ಅಂಕಣ

ಮೇಕಪ್ ಆರ್ಟಿಸ್ಟ್​ಗೆ ಎಲ್ಲಿಲ್ಲದ ಬೇಡಿಕೆ!: ಮನಿಮಾತು

Webdesk - Ravikanth

ಜಗತ್ತಿನ ಮುಂಚೂಣಿಯಲ್ಲಿರುವ ಇಂಡಸ್ಟ್ರಿಗಳ ಪೈಕಿ ಬ್ಯೂಟಿ ಇಂಡಸ್ಟ್ರಿ ಕೂಡ ತನ್ನದೇ ಸ್ಥಾನ ಕುದುರಿಸಿಕೊಂಡಿದೆ. ಸಾವಿರದಿಂದ ಹಿಡಿದು ಮಿಲಿಯನ್, ಬಿಲಿಯನ್ ಗಟ್ಟಲೆ ಸಂಪಾದನೆ ಮಾಡುವ ಅವಕಾಶ ಈ ಇಂಡಸ್ಟ್ರಿಯಲ್ಲಿದೆ. ನಮ್ಮ ಭಾರತದ ಮೇಕಪ್ ಆರ್ಟಿಸ್ಟ್ಗಳ ವೇತನವನ್ನ ಎಂಜೆಜಿ ಇಂಟರ್ ನ್ಯಾಷನಲ್ ಮೇಕಪ್ ಅಕಾಡೆಮಿ ಸರ್ವೆ ಮಾಡಿದೆ. ಆ ಪ್ರಕಾರ, ಹೊಸದಾಗಿ ಕೆಲಸ ಕಲಿತುಕೊಂಡವರು 15ರಿಂದ 25 ಸಾವಿರ ವೇತನವನ್ನು ಪ್ರತಿ ತಿಂಗಳು ಪಡೆಯುತ್ತಿದ್ದಾರೆ. 1-2 ವರ್ಷ ಅನುಭವ ಪಡೆದವರು ಕನಿಷ್ಠ 25ರಿಂದ 45 ಸಾವಿರದವರೆಗೆ ಸಂಬಳ ಪಡೆಯುತ್ತಾರೆ. 2-5 ವರ್ಷ ಅನುಭವ ಪಡೆದವರು ತಿಂಗಳಿಗೆ ಏನಿಲ್ಲವೆಂದರೂ 45 ಸಾವಿರದಿಂದ 1 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಹಾಗೆ ಹೆಚ್ಚಿನ ವರ್ಷಗಳ ಅನುಭವ ಪಡೆದು ಪ್ರಸಿದ್ಧರಾದವರು ತಿಂಗಳಿಗೆ ಅಂದಾಜು 5 ಲಕ್ಷ ರೂ. ಸಂಪಾದನೆ ಮಾಡುತ್ತಾರೆ.

