1) ಗಾಣದ ಎಣ್ಣೆ ತಯಾರಿಕೆ ಬಿಸಿನೆಸ್: ರೈತರು ಸೂರ್ಯಕಾಂತಿ, ಕಡಲೆಬೀಜ, ಎಳ್ಳು, ಹುಚ್ಚೆಳ್ಳು, ಸಾಸಿವೆ ಹೀಗೆ ಅನೇಕ ಧಾನ್ಯಗಳನ್ನು ಬೆಳೆದು ಸರಿಯಾದ ಬೆಲೆ ಸಿಗದೆ ದಲ್ಲಾಳಿಗಳು ಹೇಳಿದ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಹೀಗೆ ಮಾಡುವ ಬದಲು ಹಳ್ಳಿಗಳ ಮಟ್ಟದಲ್ಲಿ, ಹೋಬಳಿ ಮಟ್ಟದಲ್ಲಿ ಕಡಿಮೆ ಬಂಡವಾಳದೊಂದಿಗೆ ಗಾಣದ ಎಣ್ಣೆ ಘಟಕ ಆರಂಭಿಸಿದರೆ ಖಾದ್ಯ ತೈಲ ಮಾರಾಟ ಮಾಡಿ ಒಳ್ಳೆಯ ಆದಾಯ ಗಳಿಸಬಹುದು. ಭಾರತ ಮುಕ್ಕಾಲು ಪಾಲು ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಆಮದಾಗುತ್ತಿರುವ ಅಡುಗೆ ಎಣ್ಣೆಯ ಗುಣಮಟ್ಟದ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳಿವೆ. ಪರಿಸ್ಥಿತಿ ಹೀಗಿರುವಾಗ ಗುಣಮಟ್ಟದ ಅಡುಗೆ ಎಣ್ಣೆಗೆ ಒಳ್ಳೆಯ ಮಾರುಕಟ್ಟೆ ಇರುವುದರ ಬಗ್ಗೆ ಅನುಮಾನವೇ ಬೇಡ. ಆತ್ಮನಿರ್ಭರತೆಗೆ ಕೊಡುಗೆ ನೀಡುವ ಜತೆಗೆ ಉದ್ಯಮ ಕಟ್ಟಿ ಒಳ್ಳೆಯ ಆದಾಯ ಗಳಿಸಬೇಕು ಎಂದು ಚಿಂತಿಸುವವರಿಗೆ ಗಾಣದ ಎಣ್ಣೆ ತಯಾರಿಕೆ ಬಿಸಿನೆಸ್ ಒಳ್ಳೆಯ ಆಯ್ಕೆ. ಇದಕ್ಕೇನು ದೊಡ್ಡ ಬಂಡವಾಳದ ಅಗತ್ಯವಿಲ್ಲ. ಒಂದೆರಡು ಲಕ್ಷ ರೂ. ಹೂಡಿಕೆ ಮಾಡಿದರೆ ಉದ್ಯಮ ಶುರು ಮಾಡಬಹುದು.
2) ಕುರಿ-ಮೇಕೆ ಸಾಕಣೆ ಬಿಸಿನೆಸ್: ಇತ್ತೀಚೆಗೆ ಸ್ಯಾಂಡಲ್ವುಡ್ ನಾಯಕ ನಟರೊಬ್ಬರು ಸುದ್ದಿವಾಹಿನಿ ಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕುರಿ ಸಾಕಣೆ ಬಗ್ಗೆ ಮಾತನಾಡುತ್ತ, ಕುರಿ ಇದ್ರೆ ಎಟಿಎಂ ಇದ್ದ ಹಾಗೆ, ಕುರಿ ಸಾಕಿದರೆ ಮನೆ ಮುಂದೆಯೇ ಬಂದು ದುಡ್ಡು ಕೊಟ್ಟು ಖರೀದಿಸುವ ಮಂದಿ ಇದ್ದಾರೆ. ಸರಿಯಾಗಿ ಸಾಕಣೆ ಮಾಡಿದರೆ ಸಣ್ಣ ಮೊತ್ತದ ಹೂಡಿಕೆಯೊಂದಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಸಾಧ್ಯ ಎಂದು ಹೇಳಿದ್ದರು. ಕರ್ನಾಟಕದಲ್ಲಿ ಕುರಿ ಸಾಕಣೆ ಮಾಡಿ ವರ್ಷಕ್ಕೆ 10 ರಿಂದ 50 ಲಕ್ಷ ರೂ. ವರೆಗೆ ಸಂಪಾದಿಸುತ್ತಿರುವ ಅನೇಕ ರೈತರಿದ್ದಾರೆ. ಮಾಂಸಾಹಾರಿಗಳ ಸಂಖ್ಯೆಯೂ ಹೆಚ್ಚು ಇರುವುದರಿಂದ ಕುರಿ ಮತ್ತು ಮೇಕೆ ಸಾಕಣೆಗೆ ಬೇಡಿಕೆ ಇದ್ದೇ ಇದೆ. ಬೆಂಗಳೂರಿನಲ್ಲಿ 1 ಕೆ.ಜಿ. ಮಟನ್ ಬೆಲೆ 700ರಿಂದ 800 ರೂ. ವರೆಗೂ ಇದೆ. ಅಂದರೆ ಅಂದಾಜು ಮಾಡಿ ಕುರಿ ಸಾಕಣೆಯಲ್ಲಿ ಎಷ್ಟು ಲಾಭವಿದೆ ಅಂತ.
