ಅಂಕಣ

ಹಣ್ಣಿನ ಕೃಷಿ, ಭರ್ಜರಿ ಆದಾಯದ ಖುಷಿ: ಮನಿಮಾತು

Webdesk - Ravikanth
ಕೃಷಿಯಲ್ಲಿ ಹೆಚ್ಚು ಆದಾಯ ಗಳಿಸಬೇಕು ಅಂದ್ರೆ ತೋಟಗಾರಿಕೆ ಬೆಳೆಗಳತ್ತ ಗಮನಹರಿಸಬೇಕು. ಅದರಲ್ಲೂ ಹಣ್ಣಿನ ಬೆಳೆಗಳನ್ನು ಬೆಳೆದಾಗ ರೈತರು ನಿರಂತರವಾಗಿ ಸ್ಥಿರ ಆದಾಯ ಗಳಿಸಲು ಸಾಧ್ಯ. ಬನ್ನಿ, ಹೆಚ್ಚು ಲಾಭ ತಂದುಕೊಡಬಹುದಾದ ಮೂರು ವಾಣಿಜ್ಯ ಹಣ್ಣಿನ ಬೆಳೆಗಳ ಬಗ್ಗೆ ತಿಳಿದುಕೊಳ್ಳೋಣ.

ತೈವಾನ್ ಸೀಬೆ -ಎಕರೆಗೆ 5 ಲಕ್ಷ ರೂ. ಸಂಪಾದಿಸಿ: ವಿಶ್ವದಲ್ಲಿ ಅತಿ ಹೆಚ್ಚು ಸೀಬೆ ಬೆಳೆಯುವ ದೇಶ ಭಾರತ. ವಾರ್ಷಿಕ ಸುಮಾರು 2 ಕೋಟಿ 80 ಲಕ್ಷ ಟನ್ ಪೇರಳೆ ನಮ್ಮಲ್ಲಿ ಉತ್ಪಾದನೆಯಾಗುತ್ತದೆ. ನಮ್ಮ ದೇಶದಿಂದ 29 ದೇಶಗಳಿಗೆ ಸೀಬೆಹಣ್ಣು ರಫ್ತಾಗುತ್ತೆ. ಆದರೆ, ನಾವು ವಿದೇಶಕ್ಕೆ ರಫ್ತು ಮಾಡುತ್ತಿರುವುದು 6 ಕೋಟಿ 68 ಲಕ್ಷ ರೂ. ಮೌಲ್ಯದ ಸೀಬೆ ಮಾತ್ರ. ಸೀಬೆಹಣ್ಣಿನ ಆರೋಗ್ಯದ ಗುಣಗಳ ಬಗ್ಗೆ ಜನರು ಜಾಗೃತರಾಗುತ್ತಿರುವುದರಿಂದ ಜಗತ್ತಿನೆಲ್ಲೆಡೆ ಸೀಬೆಹಣ್ಣಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅಂದ್ರೆ ಸೀಬೆ ಕೃಷಿ ಮಾಡಿ ಸಂಪಾದಿಸಬೇಕು ಅನ್ನೋರಿಗೆ ಎಂತಹ ದೊಡ್ಡ ಅವಕಾಶವಿದೆ ನೋಡಿ. ತೈವಾನ್ ಸೀಬೆ ಬೆಳೆಯಲು ದೊಡ್ಡ ಜಾಗವೇ ಬೇಕು ಎಂದೇನಿಲ್ಲ. ಒಂದು ಎಕರೆ ಜಮೀನಿದ್ದರೂ ಸಾಕು ಒಳ್ಳೆಯ ರೀತಿ ಕೃಷಿ ಮಾಡಿದರೆ ಉತ್ತಮ ಲಾಭ ಗಳಿಸಬಹುದು. ನೀರಿನ ಸಮಸ್ಯೆ ಇದೆ, ಹೆಚ್ಚು ಬಂಡವಾಳ ಹಾಕೋಕೆ ಸಾಧ್ಯವಿಲ್ಲ, ಪ್ರತಿ ತಿಂಗಳು ಒಂದಿಷ್ಟು ನಿರ್ದಿಷ್ಟ ಆದಾಯ ಬೇಕು, ಬೆಳೆಗೆ ಒಳ್ಳೆಯ ಮಾರುಕಟ್ಟೆ ಬೇಕು ಅನ್ನೋರಿಗೆ ತೈವಾನ್ ಸೀಬೆ ಹೇಳಿ ಮಾಡಿಸಿದಂತಿದೆ. ಸಾಮಾನ್ಯ ಸೀಬೆ ತಳಿಯಲ್ಲಿ ಎಕರೆಗೆ 60 ಗಿಡ ಬೆಳೆಸಬಹುದು. ಆದರೆ ತೈವಾನ್ ವೆರೈಟಿಯಲ್ಲಿ ಎಕರೆಗೆ 800 ಗಿಡ ಹಾಕಬಹುದು ಕಲ್ಲು ಭೂಮಿ ಹೊರತುಪಡಿಸಿ ಎಲ್ಲ ರೀತಿಯ ಭೂಮಿಗಳಲ್ಲೂ ಈ ಬೆಳೆ ಬೆಳೆಯಬಹುದು. ಮೊದಲ ಬಾರಿಗೆ ಸೀಬೆ ನಾಟಿ ಮಾಡಿದರೆ ಒಂದು ಎಕರೆಗೆ ಸುಮಾರು 2 ಲಕ್ಷ ರೂ. ಖರ್ಚು ಬರುತ್ತದೆ. ನಂತರದಲ್ಲಿ ಪ್ರತಿ ವರ್ಷ ಖರ್ಚು ಕಳೆದು ಸುಮಾರು 5 ಲಕ್ಷ ರೂ. ಲಾಭ ಸಿಗುತ್ತದೆ. ಅಂದರೆ ತಿಂಗಳ ಸಂಬಳ ಬರುವ ಹಾಗೆ ಪ್ರತಿ ತಿಂಗಳು 40,000 ರೂ. ಆದಾಯ ಸಿಗುತ್ತದೆ.

