರಹ್ಮ' ಈ ಮಹಾವಾಕ್ಯಗಳ ಶ್ರವಣ, ಮನನ ಮತ್ತು ಅನುಷ್ಠಾನ (ನಿಧಿದ್ಯಾಸನ) ಗಳ ಮೂಲಕ ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿ "ನಾನು ಯಾರು' ಎಂಬುದನ್ನು ಸಾಾತ್ಕರಿಸಿಕೊಳ್ಳುವುದು. ಇದೇ ಜೀವನದ ಪರಮ ಗುರಿಯೆಂದು ಸಂಶಯಕ್ಕೆಡೆಯಿಲ್ಲದಂತೆ ಸ್ಪಷ್ಟಪಡಿಸಿ ಅಂಧಕಾರದಲ್ಲಿ ತೊಳಲುತ್ತಿದ್ದ ಮನುಕುಲವನ್ನು ಬೆಳಗಿದ ಾನಸೂರ್ಯ ಶ್ರೀಮಚ್ಛಂಕರಾಚಾರ್ಯರು. ಎಲ್ಲ ದೌರ್ಬಲ್ಯಗಳು ಭ್ರಮಾಜನ್ಯವೆನ್ನುವ ಅವರ ಮಾತುಗಳನ್ನು ಅವರ ಮತ್ತೊಂದು ರೂಪವೇ ಆದ ಸ್ವಾಮಿ ವಿವೇಕಾನಂದರು ಮುಂದೆ All weakness, all ignorance is delusion. This is all the religion I know ಎಂದು ಗುಡುಗುತ್ತಾರೆ. ವಿವೇಕಾನಂದರ each yourself, teach everyone his true nature. Come out of this hypnotism of weakness power will come, purity will come, glory will come, goodness will come, everything that is excellent will come ಎನ್ನುವ ಮಾತು ಶಾಂಕರ ಸಿದ್ಧಾಂತದ ಆಂಗ್ಲ ಅನುವಾದದಂತಿದೆ ಮತ್ತು ಇಲ್ಲಿಯೇ ಅವರ ಸಾರ್ವಕಾಲಿಕ ಪ್ರಸ್ತುತತೆ ಎದ್ದು ಕಾಣುತ್ತದೆ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ&ವಿವೇಕಾನಂದ ಆಶ್ರಮದ ಅಧ್ಯಕ್ಷರು)