11 ಬ್ರೖೆಡಲ್ ಮೇಕಪ್ ಆರ್ಟಿಸ್ಟ್: ಮೇಕಪ್ ಆರ್ಟಿಸ್ಟ್ಗಳ ಪೈಕಿ ಬ್ರೖೆಡಲ್ ಮೇಕಪ್ ಆರ್ಟಿಸ್ಟ್ಗಳು ಇಂದು ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಮದುಮಗಳನ್ನ ಶೃಂಗರಿಸುವುದಕ್ಕೆ 10 ಸಾವಿರ ರೂ. ತೆಗೆದುಕೊಳ್ಳುತ್ತಾರೆ. ಹೀಗಿರುವಾಗ ದೇಶದ ಟಾಪ್ 11 ಆರ್ಟಿಸ್ಟ್ಗಳು ಎಷ್ಟು ಸಂಪಾದನೆ ಮಾಡಬಹುದು ಊಹಿಸಿನೋಡಿ. ದೇಶದ 11 ಪ್ರಸಿದ್ಧ ಮೇಕಪ್ ಆರ್ಟಿಸ್ಟ್ಗಳಲ್ಲಿ ಮೊದಲನೆಯವರು ವಿದ್ಯಾ ಟಿಕಾರಿ, ಇವರು ದುಬಾರಿ ಮೇಕಪ್ ಆರ್ಟಿಸ್ಟ್ಗಳಲ್ಲಿ ಒಬ್ಬರು. ಇವರು ಹಿರಿಯ ನಟಿ ಮಾಧುರಿ ದೀಕ್ಷಿತ್ ಮತ್ತು ಬಿಪಾಶ ಬಸುವಿನ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಕೂಡ ಹೌದು. ಹಾಗೆನೇ ತನ್ನ ಮೇಕಪ್ ಕೌಶಲದಿಂದಲೇ ಸಾಕಷ್ಟು ಅವಾರ್ಡ್​ಗಳನ್ನ ಪಡೆದುಕೊಂಡಿರುವ ಅಂಬಿಕಾ ಪಿಳ್ಳೈ ಕೂಡ ದುಬಾರಿ ಬ್ರೖೆಡಲ್ ಮೇಕಪ್ ಆರ್ಟಿಸ್ಟ್. ದೆಹಲಿ ಮೂಲದ ಶಾಲಿನಿ ಸಿಂಗ್ ತನ್ನದೇ ಆದ ಮೇಕಪ್ ಸಂಸ್ಥೆ ಕಟ್ಟಿಕೊಂಡು ತರಬೇತಿ ನೀಡುತ್ತಿರುವ ಮತ್ತೊಬ್ಬ ದುಬಾರಿ ಬ್ರೖೆಡಲ್ ಮೇಕಪ್ ಆರ್ಟಿಸ್ಟ್. ಚಾಂದಿನಿ ಸಿಂಗ್, ಮುಂಬೈ ಮೂಲದ ಸಂಜೀವ್ ಮಜುಂದಾರ್ ಕೂಡ ಬಾಲಿವುಡ್ ಮತ್ತು ಜಾಹೀರಾತುಗಳಲ್ಲಿ ಗುರುತಿಸಿಕೊಂಡಿರುವ ದುಬಾರಿ ಬ್ರೖೆಡಲ್ ಮೇಕಪ್ ಆರ್ಟಿಸ್ಟ್. ದೆಹಲಿ ಮೂಲದ ಅನು ಕೌಶಿಕ್, ಶ್ರುತಿ ಭೋಜಪಾಲ್, ಮಾಯಾ ಆರ್. ಮೆಹ್ತಾ, ಮಿಚೆಲ್ ಮಾಂಟೆಸ್, ಅಶ್ಮಿನ್ ಮುಂಜಾಲ್ ಕೂಡ ದುಬಾರಿ ಲಿಸ್ಟ್​ನಲ್ಲಿದ್ದಾರೆ. ಇನ್ನು ಡೆನಿಯಲ್ ಬಾಯರ್, ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್ ನಟಿಯರಾದ ಐಶ್ವಯಾ ರೈ, ಕತ್ರಿನಾ ಕೈಫ್, ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಜತೆ ಕೂಡ ಕೆಲಸ ಮಾಡಿದ್ದಾರೆ. ಇವರೆಲ್ಲ ಇಂದು ಲಕ್ಷ ಲಕ್ಷ ದುಡಿಯುತ್ತಿದ್ದರೂ ಆರಂಭದಲ್ಲಿ ಸಾಮಾನ್ಯ ಮೇಕಪ್ ಆರ್ಟಿಸ್ಟ್ ಆಗಿದ್ದವರೇ. ಮೇಕಪ್ ಕಲಿತು ಶ್ರದ್ಧೆ, ಪ್ರೀತಿಯಿಂದ ಕೌಶಲ ಅಭಿವೃದ್ಧಿ ಮಾಡಿಕೊಂಡು ಇಂದು ಭಾರತದ ಹನ್ನೊಂದು ಟಾಪ್ ಬ್ರೖೆಡಲ್ ಮೇಕಪ್ ಆರ್ಟಿಸ್ಟ್ ಲಿಸ್ಟ್​ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.

ಮೂರು ಸೂತ್ರ

ಅನುಭವ: ಮೇಕಪ್ ಕ್ಷೇತ್ರದಲ್ಲಿ ಅನುಭವ ತುಂಬಾ ಮುಖ್ಯವಾಗುತ್ತದೆ. ಯಾಕಂದ್ರೆ ನಿಮಗೆ ಸವಾಲೆನಿಸುವ ಸಾಕಷ್ಟು ಸಂದರ್ಭ, ಕ್ಲೈಂಟ್​ಗಳು, ಈವೆಂಟ್​ಗಳು ಬರಬಹುದು. ಅದನ್ನ ಸಮರ್ಥವಾಗಿ ಎದುರಿಸಬೇಕೆಂದ್ರೆ ನಿಮಗೆ ಈ ಕ್ಷೇತ್ರದಲ್ಲಿ ಅನುಭವ ಇರಲೇಬೇಕು.

