ಅಂಕಣ

ಮನೆ ಕಟ್ಟಲು ಹನ್ನೆರಡೇ ಗಂಟೆ; ಟಂಗ್ ಆಂಡ್ ಗ್ರೂವ್ ಎಂಬ ಹೊಸ ಕಾನ್ಸೆಪ್ಟ್

malli

ನಗರದಲ್ಲಿ ಸ್ವಂತ ಸೂರು ಹೊಂದಬೇಕು ಎಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ, ಮನೆ ನಿರ್ಮಾಣ ವೆಚ್ಚ, ಅಧಿಕ ಸಮಯ ತೆಗೆದುಕೊಳ್ಳುವುದು, ಮನೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸುವುದು ದೊಡ್ಡ ಸಮಸ್ಯೆಯಾಗಿದೆ.

ಈ ಸಮಸ್ಯೆಯನ್ನು ನೀಗಿಸಲು ಈಗ ಟಂಗ್ ಆಂಡ್ ಗ್ರೂವ್ ಶೈಲಿಯ ಮರದ ಮನೆಗಳನ್ನು ನಿರ್ವಿುಸುವ ಹೊಸದೊಂದು ಕಲ್ಪನೆ ಶುರುವಾಗಿದೆ. ಕೇವಲ 12 ಗಂಟೆಯಲ್ಲಿ ಮರದ ಮನೆ ಹಾಗೂ 1.5 ತಿಂಗಳಿನಲ್ಲಿ ರೆಸಾರ್ಟ್ ನಿರ್ವಿುಸಿಕೊಡುವ ಯೋಜನೆ ಇದು. ಇದು ಕೆನಡಾದ ಮರದ ಪ್ರಭೇದವಾಗಿದ್ದು, ಅದರ ಶಕ್ತಿ ಮತ್ತು ಆಯಾಮದ ಸ್ಥಿರತೆಯಿಂದಾಗಿ ಹೆಚ್ಚಿನ ಬಾಳಿಕೆ ಬರಲಿದೆ. ಪ್ರತಿ ಚದರ ಅಡಿಗೆ 1,500 ರೂ.ನಿಂದ ಆರಂಭವಾಗಿ 3,800 ರೂ.ವರೆಗೆ ತಗುಲಲಿದೆ.

ಮನೆ ವಿಸ್ತೀರ್ಣಕ್ಕೆ ಅನುಗುಣವಾಗಿ ನೂತನ ಶೈಲಿಯಲ್ಲಿ ಮನೆ ಹಾಗೂ ರೆಸಾರ್ಟ್ ನಿರ್ವಿುಸಲಾಗುತ್ತದೆ. ಈ ಮನೆಯು 30 ರಿಂದ 35 ವರ್ಷಕ್ಕೂ ಅಧಿಕ ಕಾಲ ಬಾಳಿಕೆ ಬರಲಿದ್ದು, ರಿಯಾಯಿತಿ ದರದಲ್ಲಿ ಮನೆ ನಿರ್ವಿುಸಬಹುದಾಗಿದೆ ಎನ್ನುತ್ತಾರೆ ‘ವುಡ್​ಬಾರ್ನ್ ಇಂಡಿಯಾ’ ಸಂಸ್ಥೆಯ ಅಧಿಕಾರಿಗಳು.

ಗ್ರಾಹಕರಿಗೆ ಅನುಕೂಲ: ಸಂಪೂರ್ಣವಾಗಿ ಮರ ಬಳಸಿ ಮನೆ ನಿರ್ವಿುಸುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸಾಕಷ್ಟು ಅನುಕೂಲಗಳಾಗಲಿವೆ. ಮರಗಳಿಂದ ರಚಿಸಿದ ಮನೆಯು ಗಾಳಿ ಮತ್ತು ನೀರಿನ ಗುಣಮಟ್ಟದ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಮರಗಳು ಇಂಗಾಲದ ಡೈಆಕ್ಸೆ ೖಡ್ ಅನ್ನು ಹೀರಿಕೊಳ್ಳುವುದರಿಂದ ಮರದ ಮನೆಗಳಿಂದ ಹವಾಮಾನ ಬದಲಾವಣೆ ಸರಿದೂಗಿಸಬಹುದು.

ಈ ಉತ್ಪನ್ನಗಳು ಇಂಗಾಲದ ಬಹುಭಾಗವನ್ನು ದಶಕಗಳವರೆಗೆ ಸಂಗ್ರಹಿಸುತ್ತಲೇ ಇರುತ್ತವೆ. ಕೆನಡಾದ ಮರದ ಹೆಚ್ಚಿನ ಪ್ರಭೇದಗಳನ್ನು ಮನೆಯ ಒಳಾಂಗಣವನ್ನು ಅಲಂಕರಿಸಲು ಬಳಸಲಾಗುತ್ತಿದೆ. ಇಂತಹ ಪಿಠೋಪಕರಣಗಳ ಬಾಗಿಲುಗಳು ಮತ್ತು ಬಾಗಿಲಿನ ಚೌಕಟ್ಟುಗಳನ್ನು ಹಳದಿ ಸೀಡರ್​ನಿಂದ ತಯಾರಿಸಲಾಗಿದ್ದು, ಇದು ಯುಪಿವಿಸಿ ಕಿಟಕಿಗಳ ಬದಲಾಗಿ ಉತ್ತಮ ಗುಣಮಟ್ಟದ ಬದಲಿ ಮರವಾಗಿದೆ. ನೀರು, ಧೂಳು, ಶಬ್ದಮಾಲಿನ್ಯಗಳಿಂದ ಪ್ರತಿರೋಧಿತವಾಗಿರುತ್ತದೆ.

