ಅಂಕಣ

ಕೋಳಿ ಸಾಕಿದ್ರೆ ಕೈತುಂಬಾ ಕಾಸು!

ಸಿ ಎಸ್ ಸುಧೀರ್

‘ಕೂಗೊ ಕೋಳಿಗೆ ಖಾರ ಮಸಾಲೆ’ ಎಂದು ಕೇಳಿದಾಕ್ಷಣ ರಾಗಿ ಮುದ್ದೆ, ಕೋಳಿ ಸಾರು ಜ್ಞಾಪಕಕ್ಕೆ ಬಂತಾ? ಹೌದು ಆಹಾರ ಧಾನ್ಯಗಳನ್ನು ಬಳಸಿಕೊಂಡು ಪೌಷ್ಟಿಕ ಮಾಂಸ ಉತ್ಪಾದನೆ ಮಾಡುವ ಪ್ರಾಣಿಗಳಲ್ಲಿ ಕೋಳಿ ಪ್ರಥಮ ಸ್ಥಾನದಲ್ಲಿದೆ. ಪ್ರಪಂಚದಲ್ಲಿರುವ ಅಷ್ಟೂ ಮಾಂಸಾಹಾರಿಗಳಲ್ಲಿ ಚಿಕನ್ ತಿನ್ನುವವರ ಸಂಖ್ಯೆ ಹೆಚ್ಚು ಇದೆ. ಇತರ

ಮಾಂಸಗಳಿಗಿಂತ ಕೋಳಿ ಮಾಂಸಕ್ಕೆ ಪ್ರಾಧಾನ್ಯತೆ ಹೆಚ್ಚು. ಏಕೆಂದರೆ, ಕೋಳಿ ಮಾಂಸದಿಂದ ತಯಾರಾಗುವ ಭೋಜನಗಳ ವೆರೈಟಿ ಬಹಳಷ್ಟಿವೆ. ಇದರಿಂದಲೇ, ದಿನದಿಂದ ದಿನಕ್ಕೆ ಕೋಳಿ ಮಾಂಸದ ಬೇಡಿಕೆ ಹೆಚ್ಚುತ್ತಲೇ ಇದೆ. ಕೋಳಿ ಸಾಕಾಣಿಕೆಗೆ ಬೇಕಾದ ಸ್ಥಳ ಬಹಳ ಕಡಿಮೆ. ಎಲ್ಲ ವರ್ಗದ ರೈತರು ಕೈಗೊಳ್ಳಬಹುದಾದ ಉದ್ಯಮ ಇದಾಗಿದೆ. ಭೂಮಿ ಇಲ್ಲದವರಿಗೂ ಕೋಳಿ ಸಾಕಾಣಿಕೆ ಲಾಭದಾಯಕ ಉದ್ಯಮ. ಅದೆಷ್ಟೋ ಜನ ಕೋಳಿ ಸಾಕಾಣಿಕೆ ಮಾಡಿ ತಿಂಗಳಿಗೆ ಲಕ್ಷಾಂತರ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಹಾಗಾದ್ರೆ, ನಾವು ಕೋಳಿ ಸಾಕಣೆ ಮಾಡಬಹುದಾ? ಕೋಳಿ ಸಾಕಣೆಯಲ್ಲಿ ಇರುವ ಲಾಭವೆಷ್ಟು? ಯಾವ ವೆರೈಟಿಗೆ ಬೇಡಿಕೆ ಇದೆ? ಕೋಳಿ ಮರಿಗಳನ್ನು ಎಲ್ಲಿಂದ ತರಬೇಕು? ಹೀಗೆ ಕೋಳಿ ಸಾಕಣೆ ಬಗ್ಗೆ ಇರುವ ಹತ್ತಾರು ಪ್ರಶ್ನೆಗಳಿಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಕೋಳಿ ಮಾಂಸಕ್ಕಿರುವ ಮಾರುಕಟ್ಟೆ