3) ಉಪ್ಪಿನಕಾಯಿ ಬಿಸಿನೆಸ್: ಮಾವಿನಕಾಯಿ, ನಿಂಬೆಕಾಯಿ, ಹಿರಳೇಕಾಯಿ, ಮೆಣಸಿನಕಾಯಿ, ಅಮ್ಟೆಕಾಯಿ ಹೀಗೆ ಎಲ್ಲ ರೀತಿಯ ಕಚ್ಚಾ ವಸ್ತುಗಳು ಗ್ರಾಮೀಣ ಪ್ರದೇಶದಲ್ಲಿ ಸುಲಭದಲ್ಲಿ ಸಿಗುತ್ತವೆ. ಈ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡುವ ಬದಲು ಅವೆಲ್ಲವನ್ನೂ ಸೇರಿಸಿ ಉಪ್ಪಿನಕಾಯಿ ತಯಾರಿಸಿ ಬ್ರಾ್ಯಂಡ್ ಮಾಡಿ ಮಾರಾಟ ಮಾಡಿದರೆ ಒಳ್ಳೆಯ ಆದಾಯ ಗಳಿಸಬಹುದು. ಮೊದಲಿಗೆ ಮನೆಯಲ್ಲಿ ಮಾತ್ರ ತಯಾರಿಸುತ್ತಿದ್ದ ಉಪ್ಪಿನಕಾಯಿ ಈಗ ದೊಡ್ಡ ಉದ್ಯಮವಾಗಿ ಬೆಳೆದಿದೆ. ಉಪ್ಪಿನಕಾಯಿ ಇಲ್ಲದ ಊಟ ಸಂಪೂರ್ಣವೇ ಆಗದು ಎನ್ನುವಷ್ಟರ ಮಟ್ಟಿಗೆ ಉಪ್ಪಿನಕಾಯಿ ಪ್ರಾಮುಖ್ಯತೆ ಗಳಿಸಿದೆ. ಹಲವರು ಮನೆಯಿಂದಲೇ ಸಣ್ಣ ಪ್ರಮಾಣದಲ್ಲಿ ಉಪ್ಪಿನಕಾಯಿ ವ್ಯವಹಾರ ಆರಂಭ ಮಾಡಿ, ಸದ್ಯ ಲಕ್ಷಾಂತರ ರೂ. ಗಳಿಸುತ್ತಿದ್ದಾರೆ. ಉಪ್ಪಿನಕಾಯಿ ಗ್ರಾಹಕರಿಗೆ ಊಟದ ರುಚಿ ಹೆಚ್ಚಿಸುವ ಜತೆಗೆ ತಯಾರಕರ ಜೇಬನ್ನೂ ತುಂಬಿಸುತ್ತಿದೆ. ಉಪ್ಪಿನಕಾಯಿ ಬಿಸಿನೆಸ್ ಮಾಡಲು ಹತ್ತಿಪ್ಪತ್ತು ಸಾವಿರ ರೂ. ಬಂಡವಾಳವಿದ್ದರೆ ಸಾಕು. ಇನ್ನೇಕೆ ಚಿಂತೆ ಮಾಡುತ್ತಿದ್ದೀರಾ ಉಪ್ಪಿನಕಾಯಿ ಬಿಸಿನೆಸ್ ಶುರು ಮಾಡೋಕೆ ಕಲಿಕೆ ಶುರು ಮಾಡಿ.
