ಅಂಕಣ

ಆದಾಯಕ್ಕೆ ಬೇಕರಿ ಬಿಸಿನೆಸ್ ಬೆಸ್ಟ್!

Webdesk - Ravikanth
ಬೇಕರಿ ತಿನಿಸು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ?. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಇಂದಿನ ದಿನ ಮಾನಸದಲ್ಲಿ ಬೇಕರಿ ತಿನಿಸು ಇಲ್ಲದ ಮನೆಯೇ ಇಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ಅದರಲ್ಲಿಯೂ ಕೇಕ್ ಒಂದನ್ನೇ ನೋಡೋದಾದ್ರೆ ಇದರ ಬಳಕೆ ಇಂದು ಪ್ರಮುಖ ಸ್ಥಾನ ಪಡೆದುಕೊಂಡಿದೆ. ಮಕ್ಕಳ ಹುಟ್ಟುಹಬ್ಬ, ಮದುವೆ ಸೇರಿ ಪ್ರತಿಯೊಂದು ಶುಭ ಸಮಾರಂಭದಲ್ಲೂ ಕೇಕ್ ಕಲರವ ಅಧಿಕವಾಗಿರುತ್ತದೆ. ಎಷ್ಟರ ಮಟ್ಟಿಗೆ ಕೇಕ್ ಇಲ್ಲದಿದ್ದರೆ ಬರ್ತ್ ಡೇನೇ ಇಲ್ಲ ಅನ್ನುವಂತಾಗಿದೆ. ಇದರ ಜತೆಗೆ ಬಿಸ್ಕೆಟ್, ಸಮೋಸಾ, ಪಪ್ಸ್, ವೆರೈಟಿ ಬನ್​ಗಳು ಹೀಗೆ ಹತ್ತು ಹಲವು ತಿಂಡಿಗಳು ಸೇರಿ ಪ್ರತಿಯೊಂದು ಕೂಡ ಹೆಚ್ಚು ಪ್ರಸಿದ್ಧಿ ಪಡೆದುಕೊಳ್ಳುತ್ತಿವೆ. ಇದರಿಂದ ಬೇಕರಿ ಬಿಸಿನೆಸ್ ಬೆಳೆಯುತ್ತಾ ಸಾಗುತ್ತಿದೆ.

ಪ್ರತಿಯೊಬ್ಬರಿಗೂ ಬೇಕರಿ ಬಿಸಿನೆಸ್ ಸಾಧ್ಯನಾ?: Baking is a Creative Way to Make Money ಅನ್ನೋ ಮಾತನ್ನು ನೀವೆಲ್ಲರೂ ಕೇಳಿರಬಹುದು. ಇದರಂತೆ ನೀವು ಕೂಡ ಬೇಕ್ ಮಾಡುವುದರ ಮೂಲಕ ಮನೆಯಲ್ಲೇ ಹಣ ಗಳಿಸೋದಕ್ಕೆ ಸಾಧ್ಯ. ಮನೆಯಲ್ಲಿಯೇ ಬಿಡುವಿನ ಸಮಯದಲ್ಲಿ ಬೇಕರಿ ತಿನಿಸುಗಳನ್ನು ಮಾಡಿ ಅವುಗಳನ್ನು ಮಾರಾಟ ಮಾಡುವುದರ ಮೂಲಕ ಹಣ ಸಂಪಾದನೆ ಮಾಡಬಹುದು. ಇದಕ್ಕೆ ಯಾವುದೇ ವಿದ್ಯಾರ್ಹತೆ ಬೇಕಿಲ್ಲ ಕೇವಲ ನಿಮ್ಮ ಅನುಭವ ಮತ್ತು ಸ್ಕಿಲ್ ನಿಮನ್ನು ಓರ್ವ ಉದ್ಯಮಿಯಾಗಿ ಮಾಡುತ್ತೆ. ಕರೊನಾದಂತಹ ಪ್ಯಾಂಡಮಿಕ್ ಸಮಯದ ಬಳಿಕ ಈ ಹೋಮ್ ಬೇಸ್ಡ್ ಬಿಸಿನೆಸ್​ಗಳು ಗೃಹಿಣಿಯರು ಕೂಡ ಹಣ ಗಳಿಸಿಕೊಂಡು ಸ್ವಾವಲಂಬನೆ ಬದುಕು ಸಾಗಿಸುವುದಕ್ಕೆ ಸಹಾಯಕವಾಗುತ್ತಿವೆ.

