ಗಣಿತ ಮತ್ತು ವಿಜ್ಞಾನ ಎಂದರೆ ಈತನಿಗೆ ಅಚ್ಚುಮೆಚ್ಚು. ಗಣಿತ ಯಾಕೆ ಇಷ್ಟ ಪುಟ್ಟಾ? ಎಂದು ಈತನನ್ನು ಕೇಳಿದರೆ ಪಟಕ್ ಎಂದು ಬರುವ ಉತ್ತರ, ‘ಮ್ಯಾಥ್ಸ್ ಕಲಿತರೆ ಜೀವನ ನಡೆಸುವುದು ಸುಲಭ, ಸಂಖ್ಯೆಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ’. ರೋಬೋಟಿಕ್ಸ್ ಕುರಿತು ಹೆಚ್ಚಿನ ಆಸಕ್ತಿ ಹೊಂದಿರುವ ದೈವಿಕ್, ‘ಇದು ಮನುಷ್ಯನ ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ಇದೊಂದು ಫನ್ ಹಾಗೂ ಇನ್ನೋವೇಟಿವ್ ಕೆಲಸ’ ಎನ್ನುತ್ತಾನೆ.
ಇದನ್ನು ಕಲಿಯುವುದಕ್ಕಾಗಿ ಈತ I O Brain Innovative Labs ಎಂಬ ಶಿಕ್ಷಣ ಕೇಂದ್ರಕ್ಕೆ ಹೋಗುತ್ತಿದ್ದಾನೆ. ಅಲ್ಲಿ ಪ್ರೋಗ್ರಾಮಿಂಗ್, ಕೋಡಿಂಗ್, ಬ್ರೇನ್ ಮ್ಯಾಪಿಂಗ್, ರೋಬೋಟಿಕ್ಸ್ ಹಾಗೂ ಇಂಟಲಿಜೆನ್ಸ್ ರೀಸನಿಂಗ್ ವಿಷಯಗಳನ್ನು ಕಲಿಯುತ್ತಿದ್ದಾನೆ. ಇಂತಹ ಪ್ರಾಜೆಕ್ಟ್ ನಲ್ಲಿ ಮೊಮ್ಮಗನಿಗೆ ಇರುವ ಆಸಕ್ತಿಯನ್ನು ಗಮನಿಸಿ ದೈವಿಕ್ನ ಅಜ್ಜಿಯೂ ಇವನಿಗೆ ಸಹಕಾರ ನೀಡುತ್ತಾರೆ. ಇಲ್ಲಿಯವರೆಗೆ ದೈವಿಕ್ ಎರಡು ಸಣ್ಣ ರೋಬೋ ಮಾಡೆಲ್ಗಳನ್ನು ಮಾಡಿದ್ದಾರೆ.
ಅಷ್ಟೇ ಅಲ್ಲದೆ ಈತ ಏಳು ವರ್ಷದವನಿರುವಾಗಲೇ 6-10 ವರ್ಷದ ಮಕ್ಕಳಿಗಾಗಿ ರೋಬೋಟಿಕ್ಸ್ ಬಗ್ಗೆ ಕಾರ್ಯಾಗಾರವನ್ನು ನಡೆಸಿದ್ದ. ಅದು ಬಹಳ ಯಶಸ್ವಿಯಾಗಿತ್ತು. ಇವನ ಸಾಧನೆಗೆ ಇಂಡಿಯಾ ಬುಕ್ನಲ್ಲಿ ಇವನ ಹೆಸರು Well rounded kid with good knowledge of Robotics ಎಂಬ ಶೀರ್ಷಿಕೆಯೊಂದಿಗೆ ದಾಖಲಾಗಿದೆ.
ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿರುವ ದೈವಿಕ್ ದಿನದ ನಾಲ್ಕೂವರೆ ಗಂಟೆಗಳನ್ನು ಕ್ರೀಡೆಗಾಗಿ ಮೀಸಲಿಟ್ಟಿದ್ದಾನೆ. ಸೈಕ್ಲಿಂಗ್, ಸ್ವಿಮ್ಮಿಂಗ್ ಹಾಗೂ ರನ್ನಿಂಗ್ ಇದರಲ್ಲೂ ಸಾಕಷ್ಟು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಮಾತೃ ಭಾಷೆ ಕನ್ನಡದ ಜತೆಗೆ ಹಿಂದಿ, ಇಂಗ್ಲಿಷ್ ಚೆನ್ನಾಗಿ ಕಲಿತಿದ್ದಾನೆ. ಈಗ ತಮಿಳು ಹಾಗೂ ಜರ್ಮನ್ ಭಾಷೆಯನ್ನೂ ಕಲಿಯುತ್ತಿದ್ದಾನೆ.