ಅಂಕಣ

ಶುರುವಾಯ್ತು ಯುರೊ ಕಪ್​.. ಯಾರು ಬೆಸ್ಟ್​, ಯಾರು ಫೇವರಿಟ್​

ಅದು ಇಟಲಿ ಮತ್ತು ಸೋವಿಯತ್​ ಒಕ್ಕೂಟದ ನಡುವಿನ ಯುರೊ ಕಪ್​ ಸೆಮಿೈನಲ್​ ಹಣಾಹಣಿ. 90 ನಿಮಿಷಗಳ ಪೂರ್ಣಾವಧಿ ಗೋಲುರಹಿತವಾಗಿ ಮುಗಿದಿತ್ತು. ಅರ್ಧಗಂಟೆಗಳ ಹೆಚ್ಚುವರಿ ಅವಧಿಯಲ್ಲೂ ಒಂದೂ ಗೋಲು ದಾಖಲಾಗಲಿಲ್ಲ. ಆಗಿನ್ನೂ ಪೆನಾಲ್ಟಿ ಶೂಟೌಟ್​ ಪರಿಕಲ್ಪನೆ ಇರಲಿಲ್ಲ. ನಾಕೌಟ್​ ಪಂದ್ಯಗಳು ಗೋಲು ರಹಿತವಾಗಿ ಮುಗಿದರೆ ನಾಣ್ಯ ಚಿಮ್ಮುವ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತಿತ್ತು. ಅಂದು ಟಾಸ್​ನ ಅದೃಷ್ಟ ಒಲಿದಿದ್ದು ಇಟಲಿಗೆ. ಹೀಗೆ ಯೋಗಾಯೋಗದಿಂದ ೈನಲ್​ಗೇರಿದ ಇಟಲಿ ಅಲ್ಲಿ ಯುಗೋಸ್ಲಾವಿಯಾವನ್ನು ಸೋಲಿಸಿ ಚಾಂಪಿಯನ್​ ಪಟ್ಟಕ್ಕೇರಿತು. ಆದರೆ, ಅಲ್ಲೂ ಒಂದು ಟ್ವಿಸ್ಟ್​ ಇತ್ತು. ರೋಮ್​ನ ಒಲಿಂಪಿಕ್ಸ್​ ಕ್ರೀಡಾಂಗಣದಲ್ಲಿ ನಡೆದ ೈನಲ್​ ಪಂದ್ಯವೂ 1&1 ಡ್ರಾದಲ್ಲಿ ಅಂತ್ಯಗೊಂಡಿತ್ತು. ಆದರೆ, ಚಾಂಪಿಯನ್​ ನಿರ್ಧಾರ ಈ ಬಾರಿ ಟಾಸ್​ ಮೂಲಕ ಆಗಲಿಲ್ಲ. ಬದಲಿಗೆ ಮರು ಪಂದ್ಯ ಆಯೋಜಿಸಲಾಯಿತು. 2 ದಿನ ಬಳಿಕ ಪಡೆದ ಮರು ೈನಲ್​ನಲ್ಲಿ ಇಟಲಿ 2&0 ಅಂತರದಿಂದ ಗೆದ್ದು ಚಾಂಪಿಯನ್​ ಪಟ್ಟಕ್ಕೇರಿತು.

