ಅಂಕಣ

ನಮ್ಮ ಅಜ್ಜಿಯಂದಿರ ಬ್ಯೂಟಿ; ಸೀಕ್ರೆಟ್ಸ್ ಇಲ್ಲಿದೆ ನೋಡಿ

Webdesk - Ravikanth

ನಮ್ಮ ಅಜ್ಜಿಯಂದಿರು ಈಗಿನವರ ಹಾಗೆ ಯಾವುದೇ ಸ್ಕಿನ್ ಪ್ರಾಡಕ್ಟ್​ಗಳು, ಫ್ಯಾಷನ್ ಪ್ರಾಡಕ್ಟ್​ಗಳನ್ನು ಬಳಸುತ್ತಿರಲಿಲ್ಲ. ಆದರೂ ಅವರು ಅಪ್ರತಿಮ ಸೌಂದರ್ಯವತಿಯರಾಗಿದ್ದರು. ಕಾರಣವೇನು ಗೊತ್ತಾ...? ಅವರು ಬಳಸುತ್ತಿದ್ದದ್ದು ದುಬಾರಿಯಲ್ಲದ, ಹೆಲ್ತಿ ಕಾಸ್ಮೆಟಿಕ್ಸ್. ಅದೇನೆಂದು ನೋಡೋಣ ಬನ್ನಿ...

ಅರಿಶಿನ: ನಂಜುನಿರೊಧಕ ಗುಣಗಳನ್ನು ಹೊಂದಿರುವ ಅರಿಶಿನವನ್ನು ಮುಖಕ್ಕೆ ಹಚ್ಚುವುದರಿಂದ ಕಲೆಗಳು, ಮೊಡವೆಗಳು ಸುಲಭವಾಗಿ ಹೋಗುತ್ತವೆ. ಇದನ್ನು ಫೇಸ್ ಮಾಸ್ಕ್ ಆಗಿಯೂ ಬಳಸುವುದರಿಂದ ತ್ವಚೆ ಆರೋಗ್ಯಕರವಾಗಿ ಇರುವುದಲ್ಲದೆ, ಮುಖದ ಕಾಂತಿ ಹೆಚ್ಚುತ್ತದೆ.

ಆಲುಗಡ್ಡೆ: ಕಣ್ಣಿನ ಕೆಳಗೆ ಬರುವ ಡಾರ್ಕ್ ಸರ್ಕಲ್ ನಂತಹ ಸಮಸ್ಯೆಗಳಿಗೆ ಅವರು ಬಳಸುತ್ತಿದ್ದದ್ದು ಆಲುಗಡ್ಡೆ. ಹೌದು, ಕತ್ತರಿಸಿಕೊಂಡ ಹಸಿ ಆಲುಗಡ್ಡೆಯ ತೆಳುವಾದ ಬಿಲ್ಲೆಯನ್ನು ಕಣ್ಣಿನ ಕೆಳಗಡೆ ಇಟ್ಟು 5-10 ನಿಮಿಷ ಬಿಟ್ಟು ಮುಖ ತೊಳೆಯುವುದರಿಂದ ಬಹಳ ಬೇಗ ಫಲಿತಾಂಶ ಕಂಡುಕೊಳ್ಳಬಹುದು.

ಮೆಂತ್ಯೆಕಾಳು: ರಾತ್ರಿ ನೆನೆಸಿಟ್ಟ ಮೆಂತ್ಯೆಕಾಳನ್ನು ಮರುದಿನ ಬೆಳಗ್ಗೆ ರುಬ್ಬಿ ತಲೆ ಕೂದಲಿಗೆ ಹಚ್ಚುವುದರಿಂದ ಕೂದಲು ಶಕ್ತಿಯುತವಾಗಿ ದಟ್ಟವಾಗಿ ಬೆಳೆಯುತ್ತವೆ.

ಕಡಲೆಹಿಟ್ಟು: ಇನ್ನು ಕಡಲೆಹಿಟ್ಟಿನಿಂದ ಆಗುವ ಲಾಭ ಒಂದೇ, ಎರಡೇ ನೂರಾರುಮುಖ್ಯವಾಗಿ ಸ್ಕಿನ್ ಟ್ಯಾನ್ ಆಗದಂತೆ ತಡೆಯಲು, ಸ್ಕಿನ್ ಲೈಟನಿಂಗ್​ಗೆ, ಎಣ್ಣೆ ತ್ವಚೆ ಆರೈಕೆ ಮಾಡಲು, ಮೊಡವೆ ಬರದಂತೆ ತಡೆಯಲು, ಅನಗತ್ಯ ಕೂದಲು ತೆಗೆಯಲು, ಉದ್ದ ಕೂದಲಿಗಾಗಿ, ಸುಂದರವಾದ ಕಲೆ ಮುಕ್ತ ತ್ವಚೆ ಹೊಂದಲು ಕಡಲೆಹಿಟ್ಟಿನ ಫೇಸ್ ಫ್ಯಾಕ್, ಹೇರ್ ಪ್ಯಾಕ್ ಹಾಕಬೇಕು.

ನಿಂಬೆಹಣ್ಣಿನ ಸಿಪ್ಪೆ: ಮೊಣಕಾಲು, ಮೊಣಕೈ ಕಪ್ಪಗೆ ಒರಟಾಗಿದ್ದರೆ ನಿಂಬೆಹಣ್ಣಿನ ಸಿಪ್ಪೆಯಿಂದ ಚೆನ್ನಾಗಿ ಉಜ್ಜಿಕೊಳ್ಳಬೇಕು. ಇದರಿಂದ ಆ ಭಾಗಗಳ ಚರ್ಮಕ್ಕೆ ಹೊಸಕಾಂತಿ ಮೂಡುವುದು, ಮೃದುವಾಗುವುದು.

ನಿಂಬೆಹಣ್ಣು ಹಾಗೂ ಸೌತೆಕಾಯಿ: ಕೆಮಿಕಲ್ ಬ್ಲೀಚಿಂಗ್ ಹಾಗೂ ಟ್ಯಾನ್ ರಿಮೂವಲ್ ಚಿಕಿತ್ಸೆ ಇರದಿದ್ದರೂ ಅಜ್ಜಿಯಂದಿರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದರು. ಹೇಗೆಂದರೆ ಮುಖಕ್ಕೆ ಸೌತೆಕಾಯಿ ಹಾಗೂ ನಿಂಬೆಹಣ್ಣಿನ ರಸದ ಮಿಶ್ರಣವನ್ನು ಹಚ್ಚುತ್ತಿದ್ದರು. ಇದರಿಂದ ಚರ್ಮದ ಟ್ಯಾನಿಂಗ್ ದೂರವಾಗುತ್ತಿತ್ತು ಅಲ್ಲದೆ, ತ್ವಚೆಯ ಆಳದಲ್ಲಿ ಅಡಗಿರುವ ಕೊಳೆಯು ನಾಶವಾಗುತ್ತಿತ್ತು.