ಕೌಶಲ: ಕೌಶಲಕ್ಕೆ ಕೊನೆ ಅನ್ನೋದು ಇಲ್ಲವೇ ಇಲ್ಲ. ಪ್ರತಿ ದಿನವೂ ನಿಮ್ಮ ಕೌಶಲದ ಅನಾವರಣ ಇಲ್ಲಿ ಮುಖ್ಯವಾಗುತ್ತದೆ. ಕೌಶಲದ ಕೊರತೆ ಕಂಡುಬಂದಲ್ಲಿ ಇನ್ನೋರ್ವ ಕೌಶಲಗಾರನ ಹುಡುಕಾಟಕ್ಕೆ ನೀವೆ ದಾರಿ ಮಾಡಿಕೊಂಡಂತಾಗುತ್ತದೆ. ನಿಮ್ಮ ಕೌಶಲವೇ ನಿಮ್ಮನ್ನ ಎತ್ತರಕ್ಕೆ ಬೆಳೆಸುತ್ತದೆ ಹೊರತು ಬೇರೆಯವರ ಕೌಶಲ ನಂಬಿ ಈ ಉದ್ದಿಮೆ ಮಾಡಲು ಸಾಧ್ಯವಿಲ್ಲ.

ವ್ಯಕ್ತಿತ್ವ: ಈ ಫೀಲ್ಡ್​ನಲ್ಲಿ ಯಶಸ್ವಿಯಾಗೋಕೆ ನಿಮ್ಮ ವ್ಯಕ್ತಿತ್ವ ಪ್ರಧಾನ ಪಾತ್ರ ನಿರ್ವಹಿಸುತ್ತದೆ. ನಿಮ್ಮ ಮಾತುಗಾರಿಕೆಯಿಂದ ಹಿಡಿದು ವ್ಯಕ್ತಿತ್ವ ವಿಕಾಸನದವರೆಗೆ ಎಚ್ಚರಿಕೆ ವಹಿಸಲೇಬೇಕು. ನಯ, ವಿನಯ, ಕಾಳಜಿ, ತಾಳ್ಮೆ, ಆರೋಗ್ಯಕರ ವ್ಯವಹಾರಿಕೆ ನಿಮ್ಮನ್ನು ಅತ್ಯುತ್ತಮ ಸ್ಟಾರ್ ಮೇಕಪ್ ಆರ್ಟಿಸ್ಟ್ ಮಾಡುತ್ತದೆ. ಭಾರತದ ಪ್ರಸಿದ್ಧ ಬ್ರೖೆಡಲ್ ಮೇಕಪ್ ಆರ್ಟಿಸ್ಟ್​ಗಳೇ ಇರಬಹುದು ಅಥವಾ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ಗಳೇ ಇರಬಹುದು. ಅವರೆಲ್ಲ ಈ ಸೂತ್ರಗಳನ್ನ ಅಳವಡಿಸಿಕೊಂಡು ಗೆದ್ದಿದ್ದಾರೆ. ಅಂದಹಾಗೆ, ಈ ರೀತಿ ಅತ್ಯುತ್ತಮ ಮೇಕಪ್ ಆರ್ಟಿಸ್ಟ್ ಆಗಲು ತರಬೇತಿ ಬೇಕೇಬೇಕು ಅಲ್ವಾ..?

ಆನ್​ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್​ಗೆ ಈಗಲೇ ಸೇರಿ!: ಕನ್ನಡ ನಟಿ ಮತ್ತು ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್ ವೈಭವಿ ಜಗದೀಶ್ ಅವರು ಇಂಡಿಯನ್ ಮನಿ ಫೈನಾನ್ಸಿಯಲ್ ಫ್ರೀಡಂ ಆಪ್ ಸಹಯೋಗದಲ್ಲಿ ನಡೆಸುತ್ತಿರುವ ಆನ್​ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್​ಗೆ ಈಗಲೇ ಸೇರಿಕೊಳ್ಳಿ. ನೀವು ಮೇಕಪ್ ಕಲೆ ಕಲಿತು ದುಡಿಮೆಯ ದಾರಿ ಕಂಡುಕೊಳ್ಳಿ. ಹೆಚ್ಚಿನ ಮಾಹಿತಿಗೆ ಸಂರ್ಪಸಿ: 7975465873

ಮೇಕಪ್ ಆರ್ಟಿಸ್ಟ್ ಕೋರ್ಸ್​ನಲ್ಲಿ ಏನು ಕಲಿಯಬಹುದು?