ಇದು 1968ರ ಯುರೋ ಕಪ್​ ುಟ್​ಬಾಲ್​ನ ರೋಚಕ ಕಥನ. ಅಂದು ಚಾಂಪಿಯನ್​ ಪಟ್ಟಕ್ಕೇರಿದ ಇಟಲಿ ಮತ್ತೆಂದೂ ಈ ಟ್ರೋಫಿ ಗೆದ್ದಿಲ್ಲ. ಸೋವಿಯತ್​ ಒಕ್ಕೂಟ 90ರ ದಶಕದಲ್ಲಿ ಛಿದ್ರವಾದ ಬಳಿಕ ಹಾಲಿ ರಷ್ಯಾವಾಗಿ ಆಡುತ್ತಿದೆ. ಯುಗೋಸ್ಲಾವಿಯ ಕೂಡ ಏಳು ಸಣ್ಣ ಸಣ್ಣ ರಾಷ್ಟ್ರಗಳಾಗಿ ಛಿದ್ರವಾಗಿದ್ದು, ಆ ತಂಡ ಅಸ್ತಿತ್ವದಲ್ಲಿಲ್ಲ. 1968ರಲ್ಲಿ ತವರು ರೋಮ್​ನಲ್ಲಿ ಯುರೊ ಕಪ್​ ಪ್ರಶಸ್ತಿ ಗೆದ್ದಿದ್ದ ಇಟಲಿ 53 ವರ್ಷ ಬಳಿಕ ಮತ್ತೆ ಅದೇ ರೋಮ್​ನಲ್ಲಿ ಶುಕ್ರವಾರ ಯುರೋ ಕಪ್​ 2020 ುಟ್​ಬಾಲ್​ ಅಭಿಯಾನ ಆರಂಭಿಸಿದೆ. ಅಂದು ತವರಿನಲ್ಲಿ ಇಟಲಿ ಕೈಹಿಡಿದಿದ್ದ ಅದೃಷ್ಟ ಈ ಬಾರಿಯೂ ಮರುಕಳಿಸುವುದೇ ಎನ್ನುವುದಕ್ಕೆ ಇನ್ನೊಂದು ತಿಂಗಳು ಕಾಯಬೇಕು. ಕಳೆದ ಒಂದೂವರೆ ವರ್ಷದಿಂದ ಕರೊನಾ ಮಹಾಮಾರಿಗೆ ಸಿಲುಕಿ ಒದ್ದಾಡುತ್ತಿರುವ ಜಗತ್ತಿನ ಪಾಲಿಗೆ ನವಚೈತನ್ಯ, ಜೀವನೋತ್ಸಾಹದ ರಸಗಂಗೆ ಹಂಚುವ ಮಹೋತ್ಸವವಾಗಿ ಈ ಟೂರ್ನಿ ಆಗಮಿಸಿದೆ. ಕೋವಿಡ್​ &19ರ ಮೂರು ಅಲೆಗಳ ವಿಷಮಾರುತದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿರುವ ಯುರೋಪಿನ 11 ದೇಶಗಳ ಪ್ರಮುಖ ನಗರಗಳಲ್ಲಿ ಈ ತಿಂಗಳಾವಧಿ ಟೂರ್ನಿಯ ಪಂದ್ಯಗಳು ನಡೆಯುವುದು ವಿಶೇಷ. ಭಾರತದಲ್ಲೂ ಐಪಿಎಲ್​ ಮೊಟಕಾಗಿದ್ದರಿಂದ ನಿರಾಸೆ ಪಟ್ಟುಕೊಂಡಿರುವ ಕ್ರೀಡಾಭಿಮಾನಿಗಳಿಗೆ ಯುರೊ ುಟ್​ಬಾಲ್​ ರೋಮಾಂಚನ ಹೊತ್ತು ತರಲಿದೆ. ಇನ್ನೇನು ಜೂನ್​ 18ರಿಂದ ಭಾರತ&ನ್ಯೂಜಿಲೆಂಡ್​ ವಿಶ್ವ ಚಾಂಪಿಯನ್​ಷಿಪ್​ ೈನಲ್​ ಟೆಸ್ಟ್​ ಪಂದ್ಯವೂ ಶುರುವಾಗಲಿದ್ದು, ಮುಂದಿನ ತಿಂಗಳು ಭಾರತ& ಶ್ರೀಲಂಕಾ ಟೆಸ್ಟ್​ ಸರಣಿ, ಅದಾದ ಬಳಿಕ ಯುಎಇನಲ್ಲಿ ಐಪಿಎಲ್​ನ ಮುಂದುವರಿದ ಭಾಗ, ತದನಂತರ ಟಿ20 ವಿಶ್ವಕಪ್​, ಇಷ್ಟರ ನಡುವೆ ವಿಂಬಲ್ಡನ್​, ಯುಎಸ್​ ಓಪನ್​ ಟೆನಿಸ್​ ಗ್ರಾಂಡ್​ಸ್ಲಾಂ, ಜಪಾನ್​ ಒಲಿಂಪಿಕ್ಸ್​ ಹೀಗೆ... ಕ್ರೀಡಾ ಜಗತ್ತು ಕೋವಿಡ್​ ನಿರ್ವಾತದಿಂದ ಹೊರಬಂದು ಮೈಕೊಡವಿಕೊಳ್ಳುತ್ತಿದೆ.