ಕಡಿಮೆ ಖರ್ಚಿನಲ್ಲಿಯೇ ಆರಂಭಿಸಿ: ಬೇಕರಿ ಅಂದ ಕ್ಷಣ ನಮ್ಮ ಎಲ್ಲರ ಕಣ್ಣ ಮುಂದೆ ಬರೋದೇ ವೆರೈಟಿ ಕೇಕ್​ಗಳು, ತಿಂಡಿ-ತಿನುಸುಗಳು ಹಾಗೂ ಗ್ರಾಹಕರು. ಇದೆಲ್ಲವನ್ನು ನೋಡಿದ ಬಳಿಕ ಈ ಬಿಸಿನೆಸ್ ಆರಂಭಕ್ಕೆ ಬಂಡವಾಳ ಜಾಸ್ತಿ ಬೇಕಾ? ಕೊಠಡಿ ಹೇಗಿರಬೇಕು? ವಿವಿಧ ತಿಂಡಿ ತಿನಿಸು ಮಾಡುವುದಕ್ಕೆ ಎಷ್ಟು ಹಣ ಬೇಕಾಗುತ್ತೆ? ಅಂತೆಲ್ಲಾ ಯೋಚನೆ ನಮಗೆ ಬರೋದು ಸಹಜ. ಅದ್ರೆ ಈ ಬಿಸಿನೆಸ್ ನಿಮ್ಮ ಮನೆಯಲ್ಲಿಯೇ ನೀವು ಆರಂಭಿಸುವುದರಿಂದ ಕಡಿಮೆ ಬಂಡವಾಳದಲ್ಲಿಯೇ ಇದನ್ನು ಆರಂಭಿಸಬಹುದು. ಅದರಲ್ಲಿಯೂ ಮನೆಯಲ್ಲಿರುವಂತಹ ಸಲಕರಣೆ ಬಳಸಿಕೊಂಡರೇ ಖರ್ಚು ತುಂಬಾ ಕಡಿಮೆಯಾಗುತ್ತೆ.

ಬೇಕರಿ ಬಿಸಿನೆಸ್ ಬೇಡಿಕೆ: ಮಹಿಳೆಯರು, ನಿವೃತ್ತರು, ಮಕ್ಕಳು ಮತ್ತು ಪಾರ್ಟ್ ಟೈಮ್ ಫುಲ್ ಟೈಮ್ ಕೆಲಸ ಮಾಡುವವರು ಬೇಕರಿ ಬಿಸಿನೆಸ್ ಮಾಡುವುದಕ್ಕೆ ಸಾಧ್ಯ. ಹಾಗೆ ನೋಡುವುದಾದರೆ ಭಾರತದ ಬೇಕರಿ ಬಿಸಿನೆಸ್ ಮಾರ್ಕೆಟ್ ಮೌಲ್ಯ-2020ರಲ್ಲಿ 7.60 ಬಿಲಿಯನ್ ಅಂದರೆ 57 ಸಾವಿರ ಕೋಟಿ ರೂ. ಅದೇ 2026ಕ್ಕೆ 12.39 ಬಿಲಿಯನ್ ಅಂದರೆ 93 ಸಾವಿರ ಕೋಟಿ ರೂ.ಗೆ ಏರುವ ನಿರೀಕ್ಷೆ ಇದೆ. ಅಂದರೆ ಕೇವಲ ಇನ್ನು 4 ವರ್ಷಗಳಲ್ಲಿ ಈ ಬಿಸಿನೆಸ್ 36 ಸಾವಿರ ಕೋಟಿ ರೂ. ಪ್ರಗತಿ ಆಗೋ ನಿರೀಕ್ಷೆ ಇದೆ.