  • ಮೇಕಪ್ ಪರಿಚಯ
  • ವಿವಿಧ ರೀತಿಯ ಸ್ಕಿನ್​ಗೆ ಮೇಕಪ್ ಹೇಗೆ
  • ಕಲರ್ ಥಿಯರಿ
  • ಬ್ರಷ್​ಗಳ ಬಳಕೆ ಹೇಗೆ
  • ಫೌಂಡೇಷನ್, ಕನ್ಸೀಲರ್ ಪ್ರೖೆಮರ್ ಬಳಕೆ
  • ಮುಖಕ್ಕೆ ತಕ್ಕಂತೆ ಮೇಕಪ್ ಬದಲಾವಣೆ ಹೇಗೆ
  • ಐಬ್ರೋ ಮಾಡೋದು ಹೇಗೆ
  • ಲಿಪ್ಸ್ ಅಂಡ್ ಲ್ಯಾಷ್ ಟೆಕ್ನಿಕ್
  • ನಾರ್ಥ್ ಇಂಡಿಯನ್ ಬ್ರೖೆಡಲ್ ಲುಕ್
  • ಸೌತ್ ಇಂಡಿಯನ್ ಬ್ರೖೆಡಲ್ ಲುಕ್
  • ಮುಸ್ಲಿಂ ಬ್ರೖೆಡಲ್ ಲುಕ್
  • ಕ್ರಿಶ್ಚಿಯನ್ ಬ್ರೖೆಡಲ್ ಲುಕ್
  • ಹೇರ್ ಸ್ಟೈಲಿಂಗ್
  • ಸ್ಯಾರಿ ಡ್ರೇಪಿಂಗ್
  • ಕೆರಿಯರ್ ಮಾಹಿತಿ
  • ಸರ್ಟಿಫಿಕೇಷನ್

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಮೇಕಪ್ ಆರ್ಟಿಸ್ಟ್ ಕೋರ್ಸ್: ಮೇಕಪ್ ಆರ್ಟಿಸ್ಟ್ ಆಗಿ ಯಶಸ್ಸು ಕಾಣೋದು ಹೇಗೆ ಎನ್ನುವ ಬಗ್ಗೆ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಒಂದು ವಿಶೇಷ ಕೋರ್ಸ್ ರೂಪಿಸಲಾಗಿದೆ. ಮೇಕಪ್ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಹಲವಾರು ಮೆಂಟರ್​ಗಳು ಅದರಲ್ಲಿ ಮಾತನಾಡಿದ್ದಾರೆ. ಮೇಕಪ್ ಆರ್ಟಿಸ್ಟ್ ಆಗಿ ಹೆಚ್ಚೆಚ್ಚು ದುಡಿದು ಜಮಪ್ರಿಯತೆ ಗಳಿಸೋದು ಹೇಗೆ ಎನ್ನುವ ಬಗ್ಗೆ ಕೋರ್ಸ್​ನಲ್ಲಿ ಮಾಹಿತಿ ಇದೆ. ಹಾಗಾದ್ರೆ ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ ಮೇಕಪ್ ಕೋರ್ಸ್ ವೀಕ್ಷಣೆ ಮಾಡಿ, ಖ್ಯಾತ ಸೆಲಬ್ರಿಟಿ ಮೇಕಪ್ ಆರ್ಟಿಸ್ಟ್ ವೈಭವಿ ಜಗದೀಶ್ ಅವರ ಮೇಕಪ್ ಕೋರ್ಸ್​ಗೆ ಸೇರಿಕೊಂಡು ನೀವೂ ಕಲಿತು ನಿಮ್ಮದೇ ಮೇಕಪ್ ಸ್ಟುಡಿಯೋ ಆರಂಭಿಸಿ.