ಕೋಳಿ ಮಾಂಸ ತಿನ್ನುವವರ ಸಂಖ್ಯೆ ಭಾರತದಲ್ಲಿ ಮಾತ್ರವಲ್ಲದೆ, ಇನ್ನಿತರ ದೇಶಗಳಲ್ಲೂ ಅಧಿಕವಾಗಿಯೇ ಇದೆ. 138 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಪ್ರತಿ ವರ್ಷ ಮಾರಾಟವಾಗುವ ಒಟ್ಟು ಕೋಳಿ ಮಾಂಸದ ಮೌಲ್ಯ ಸುಮಾರು 75,000 ಕೋಟಿ ರೂ. ಆದರೆ, ನಮ್ಮ ದೇಶದಿಂದ ಬೇರೆ ದೇಶಗಳಿಗೆ ರಫ್ತಾಗುತ್ತಿರುವ ಕೋಳಿ ಮಾಂಸದ ಮೌಲ್ಯ ಕೇವಲ 140 ಕೋಟಿ ರೂ. ಹೀಗಾಗಿ, ಖಂಡಿತವಾಗಿಯೂ ನಮ್ಮ ದೇಶದಲ್ಲಿ ಈ ಉದ್ಯಮಕ್ಕೆ ಬಹಳಷ್ಟು ಬೇಡಿಕೆ ಇದೆ.

ಕೋಳಿ ಸಾಕಣೆ ಎಂದರೇನು?

ಕೋಳಿ ಸಾಕಾಣಿಕೆ ಹಿಂದಿನ ಕಾಲದಿಂದಲೂ ಬೆಳೆದು ಬಂದಿದೆ. ಹಿಂದೆ ದೇಶೀಯ ಕೋಳಿಗಳಿಂದ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿತ್ತು. ಆ ನಂತರ ಬಳಕೆಗೆ ಬಂದ ಕ್ರಾಸ್ ಬ್ರೀಡ್ ತಳಿಗಳು, ಉತ್ತಮ ನಿರ್ವಹಣಾ ವಿಧಾನಗಳು ಹಾಗೂ ಮಾರಾಟ ಸೌಕರ್ಯದಿಂದಾಗಿ ಈ ಉದ್ಯಮ ದಿನೇದಿನೆ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ಪಶುಸಂಗೋಪನೆಯ ಒಂದು ಭಾಗವಾಗಿರುವ ಕೋಳಿ ಸಾಕಣೆ, ಮಾಂಸ ಅಥವಾ ಮೊಟ್ಟೆಗಳನ್ನು ಉತ್ಪಾದಿಸುವ ಸಲುವಾಗಿ ಪಕ್ಷಿಗಳಾದ ಕೋಳಿ, ಬಾತುಕೋಳಿಗಳು ಮತ್ತು ಹೆಬ್ಬಾತುಕೋಳಿಗಳನ್ನು ಸಾಕುವ ಒಂದು ಉದ್ಯಮ. ಇದು ಕೃಷಿಯ ಒಂದು ವಿಭಾಗವೂ ಹೌದು.