ಕಳೆದ ವರ್ಷ ಜೂನ್​ 11ಕ್ಕೇ ಶುರುವಾಗಬೇಕಿದ್ದ ಯುರೊ ಕಪ್​ ಕೋವಿಡ್​ ಕಾರಣಕ್ಕೆ ಒಂದು ವರ್ಷ ಬಳಿಕ ಜೂನ್​ 11ರಂದೇ ಆರಂಭಗೊಂಡಿದೆ. ಹಾಗಾಗಿ ಟೂರ್ನಿ 2021ರಲ್ಲಿ ನಡೆಯುತ್ತಿದ್ದರೂ ಯುರೊ 2020 ಎಂದೇ ಗುರುತಿಸಲಾಗುತ್ತಿದೆ. ಆಟದ ಗುಣಮಟ್ಟ, ಸ್ಪರ್ಧಾತ್ಮಕತೆ ಹಾಗೂ ರೋಚಕತೆ ದೃಷ್ಟಿಯಿಂದ ಯುರೊ ಕಪ್​ ಪಂದ್ಯಗಳು ಒಲಿಂಪಿಕ್ಸ್​ ುಟ್​ಬಾಲ್​ಗಿಂತ ಮೇಲ್ಮಟ್ಟದಲ್ಲಿರುತ್ತವೆ. ಮಾಜಿ ವಿಶ್ವ ಚಾಂಪಿಯನ್​ಗಳಾದ ಬ್ರೆಜಿಲ್​ ಮತ್ತು ಅರ್ಜೆಂಟೀನಾ ಹೊರತು ಪಡಿಸಿದರೆ, ಬೇರೆಲ್ಲ ಬಲಾಢ್ಯ ತಂಡಗಳು ಯುರೋ ಕಣದಲ್ಲಿರುತ್ತವೆ. ಹಾಲಿ ವಿಶ್ವ ಚಾಂಪಿಯನ್​ ್ರಾನ್ಸ್​, ಹಾಲಿ ಯುರೊ ಚಾಂಪಿಯನ್​ ಪೋರ್ಚುಗಲ್​, ಸಾಂಪ್ರದಾಯಿಕ ಬಲಿಷ್ಠ ಜರ್ಮನಿ, ಫಿಾ ವಿಶ್ವ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿರುವ ಬೆಲ್ಜಿಯಂ, ವಿಶ್ವ ನಂ.4 ಇಂಗ್ಲೆಂಡ್​, ಸದಾ ಬಲಾಢ್ಯ ತಂಡಗಳಾದ ಸ್ಪೇನ್​, ಹಾಲೆಂಡ್​, ಇಟಲಿ... ಒಂದೇ ಎರಡೇ..ವಿಶ್ವ ಚಾಂಪಿಯನ್​ ್ರಾನ್ಸ್​ ಈ ಬಾರಿ ಟೂರ್ನಿಗೆ ಮುನ್ನ ಅತ್ಯುತ್ತಮ ತಂಡವಾಗಿ ಗೋಚರಿಸುತ್ತಿದೆ. 2016ರಲ್ಲಿ ತವರಿನಲ್ಲೇ ನಡೆದ ಟೂರ್ನಿಯ ೈನಲ್​ನಲ್ಲಿ ಪೋರ್ಚುಗಲ್​ ವಿರುದ್ಧ ಜಾರಿಬಿದ್ದಿದ್ದ ್ರಾನ್ಸ್​ ಈ ಬಾರಿ ಇನ್ನೊಂದು ಹೆಜ್ಜೆ ಮುಂದಿಡುವ ತವಕದಲ್ಲಿದೆ. ಈ ವರ್ಷದ ಫಿಾ ಗೋಲ್ಡನ್​ ಬಾಲ್​ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ಎನ್​ಗೊಲೊ ಕಾಂಟೆ ಮತ್ತು ಕೈಲಿಯನ್​ ಎಂಬಾಪ್ಪೆ ್ರಾನ್ಸ್​ ಪಡೆಗೆ ಆನೆಬಲ. ಇವರೊಂದಿಗೆ ಐದು ವರ್ಷ ಬಳಿಕ ತಂಡಕ್ಕೆ ಮರಳಿರುವ ಕರೀಮ್​ ಬೆಂಝೇಮಾ ಬಲ ಹೆಚ್ಚಿಸಿದ್ದಾರೆ.
