ಅಂಕಣ

ಇದು ಎಂಥಾ ಲೋಕವಯ್ಯಾ: ಕುಡಿದು ದನದ ಮೇಲೆ ಸವಾರಿ

lakshmihegde

ಕುಡಿದು ವಾಹನ ಚಾಲನೆ ಮಾಡಿದರೆ ದಂಡ ತೆರಬೇಕು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಕುಡಿದು ದನದ ಮೇಲೆ ಸವಾರಿ ಮಾಡಿದರೆ...? ಹೀಗೆ ಯಾರಾದರೂ ಮಾಡುತ್ತಾರೆಯೇ ಎಂದು ನೀವು ಕೇಳಬಹುದು.

ಮಾಡುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ ಇದಕ್ಕೆ ಸಂಬಂಧಿಸಿದ ಕಾನೂನೊಂದು ಸ್ಕಾಟ್ಲೆಂಡ್​ನಲ್ಲಿದೆ. ಅದೇನೆಂದರೆ ‘ಕುಡಿದು ಗಾಡಿ ಚಾಲನೆ ಬೇಕಿದ್ದರೆ ಮಾಡಿ; ಅದು ನಿಮ್ಮ ಹಣೆಬರಹ. ಆದರೆ ಹಸುವಿನ ಮೇಲೆ ಕುಳಿತು ಸವಾರಿ ಮಾಡಿ ಅದನ್ನು ಸಂಕಷ್ಟಕ್ಕೆ ಸಿಲುಕಿಸಬೇಡಿ’ ಎನ್ನುತ್ತದೆ ಇಲ್ಲಿಯ ಕಾನೂನು. ಹಾಗೆ ಮಾಡಿದರೆ 200 ಪೌಂಡ್ (ಸುಮಾರು -ಠಿ; 20 ಸಾವಿರ) ದಂಡ ವಿಧಿಸುತ್ತದೆ, ಜತೆಗೆ ಎರಡು ವರ್ಷ ಜೈಲು ಶಿಕ್ಷೆ ಬೇರೆ!

| ಸುಚೇತನಾ