ಬೇಕರಿ ಬಿಸಿನೆಸ್ ಖರ್ಚು- ಲಾಭ: ಭಾರತದಲ್ಲಿ ಕೇಕ್ ಮತ್ತು ಬೇಕರಿ ಐಟಮ್ಸ್ಗೆ ಬೇಡಿಕೆ ಹೆಚ್ಚಿದೆ. ಯಾವುದೇ ಮಿಸ್ಟೇಕ್ ಮಾಡದೇ ಸರಿಯಾದ ರೀತಿಯಲ್ಲಿ ಬೇಕರಿ ಬಿಸಿನೆಸ್ ಮಾಡಿ ಲಾಸ್ ಆದವರೇ ಇಲ್ಲ ಅಂತಾ ಹೇಳಬಹುದು. ಉತ್ತಮ ರುಚಿ, ಗುಣಮಟ್ಟ ಹಾಗೂ ಪ್ರತಿಯೊಬ್ಬರಿಗೂ ಸಾಧ್ಯವಾಗುವಂತಹ ಬೆಲೆಯಲ್ಲಿ ಮಾರಾಟ ಮಾಡಿದ್ರೆ ಈ ಬಿಸಿನೆಸ್​ನಲ್ಲಿ ಲಾಭ ಗ್ಯಾರಂಟಿ. ಈ ಬಿಸಿನೆಸ್​ನಲ್ಲಿ ಶೇ.70 ಲಾಭ ಪಡೆದುಕೊಳ್ಳುವಂತಹ ಅವಕಾಶವಿದೆ. ಇಷ್ಟೇ ಅಲ್ಲದೇ ಇದು ವರ್ಷದ 365 ದಿನವೂ ಬೇಡಿಕೆ ಹೊಂದಿದೆ.

ಉದಾಹರಣೆಗೆ: ಒಂದು ಕೇಕ್ ತಯಾರಿ ಮಾಡುವುದಕ್ಕೆ 1 ಗಂಟೆ ಸಮಯ ತೆಗೆದುಕೊಂಡರೂ, ದಿನಕ್ಕೆ 5 ಕೇಕ್ ಮಾಡಬಹುದು ಅದು ಕೂಡ ಬಿಡುವಿನ ಸಮಯದಲ್ಲಿ. ಇದರಲ್ಲಿ 1 ಕೇಕ್ ಬೆಲೆ ಕನಿಷ್ಠ 500 ರೂ. ಅಂತ ಲೆಕ್ಕ ಹಾಕಿದ್ರು 5 ಕೇಕ್​ಗೆ 2.5 ಸಾವಿರ ರೂ. ಆದಾಯ ಬರುತ್ತೆ. ಇದರಲ್ಲಿ ಶೇ. 30 ಖರ್ಚು ಅಂದ್ರೆ 750 ರೂ. ಹೋದರೂ, 1750 ರೂ. ದಿನಕ್ಕೆ ಲಾಭ ಗಳಿಸಬಹುದು. ಅಂದರೆ ತಿಂಗಳಿಗೆ 50 ಸಾವಿರ ರೂ. ವರ್ಷಕ್ಕೆ ಕನಿಷ್ಠ 5- 6 ಲಕ್ಷ ಲಾಭ ಪಡೆಯುವ ಅವಕಾಶ ಈ ಬಿಸಿನೆಸ್​ನಲ್ಲಿ ಇದೇ.