ಅನಾದಿ ಕಾಲದಿಂದ ಫಿಾ ರ್ಯಾಂಕಿಂಗ್​ನಲ್ಲಿ ಅಗ್ರಮಾನ್ಯ ತಂಡವಾಗಿದಿದ್ದರೂ, ಪ್ರಮುಖ ಚಾಂಪಿಯನ್​ಷಿಪ್​ಗಳಲ್ಲಿ ಮಗುಚಿಬೀಳುವ ಹಾಲಿ ವಿಶ್ವ ನಂ.1 ಬೆಲ್ಜಿಯಂಗೆ ಈ ಬಾರಿ ಚಾಂಪಿಯನ್​ ಪಟ್ಟಕ್ಕೇರಲು ಸುವರ್ಣಾವಕಾಶ ಎನ್ನಲಾಗುತ್ತಿದೆ. ಕಾರಣ ರೊಮೇಲು ಲುಕಾಕು ಮತ್ತು ಕೆವಿನ್​ ಡಿ ಬ್ರೂಯ್ನ್​ ಎಂಬಿಬ್ಬರು ಟಾನುಟಿ ಆಟಗಾರರು. ಇವರೊಂದಿಗೆ ರಿಯಲ್​ ಮ್ಯಾಡ್ರಿಡ್​ ಕ್ಲಬ್​ನಲ್ಲಿ 112 ಮಿಲಿಯನ್​ ಡಾಲರ್​ ಬೆಲೆಬಾಳುವ ಆಟಗಾರನೆನಿಸಿರುವ ಈಡನ್​ ಹರರ್ಡ್​ ತಮ್ಮ ಖ್ಯಾತಿಗೆ ತಕ್ಕ ಆಟ ಆಡಿದರೆ, ಬೆಲ್ಜಿಯಂ ತುಪ್ಪದ ಪಾತ್ರೆಗೆ ಟ್ರೋಫಿ ಜಾರಿ ಬೀಳುವುದು ಕಷ್ಟವಲ್ಲ.

2016ರಲ್ಲಿ ಕ್ರಿಶ್ಚಿಯಾನೊ ರೊನಾಲ್ಡೊ ಸಾಹಸದ ಬೆನ್ನೇರಿ ಚಾಂಪಿಯನ್​ ಪಟ್ಟಕ್ಕೇರಿದ ಪೋರ್ಚುಗಲ್​ ಈ ಬಾರಿಯೂ ೇವರಿಟ್​ ತಂಡಗಳಲ್ಲೊಂದು. ಹಾಗೆ ನೋಡಿದರೆ 2004ರಲ್ಲೇ ಚಾಂಪಿಯನ್​ ಪಟ್ಟಕ್ಕೇರಬೇಕಿದ್ದ ಪೋರ್ಚುಗಲ್​, ಗ್ರೀಸ್​ನ ನ ಭೂತೋ ನ ಭವಿಷ್ಯತಿ ಪ್ರದರ್ಶನಕ್ಕೆ ತಲೆಬಾಗಿ ನಿರಾಸೆ ಅನುಭವಿಸಿತ್ತು. ಅಂದಿನಿಂದ ನಿರಂತರವಾಗಿ ಯುರೊ ಕಪ್​, ವಿಶ್ವಕಪ್​, ಒಲಿಂಪಿಕ್ಸ್​ಗಳಲ್ಲಿ ಪೋರ್ಚುಗಲ್​ ಯಶಸ್ಸಿನ ಗಾಥೆ ಬರೆಯಲು ತವಕಿಸುತ್ತಿದ್ದ ರೊನಾಲ್ಡೊ ಕೊನೆಗೂ 2016ರಲ್ಲಿ ತಮ್ಮ ಕನಸು ನನಸಾಗಿಸಿಕೊಂಡಿದ್ದರು. ಈ ಬಾರಿಯೂ ಅವರ ನೇತೃತ್ವದ ತಂಡ ಬ್ರೂನೊ ರ್ನಾಂಡೆಸ್​, ರ್ಬನಾರ್ಡೊ ಸಿಲ್ವ, ಜೋವ ೆಲಿಕ್ಸ್​, ರೂಬೆನ್​ ಡಯಾಸ್​ರಂಥ ಸಮರ್ಥರ ಉಪಸ್ಥಿತಿಯಲ್ಲಿ ಬಲಾಢ್ಯವೆನಿಸಿದೆ.