ಕೋಳಿ ಸಾಕಣೆಗೆ ಸರ್ಕಾರದ ಸವಲತ್ತುಗಳು

ಕೋಳಿ ಸಾಕಣೆಗೆ ಸರ್ಕಾರ ಶೇ.25ರ ವರೆಗೆ ಸಬ್ಸಿಡಿ ನೀಡುತ್ತದೆ ಮತ್ತು ಎಸ್​ಸಿ/ಎಸ್​ಟಿ ವರ್ಗದವರಿಗೆಗೆ ಶೇ.35 ಸಬ್ಸಿಡಿ ಲಭ್ಯ. ನಬಾರ್ಡ್​ನಿಂದ ಕೋಳಿ ಸಾಕಣೆ ಉದ್ಯಮ ಬಂಡವಾಳ ನಿಧಿ ಯೋಜನೆಯಲ್ಲಿ ಪ್ರತಿ ಬ್ಯಾಚ್​ಗೆ 16000 ಲೇಯರ್ ಮರಿಗಳ ಘಟಕಕ್ಕೆ 10 ಲಕ್ಷ ರೂ. (ವರ್ಷಕ್ಕೆ ಮೂರು ಬ್ಯಾಚ್​ಗಳಂತೆ) ಸಾಲದ ಜತೆಗೆ ಶೇ.25 ಸಬ್ಸಿಡಿ ಕೂಡ ಲಭ್ಯ. ಮುದ್ರಾ ಯೋಜನೆಯಲ್ಲಿ 50,000ದಿಂದ 10 ಲಕ್ಷ ರೂ.ವರೆಗೆ ಸಾಲ ಲಭ್ಯ.

ಕೋಳಿ ಮಾಂಸದ ಉಪಯೋಗಗಳು

  • ಕೋಳಿಗಳ ಮಾಂಸ ಮೃದು ಹಾಗೂ ರುಚಿಕರ.
  • ಅಧಿಕ ಪ್ರೋಟಿನ್ ಹಾಗೂ ಕಡಿಮೆ ಕೊಬ್ಬು ಹೊಂದಿದ ಶಕ್ತಿವರ್ಧಕ ಆಹಾರ.
  • ರೋಗ ನಿರೋಧಕಶಕ್ತಿ ಹೆಚ್ಚಿಸಿ ಮೂಳೆಗಳನ್ನು ಬಲಿಷ್ಠಗೊಳಿಸುತ್ತದೆ.
  • ಕೋಳಿ ಮಾಂಸ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.
  • ಕೋಳಿ ಮಾಂಸ ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ.

ಕೋಳಿ ಸಾಕಣೆಯ ಪ್ರಯೋಜನಗಳು

  • ಹೆಚ್ಚಿನ ಬಂಡವಾಳದ ಅಗತ್ಯವಿಲ್ಲ.
  • ಕೃಷಿ ಭೂಮಿ ಇಲ್ಲದಿದ್ದರೂ ಸಾಕಾಣಿಕೆ ಸಾಧ್ಯ.
  • ಕಡಿಮೆ ಸಮಯದಲ್ಲಿ ಅಧಿಕ ಲಾಭ.
  • ಪರವಾನಗಿ ಪಡೆಯುವುದು ಸುಲಭ.
  • ಬೇಡಿಕೆ ಹೆಚ್ಚಿರುವುದರಿಂದ ಲಾಭದಾಯಕ.
  • ಉದ್ಯೋಗಾವಕಾಶ ನಿರ್ವಿುಸುತ್ತದೆ.
  • ಸರ್ಕಾರದಿಂದ ಹಲವಾರು ಸವಲತ್ತು ಲಭ್ಯ.