ffreedom appನಲ್ಲಿ ಹೋಮ್ ಬೇಕರಿ ಬಿಸಿನೆಸ್: ಪ್ರತಿಯೊಬ್ಬರು ಆರ್ಥಿಕವಾಗಿ ಪ್ರಗತಿ ಕಂಡು ಕೊಳ್ಳಬೇಕು ಎಂಬ ಉದ್ದೇಶ ಹೊಂದಿರುವಂತಹ ffreedom app ಹೋಮ್ ಬೇಸ್ಡ್ ಬೇಕರಿ ಬಿಸಿನೆಸ್ ಎಂಬ ಕೋರ್ಸ್ ಅನಾವರಣ ಮಾಡುತ್ತಿದೆ. ಹೋಮ್ ಬೇಸ್ಡ್ ಬೇಕರಿ ಬಿಸಿನೆಸ್ ನಲ್ಲಿ ಸಾಕಷ್ಟು ವರ್ಷಗಳ ಅನುಭವ ಹೊಂದಿರುವ ಮೈಸೂರಿನ ಯಶಸ್ವಿ ಮಹಿಳಾ ಉದ್ಯಮಿ ಯಶ್ಚಿಕಾ ನಿಮಗೆ ಮಾರ್ಗದರ್ಶನ ನೀಡುತ್ತಾರೆ.

ಇದರ ಜತೆಗೆ ನೀವು ffreedom appನಲ್ಲಿ ಕೃಷಿ, ಬಿಸಿನೆಸ್ ಮತ್ತು ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದಂತೆ 800ಕ್ಕೂ ಹೆಚ್ಚು ಕೋರ್ಸ್​ಗಳನ್ನು ನೋಡಬಹುದು ಮತ್ತು ಪ್ರತಿಯೊಬ್ಬ ಯಶಸ್ವಿ ಮಾರ್ಗದರ್ಶಕರಿಂದ ನೀವು ಕೂಡ ಕಲಿತು ಅದನ್ನು ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಬಹುದು.

ಕೋರ್ಸ್​ನಲ್ಲಿ ಏನಿದೆ?

1 ಕೋರ್ಸ್ ಪರಿಚಯ

2 ಮಾರ್ಗದರ್ಶಕರ ಪರಿಚಯ

3 ಏನಿದು ಹೋಮ್ ಬೇಸ್ಡ್ ಬೇಕರಿ ಬಿಸಿನೆಸ್?

4 ಬೇಕರಿ ಉತ್ಪನಗಳು ಸಿದ್ಧತೆ

5 ಬಂಡವಾಳ, ಪರವಾನಗಿ, ಅನುಮತಿ ಮತ್ತು ನೋಂದಣಿ

6 ಅಗತ್ಯ ಸಲಕರಣೆ ಮತ್ತು ಕಚ್ಚಾವಸ್ತು

7 ಕಾರ್ವಿುಕರು, ಮೂಲ ಸೌಕರ್ಯ ಮತ್ತು ಶೇಖರಣೆ

8 ಗ್ರಾಹಕರು ಮತ್ತು ಸರ್ವಿಸ್

9 ಮಾರ್ಕೆಟಿಂಗ್ ಮತ್ತು ಸ್ಥಳ ಆಯ್ಕೆ

10 ಬೆಲೆ ನಿಗದಿ ಮತ್ತು ಪ್ಯಾಕಿಂಗ್

11 ಆದಾಯ, ಖರ್ಚು ಮತ್ತು ಲಾಭ

ffreedom appನಿಂದ ffreedom nest ಅನಾವರಣ

ffreedom appನಲ್ಲಿರುವ ಕೋರ್ಸ್ ಗಳ ಮಾರ್ಗದರ್ಶನ ಪಡೆದು ಬಳಿಕ ತಮ್ಮದೆ ಬಿಸಿನೆಸ್ ಆರಂಭಿಸಿದ ಹೊಸ ಉದ್ಯಮಿಗಳ ಬ್ರಾ್ಯಂಡ್ ಲಾಚ್ ಮಾಡುವುದಕ್ಕೆ ಇರುವಂತಹ ವೇದಿಕೆ ffreedom nest. ಇದರ ಅಡಿಯಲ್ಲಿ ಬ್ರಾ್ಯಂಡ್ ಬಿಲ್ಡ್ ಹೇಗೆ? ಮಾರ್ಕೆಟಿಂಗ್ ಹೇಗೆ? ಎಂಬುದರ ಬಗ್ಗೆ ಮಾಹಿತಿ ದೊರೆಯಲಿದೆ.

ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡ ಬಯಸುವವರಿಗೆ ffreedom appನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಮಾಡಿ - 02262116777