ಎಲ್ಲ ಟೂರ್ನಿಗಳಿಗೆ ೇವರಿಟ್​ ರೂಪದಲ್ಲಿ ಆಗಮಿಸಿ, ಕೊನೆಗೆ ಅಭಿಮಾನಿಗಳನ್ನು ನಿರಾಸೆ ಪಡಿಸುವ ತಂಡಗಳಲ್ಲಿ ಇಂಗ್ಲೆಂಡ್​ ಸಹ ಒಂದು. ಡೇವಿಡ್​ ಬೆಕ್​ಹ್ಯಾಂ, ವೇಯ್ನ್​ ರೂನಿ, ್ರಾಂಕ್​ ಲ್ಯಾಂಪರ್ಡ್​, ಗ್ಯಾರಿ ನೆವಿಲ್​, ರಿಯೊ ರ್ಡಿನಾಂಡ್​ರಂಥ ತಾರಾ ಆಟಗಾರರಿದ್ದೂ ಕಳೆದ ಇಪ್ಪತ್ತು ವರ್ಷಗಳಲ್ಲಿ ಇಂಗ್ಲೆಂಡ್​ ಅನುಭವಿಸಿದು ನಿರಾಸೆಯೇ. ತಂಡ 1968ರಲ್ಲಿ 3ನೇ ಸ್ಥಾನ ಪಡೆದಿದ್ದೇ ಇಲ್ಲಿವರೆಗಿನ ಶ್ರೇಷ್ಠ ಸಾಧನೆ. ಹಾಗಿದ್ದೂ, ಜೇಡನ್​ ಸ್ಯಾಂಚೊ, ಹ್ಯಾರಿ ಕೇನ್​, ಜೋರ್ಡನ್​ ಹೆಂಡರ್​ಸನ್​ರಂಥ ಆಟಗಾರರು ಈ ಬಾರಿ ಅದೃಷ್ಟ ಬದಲಿಸುವರೇ ಗಮನಿಸಬೇಕು. 2018ರ ವಿಶ್ವಕಪ್​ಗೆ ಅರ್ಹತೆ ಪಡೆಯಲೇ ವಿಲವಾಗಿದ್ದ ಇಟಲಿ ಇತ್ತೀಚಿನ 27 ಪಂದ್ಯಗಳಲ್ಲಿ ಅಜೇಯ ದಾಖಲೆಯೊಂದಿಗೆ ಈ ಟೂರ್ನಿಗೆ ಆಗಮಿಸಿದೆ. ಕೇವಲ ರಕ್ಷಣಾತ್ಮಕ ಆಟಕ್ಕೆ ಜೋತು ಬಿದ್ದು ಎದುರಾಳಿಗಳನ್ನು ಸುಸ್ತು ಹೊಡೆಸುವುದನ್ನೇ ತಂತ್ರವಾಗಿಸಿಕೊಂಡಿದ್ದ ಇಟಲಿ ರಾಬರ್ಟೊ ಮಾನ್ಸಿನಿ ತರಬೇತಿಯಲ್ಲಿ ಇತ್ತೀಚೆಗೆ ಆಕ್ರಮಣಕಾರಿ ತಂಡವಾಗಿ ಹೊರಹೊಮ್ಮಿದೆ.