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಕೋಳಿ ಸಾಕಾಣಿಕೆ ಕೋರ್ಸ್

ಇಷ್ಟೆಲ್ಲ ಮಾಹಿತಿಗಳನ್ನು ತಿಳಿದ ನಂತರ ಕೋಳಿ ಸಾಕಾಣಿಕೆ ಮಾಡಬೇಕು, ಅದರಿಂದ ಹಣ ಗಳಿಸಬೇಕು. ಆದರೆ, ಇದಕ್ಕೆ ಬೇಕಾಗುವ ಬಂಡವಾಳವೆಷ್ಟು? ಇದರ ನೋಂದಣಿ ಮತ್ತು ಮಾಲಿಕತ್ವ ಹೇಗೆ? ಇದಕ್ಕೆ ಬೇಕಾಗುವ ಮೂಲಸೌಕರ್ಯಗಳಾವುವು? ಕೋಳಿಗಳಿಗೆ ನಾವು ಯಾವ ರೀತಿಯ ಆಹಾರ ನೀಡಬೇಕು ಮತ್ತು ಅವುಗಳ ಚಿಕಿತ್ಸೆಯ ಕ್ರಮಗಳೇನು? ಈ ಉದ್ಯಮದಲ್ಲೆದುರಾಗುವ ಸಮಸ್ಯೆಗಳಾವುವು? ಇದರ ಮಾರುಕಟ್ಟೆ ಮತ್ತು ವಿತರಣೆ ಹೇಗೆ? ಈ ಎಲ್ಲ ಪ್ರಶ್ನೆಗಳು ನಿಮ್ಮನ್ನು ಈ ಉದ್ಯಮದಿಂದ ದೂರವಿರಿಸಿದ್ಯಾ? ಹಾಗಾದ್ರೆ, ಚಿಂತೆ ಬಿಡಿ. ಏಕೆಂದರೆ, ಇದಕ್ಕೆ ಬೇಕಾದ ಉತ್ತರಗಳು ರೆಡಿ ಇವೆ. ಎಲ್ಲಿ ಅಂತೀರಾ? ಇಂಡಿಯನ್ ಮನಿ ಡಾಟ್ ಕಾಮ್ ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿ. ಯಾರು ಉತ್ತರ ಕೊಡ್ತಾರೆ ಅಂತ ಕೇಳಿದ್ರಾ? ಇದೇ ಉದ್ಯಮದಲ್ಲಿ ಹೆಸರು ಗಳಿಸಿ ಜತೆಗೆ ಲಕ್ಷಾಂತರ ಹಣವನ್ನು ಸಂಪಾದಿಸುತ್ತಿರುವವರು ನಿಮ್ಮ ಮಾರ್ಗದರ್ಶಕರಾಗಿ ಇರುವುದರಿಂದ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಅವರೇ ಉತ್ತರಿಸುತ್ತಾರೆ.

ಕೋರ್ಸ್​ನಲ್ಲಿ ಏನಿದೆ?

  • ಕೋರ್ಸ್​ನ ಮಾರ್ಗದರ್ಶಕರ ಪರಿಚಯ
  • ಕೋಳಿ ಸಾಕಣೆ ಉದ್ಯಮ ಯಾಕೆ?
  • ಸಾಕಾಣಿಕೆ ಮತ್ತು ಬಂಡವಾಳದ ಅಗತ್ಯತೆ
  • ಸರ್ಕಾರದಿಂದ ಸಿಗುವ ಸವಲತ್ತುಗಳು
  • ನೋಂದಣಿ ಮತ್ತು ಮಾಲೀಕತ್ವ
  • ಮೂಲಸೌಕರ್ಯ
  • ಬೆಳವಣಿಗೆ ಮತ್ತು ನಿರ್ವಹಣೆ
  • ಲಸಿಕೆ ಮತ್ತು ರೋಗ ನಿರ್ವಹಣೆ
  • ಕೋಳಿ ಸಾಕಣೆಯಲ್ಲಿ ಸವಾಲುಗಳು
  • ನೌಕರರ ಅಗತ್ಯತೆ
  • ಮಾರುಕಟ್ಟೆ ಮತ್ತು ವಿತರಣೆ
  • ಲಾಭ ಗಳಿಕೆ ಮತ್ತು ಬೆಳವಣಿಗೆ

ಕೋರ್ಸ್ ಮೆಂಟರ್ಸ್

  • ಸಂತೋಷ್ ಶೆಟ್ಟಿ ಶಿವಮೊಗ್ಗ
  • ಮಲ್ಲಿಕಾರ್ಜುನ ಸ್ವಾಮಿ ಮಂಡ್ಯ
  • ನಾಗರಾಜ ಶೆಟ್ಟಿ ಮೂಡಬಿದ್ರೆ
  • ಚೇತನ್ ರಾಮನಗರ
  • ಆದರ್ಶ್ ಟಿ.ಜಿ. ಚನ್ನಪಟ್ಟಣ