4) ಕ್ಯಾಂಡಲ್ ತಯಾರಿಕೆ ಬಿಸಿನೆಸ್: ಕ್ಯಾಂಡಲ್ ಬಿಸಿನೆಸ್ ಅತಿ ಸರಳವಾಗಿ ಶುರುಮಾಡುವಂತಹ ಉದ್ದಿಮೆ. ಇದಕ್ಕೆ ಹೆಚ್ಚೇನು ಬಂಡವಾಳದ ಅವಶ್ಯಕತೆ ಬರುವುದಿಲ್ಲ. ಸಣ್ಣ ಪ್ರಮಾಣದಲ್ಲಿ ಶುರುಮಾಡಲು ಕೇವಲ 15 ರಿಂದ 20 ಸಾವಿರ ರೂ. ಸಾಕಾಗುತ್ತದೆ. 50 ರಿಂದ 60 ಸಾವಿರ ಹೂಡಿಕೆ ಮಾಡಲು ಶಕ್ತಿ ಇರುವವರು ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಉದ್ದಿಮೆ ಆರಂಭಿಸ ಬಹುದು. ಆರಂಭ ದಲ್ಲಿ ಮೇಣಕ್ಕೆ, ಅಚ್ಚಿಗೆ ಮತ್ತು ಗ್ಯಾಸ್ಗೆ ಹಣ ಹೊಂದಿಸಿಕೊಂಡರೆ ಇನ್ಯಾವ ಹೂಡಿಕೆ ಈ ಉದ್ದಿಮೆ ಯಲ್ಲಿರುವುದಿಲ್ಲ. ತದನಂತರ ಕೇವಲ ಅಗತ್ಯಕ್ಕೆ ತಕ್ಕಂತೆ ಮೇಣ, ದ್ರವ್ಯಗಳನ್ನು ಕೊಂಡುಕೊಂಡರೆ ಆಯಿತಷ್ಟೇ. ಇನ್ನು ವಿನ್ಯಾಸಕ್ಕೆ ತಕ್ಕಂತೆ ಬೇಕಾಗುವ ಕಚ್ಚಾ ವಸ್ತುಗಳು ಸ್ಥಳೀಯ ಮಾರುಕಟ್ಟೆಯಲ್ಲೇ ಲಭ್ಯವಿರುತ್ತದೆ. 2020ರ ಗ್ಲೋಬಲ್ ಮಾರ್ಕೆಟ್ ಸರ್ವೆ ಪ್ರಕಾರ ಕ್ಯಾಂಡಲ್ ಬಿಸಿನೆಸ್ ಮಾರುಕಟ್ಟೆ ಮೌಲ್ಯ ಸುಮಾರು 2601 ಕೋಟಿ ರೂ. ಭಾರತದಲ್ಲಿ ಕ್ಯಾಂಡಲ್ ಬಿಸಿನೆಸ್ ವಾರ್ಷಿಕ ಶೇ.20ರ ಪ್ರಗತಿ ಸಾಧಿಸುತ್ತಿದೆ. ಉತ್ತಮ ಫ್ರಾಗ್ರಾನ್ಸ್ ಮತ್ತು ಡಿಸೈನ್ ನೀಡಿದರೆ ದೇಶ-ವಿದೇಶಗಳಿಂಲೂ ಬೇಡಿಕೆ ಬರುತ್ತದೆ. ಸ್ಪಾ, ರೆಸಾರ್ಟ್, ಧ್ಯಾನ ಕೇಂದ್ರ, ಈವೆಂಟ್ ಮ್ಯಾನೆಜ್ವೆುಂಟ್ ಸಂಸ್ಥೆಗಳು ಕ್ಯಾಂಡಲ್ ಉದ್ದಿಮೆಯ ದೊಡ್ಡ ಪ್ರಮಾಣದ ಗ್ರಾಹಕರು.
ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಕಡಿಮೆ ಬಂಡವಾಳದಲ್ಲಿ ಹಳ್ಳಿಯಿಂದ ಆರಂಭಿಸಬಹುದಾದ ಸಾಕಷ್ಟು ಉದ್ಯಮಗಳ ಬಗ್ಗೆ ಮಾಹಿತಿ ಇದೆ. ಗಾಣದ ಎಣ್ಣೆ, ಕುರಿ ಸಾಕಣೆ, ಉಪ್ಪಿನಕಾಯಿ, ಕ್ಯಾಂಡಲ್ ತಯಾರಿಕೆ, ಅಡಿಕೆ ತಟ್ಟೆ ತಯಾರಿಕೆ, ಪೇಪರ್ ಪ್ಲೇಟ್ ತಯಾರಿಕೆ, ಕೋಳಿ, ಹಂದಿ, ಮೊಲ, ಜೇನು ಸಾಕಣೆ, ಬಾಟಲ್ ನೀರು ತಯಾರಿಕೆ ಘಟಕ, ಗೌಜುಗ ಹಕ್ಕಿ ಸಾಕಣೆ ಸೇರಿ ಹತ್ತಾರು ಕೋರ್ಸ್ಗಳನ್ನು ರೂಪಿಸಲಾಗಿದೆ. ನಿರ್ದಿಷ್ಟ ಉದ್ಯಮದಲ್ಲಿ ಯಶಸ್ಸುಗಳಿಸಿರುವ ಸಾಧಕರೇ ಈ ಕೋರ್ಸ್ಗಳಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಹಾಗಾದ್ರೆ ಇನ್ನೇಕೆ ತಡ, ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿ ವಿವಿಧ ಬಿಸಿನೆಸ್ ಕೋರ್ಸ್ಗಳನ್ನು ನೋಡಿ, ನಿಮಗಿಷ್ಟದ ಬಿಸಿನೆಸ್ ಆಯ್ಕೆ ಮಾಡಿಕೊಂಡು ಉದ್ಯಮ ಶುರು ಮಾಡಿ.