ಜರ್ಮನಿ ತಂಡದ ಇತ್ತೀಚಿನ ನಿರ್ವಹಣೆ ಚೇತೋಹಾರಿಯಾಗೇನೂ ಇಲ್ಲ. ಸ್ಪೇನ್​ ವಿರುದ್ಧ 0&6 ಅಂತರದ ಹೀನಾಯ ಸೋಲು ಹಾಗೂ ತವರಿನಲ್ಲಿ ಅನನುಭವಿ ನಾರ್ತ್​ ಮೆಸಿಡೋನಿಯಾ ವಿರುದ್ಧ ಸೋತು ಆ ತಂಡಕ್ಕೆ ಚೊಚ್ಚಲ ಯುರೊ ಕಪ್​ ಪ್ರವೇಶದ ಬಳುವಳಿ ನೀಡಿದ್ದು ಜರ್ಮನಿಯನ್ನು ಕಂಗೆಡಿಸಿದೆ. ಹಾಗಿದ್ದೂ, ಥಾಮಸ್​ ಮುಲ್ಲರ್​, ಮ್ಯಾಟ್ಸ್​ ಹಮ್ಮೆಲ್ಸ್​ರಂಥ ಪ್ರತಿಭಾವಂತರನ್ನೊಳಗೊಂಡ ಜರ್ಮನಿ ಜಾಗತಿಕ ಟೂರ್ನಿಗಳಲ್ಲಿ ಬಲಾಢ್ಯ ಪ್ರದರ್ಶನ ನೀಡುವ ಛಾತಿ ಹೊಂದಿದೆ. ಇನ್ನು ಸ್ಪೇನ್​, ಡೆನ್ಮಾರ್ಕ್​, ಹಾಲೆಂಡ್​ ನಿರಂತರವಾಗಿ ಸರಾಸರಿಗಿಂತ ಮೇಲ್ಮಟ್ಟದ ಆಟ ಆಡುವ ತಂಡಗಳು. ಹಾಗಾಗಿ ೈನಲ್​ ಹಾದಿಯಲ್ಲಿ ಯಾವುದೇ ಪ್ರಬಲರಿಗೆ ತೊಡರುಗಾಲಾಗುವ ಸಾಮರ್ಥ್ಯ ಅವಕ್ಕಿದೆ. 2008 ಮತ್ತು 2012ರಲ್ಲಿ ಸತತ 2 ಬಾರಿ ಪ್ರಶಸ್ತಿ ಗೆದ್ದಿರುವ 3 ಬಾರಿಯ ಚಾಂಪಿಯನ್​ ಸ್ಪೇನ್​ ಕೆಲವು ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಟ್ರೋಫಿಗೆ ಪೈಪೋಟಿ ಒಡ್ಡಬಹುದು.
ಪ್ರತಿ ಯುರೊ ಕಪ್​, ವಿಶ್ವಕಪ್​, ಒಲಿಂಪಿಕ್ಸ್​ಗಳಲ್ಲಿ ಒಂದು ಗ್ರೂಪ್​ ಆ್​ ಡೆತ್​ ಅಥವಾ ಮೃತ್ಯುಕೂಪ ಇರಲೇಬೇಕು. ಈ ಬಾರಿ ಎ್​ ಗುಂಪು ಅಂಥ ಕುಖ್ಯಾತಿ ಪಡೆದಿದೆ. ಕಾರಣ ೇವರಿಟ್​ಗಳಾದ ್ರಾನ್ಸ್​, ಜರ್ಮನಿ, ಪೋರ್ಚುಗಲ್​ ತಂಡಗಳು ಹಂಗೆರಿಯೊಂದಿಗೆ ಈ ಗುಂಪಿನಲ್ಲಿ ಸಿಲುಕಿಕೊಂಡಿರುವುದು. 6 ಗುಂಪುಗಳ 24 ತಂಡಗಳ ಲೀಗ್​ ಹಂತದಲ್ಲಿ ಪ್ರತಿ ಗುಂಪಿನಿಂದ ಎರಡು ಅಗ್ರ ತಂಡಗಳು ಮಾತ್ರ ಪ್ರಿ ಕ್ವಾರ್ಟರ್​ೈನಲ್​ಗೆ ಅರ್ಹತೆ ಗಳಿಸಬಹುದು. ಹಾಗಾಗಿ ಈ ಗುಂಪಿನಲ್ಲಿ ಮೂರು ೇವರಿಟ್​ ತಂಡಗಳ ಪೈಕಿ ಎರಡು ಮಾತ್ರ ಅರ್ಹತೆ ಗಳಿಸಿದರೆ, ಇನ್ನೊಂದು ತಂಡ 6 ಗುಂಪುಗಳಲ್ಲಿ 3ನೇ ಸ್ಥಾನ ಪಡೆಯುವ ತಂಡಗಳ ಪೈಕಿ ಅತ್ಯುತ್ತಮ 4ರಲ್ಲಿ ಒಂದಾಗಿ ಹೊರಹೊಮ್ಮುವ ಅನಿವಾರ್ಯತೆ. ಇಷ್ಟರ ನಡುವೆ ಹಂಗೆರಿ ಸುಲಭದ ಪಟ್ಟಿಗೆ ಮಣಿಯುವ ತಂಡವೇನಲ್ಲ. ಒಟ್ಟಿನಲ್ಲಿ ಈ ಗುಂಪಿನಲ್ಲಿ ಕನಿಷ್ಠ ಒಂದು ಶ್ರೇಷ್ಠ ತಂಡ ಲೀಗ್​ ಹಂತದಲ್ಲೇ ನಿರ್ಗಮಿಸುವ ಅಪಾಯವಿದೆ.
