ಗಡಿಯಲ್ಲಿ ತಕರಾರು ತೆಗೆದಿರುವ ಚೀನಾ ಭಾರತದ ಗಣ್ಯರ, ಸರ್ಕಾರಿ ಸಿಬ್ಬಂದಿಯ ಬೇಹುಗಾರಿಕೆ ನಡೆಸುತ್ತಿರುವುದು ತೀರಾ ಆಘಾತಕಾರಿ ವಿಚಾರ. ಭಾರತ ಮಾತ್ರವಲ್ಲದೆ ತನ್ನ ಹಲವು ವಿರೋಧಿ ರಾಷ್ಟ್ರಗಳಲ್ಲಿ ಚೀನಾ ಬೇಹುಗಾರಿಕೆ ನಡೆಸುತ್ತಿದೆ.
ಭಾರತ ಸೇರಿ ಅಂತಾರಾಷ್ಟ್ರೀಯ ವಲಯ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಇಂಥ ಉದ್ಧಟತನಗಳನ್ನು ತಕ್ಷಣವೇ ನಿಲ್ಲಿಸುವಂತೆ ಚೀನಾಕ್ಕೆ ಸ್ಪಷ್ಟ ಎಚ್ಚರಿಕೆ ನೀಡಬೇಕು. ವಿಸ್ತರಣಾವಾದದ ಹುಚ್ಚುವ್ಯಾಮೋಹಕ್ಕೆ ಬಿದ್ದಿರುವ ಡ್ರಾ್ಯಗನ್ ರಾಷ್ಟ್ರ ಇಲ್ಲದ ಸಮಸ್ಯೆಗಳನ್ನೇ ತಾನೇ ಸೃಷ್ಟಿಸುತ್ತ, ದೇಶ-ದೇಶಗಳ ನಡುವಿನ ಸಂಬಂಧಗಳನ್ನು ಹಾಳು ಮಾಡುತ್ತಿದೆ.
| ರವಿ ಮಂಗಳೂರು