ಇದು ಕೇವಲ ಪರಿಸರ ಸ್ನೇಹಿ ಮನೆ ಮಾತ್ರವಲ್ಲ, ಬೆಂಕಿ, ಭೂಕಂಪ ಮತ್ತು ಗೆದ್ದಲು ನಿರೋಧಕವಾಗಿದೆ. ಇದಲ್ಲದೆ ಇದು ಶಾಖ ಮತ್ತು ಸೌಂಡ್ ಇನ್ಸುಲೇಟೆಡ್​ನೊಂದಿಗೆ ಜಲ ನಿರೋಧಕವಾಗಿದೆ. ಇಂತಹ ಮರವು ಬಹುಮುಖ, ಹೊಂದಿಕೊಳ್ಳಬಲ್ಲ, ಬಿಚ್ಚಬಲ್ಲ, ಜೋಡಿಸಬಲ್ಲ ಸುಲಭ ಉಪಯೋಗಿಯೂ ಹೌದು. ಕೆನಡಿಯನ್​ವುಡ್ ಒಣ ಮತ್ತು ಶಾಖ ಸಂಸ್ಕರಿತವಾಗಿದೆ. ಇದರ ತೇವಾಂಶವು ಶೇ.15-18 ಗೆ ಸೀಮಿತವಾಗಿರುತ್ತದೆ. ಈ ಮರ ಹವಾಮಾನ ಮತ್ತು ಗೆದ್ದಲುಗಳಿಗೆ ನಿರೋಧಕವಾಗಿದೆ.

ಆಫ್​ಸೆಟ್​ಗೋಡೆಗಳು, ಬಾಲ್ಕನಿಗಳು, ಆಲ್ಕೋವ್ಗಳು ಮತ್ತು ಇತರ ವೈಶಿಷ್ಟ್ಯಗಳು ಸಾಕಷ್ಟು ಆಕರ್ಷಣೀಯವಾಗಿರಲಿದೆ. ವಿದ್ಯುತ್ ವೈರಿಂಗ್, ಕೊಳಾಯಿ ಮತ್ತು ತಾಪನ ನಾಳಗಳು ಸೇರಿ ಲಂಬ, ಅಡ್ಡ ಸೇವೆಗಳನ್ನು ಸಾಗಿಸಲು ಮನೆಯೊಳಗಿನ ಗೋಡೆ ಮತ್ತು ನೆಲದ ಕುಳಿಗಳನ್ನು ಬಳಸಲಾಗುತ್ತದೆ. ದೇಶದಲ್ಲಿ ವುಡ್​ಬಾರ್ನ್ ಈಗಾಗಲೇ ಪರಿಸರ ಸ್ನೇಹಿ ಮರದ ರಚನೆಗಳನ್ನು ಒದಗಿಸಲು ಕೆನಡಿಯನ್ ವುಡ್​ನೊಂದಿಗೆ ಕೆಲಸ ಮಾಡುತ್ತಿದೆ.

ಇಸ್ಮೊ ರೌಟೈನೆನ್, ಲ್ಯಾಮಿಕೊ ಎಲ್ ಎಚ್ ಟಿ.ಓವೈ (ಫಿನ್​ಲ್ಯಾಂಡ್) ಜತೆಗೆ ಹೊಸ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಮನೆ ನಿರ್ವಿುಸುವ ಪ್ರಕ್ರಿಯ ತ್ವರಿತಗೊಳಿಸಲು ಸಹಕಾರಿಯಾಗಿದೆ ಎನ್ನುತ್ತಾರೆ ವುಡ್​ಬಾರ್ನ್ ಇಂಡಿಯಾ ಪ್ರೖೆ.ಲಿ. ಅಧ್ಯಕ್ಷ ಸಂಜಯ್ ಶರ್ವ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಮೀರ್ ಸಿಂಹ- 9740711094. ಇ-ಮೇಲ್ www.woodbarnindia.com ಸಂರ್ಪಸಬಹುದು.

ತೋಟದ ಮನೆ

ವಿಲ್ಲಾಗಳು, ಗ್ರಾಮೀಣ ಮನೆ ಮತ್ತು ತೋಟದ ಮನೆ ನಿರ್ವಿುಸಲು ಕೆನಡಿಯನ್​ವುಡ್ ಸಹಕಾರಿಯಾಗಿದೆ. ಸ್ಥಳೀಯ ಕಲ್ಲು, ಇಟ್ಟಿಗೆಗಳಿಂದ ನಿರ್ವಿುಸುವ ಹೈಬ್ರಿಡ್ ವಿಧಾನದ ಜತೆಗೆ ಒಳಾಂಗಣ ಮತ್ತು ಹೊರಾಂಗಣ ಬಳಕೆಯೊಂದಿಗೆ ಪ್ಯಾನೆಲಿಂಗ್, ಕ್ಲಾಡಿಂಗ್, ಪೀಠೋಪಕರಣಗಳು (ಒಳಾಂಗಣ ಮತ್ತು ಹೊರಾಂಗಣ), ಜೋಡಣೆ, ಬಾಗಿಲು, ಕಿಟಕಿ ಮತ್ತು ಪ್ಯಾರಾಗೋಲಾಸ್​ನೊಂದಿಗೆ ಸಾಂಪ್ರದಾಯಿಕವಾಗಿ ರಚಿಸಲಾಗುತ್ತದೆ ಎನ್ನುತ್ತಾರೆ ಎಫ್​ಐಐ ಇಂಡಿಯಾ (ಕೆನಡಿಯನ್ ವುಡ್) ನಿರ್ದೇಶಕ ಪ್ರಾಣೇಶ್ ಚಿಬ್ಬರ್.