ಒಟ್ಟಿನಲ್ಲೇ ಯಾರೇ ಗೆದ್ದರೂ, ಸೋತರೂ ಶ್ರೇಷ್ಠ ುಟ್​ಬಾಲ್​ ಆಟಕ್ಕೆ ಸಾಯಾಗುವಂಥ ಸುವರ್ಣಾವಕಾಶವಂತೂ ಕರೊನಾ ಕಾಲಟ್ಟದಲ್ಲಿ ಅಭಿಮಾನಿಗಳ ಪಾಲಿಗೆ ಗ್ಯಾರಂಟಿ. ಪ್ರಾಯಶ@ ಕೊನೆಯ ಯುರೊ ಕಪ್​ ಆಡುತ್ತಿರುವ ಕ್ರಿಶ್ಚಿಯಾನೊ ರೊನಾಲ್ಡೊ, ಬೆಲ್ಜಿಯಂನ ರೊಮೆಲು ಲುಕಾಕು, ಇಟಲಿಯ ಮ್ಯಾನ್ಯುಯೆಲ್​ ಲೊಕಟೆಲ್ಲಿ, ಹಾಲೆಂಡ್​ನ ್ರೆಂಕಿ ಡಿ ಜಾಂಗ್​, ಇಂಗ್ಲೆಂಡ್​ನ ಜೇಡನ್​ ಸ್ಯಾಂಚೊ, ್ರಾನ್ಸ್​ನ ಕೈಲಿಯನ್​ ಎಂಬೆಪೆ, ಪೋಲೆಂಡ್​ನ ರಾರ್ಬಟ್​ ಲೆವಾಂಡೊವ್​ಸ್ಕಿ, ಸ್ವಿರ್ಜಲೆಂಡ್​ನ ನಿಕೊ ಎಲ್ವೆಡಿ, ಸ್ಪೇನ್​ನ ಸರ್ಗಿಯೊ ಬುಸ್ಕೆಟ್ಸ್​, ಫಿನ್ಲೆಂಡ್​ನ ಗ್ಲೆನ್​ ಕಮಾರ, ವೇಲ್ಸ್​ನ ಗರೆತ್​ ಬೇಲ್​, ಡೆನ್ಮಾರ್ಕ್​ನ ಕ್ರಿಶ್ಚಿಯನ್​ ಎರಿಕ್ಸನ್​, ರಷ್ಯಾದ ಅಲೆಕ್ಸಾಂಡರ್​ ಗೊಲೊವಿನ್​, ಕ್ರೋಷಿಯಾದ ಲೂಕ ಮಾಡ್ರಿಚ್​ ಮೊದಲಾದ ಸೂಪರ್​ಸ್ಟಾರ್​ಗಳು ಮುಂದಿನ ಒಂದು ತಿಂಗಳ ಎಲ್ಲರ ಮನೆಯ ಟಿವಿ ಪರದೆಯನ್ನು ಆಕ್ರಮಿಸಿಕೊಳ್ಳಲಿದ್ದಾರೆ. ಗೋ..........ಲ್​! ಇದು ುಟ್​ಬಾಲ್​ ಹುಚ್ಚಿನ ಕೆಚ್ಚಿನ ಸಮಯ..

(ಲೇಖಕರು "ವಿಜಯವಾಣಿ' ಡೆಪ್ಯೂಟಿ ಎಡಿಟರ್​)