ಡ್ರ್ಯಾಗನ್​ ಫ್ರೂಟ್​ ಕೃಷಿ- ಎಕರೆಗೆ 5 ಲಕ್ಷ ರೂ. ಗಳಿಕೆ: ಸಾಕಷ್ಟು ಕೃಷಿ ಭೂಮಿ ಇದೆ, ಆದರೆ ಹೆಚ್ಚಿಗೆ ನೀರಿಲ್ಲ. ಏನಾದರೊಂದು ಹೊಸ ಬಗೆಯ ವಾಣಿಜ್ಯ ಕೃಷಿ ಮಾಡಬೇಕು ಅಂದ್ರೆ ವಿದೇಶಿ ಬೆಳೆ ಡ್ರಾ್ಯಗನ್ ಫೂ›ಟ್ ಒಳ್ಳೆಯ ಆಯ್ಕೆ. ಈ ಹಣ್ಣಿನ ಬೆಳೆಯನ್ನು ಯಾವ ರೀತಿಯ ಮಣ್ಣಿನಲ್ಲಾದರೂ ಬೆಳೆಯಬಹುದು. ಜತೆಗೆ ಬೇಸಿಗೆಯಲ್ಲಿ 40 ಡಿಗ್ರಿಯಷ್ಟು ಬಿಸಿಲನ್ನು ಡ್ರಾ್ಯಗನ್ ಫೂ›ಟ್ ತಡೆದುಕೊಳ್ಳುತ್ತದೆ. ಸಮಶೀತೋಷ್ಣ ವಾತಾವರಣದಲ್ಲೂ ಡ್ರಾ್ಯಗನ್ ಫೂ›ಟ್ ಅನ್ನು ಚೆನ್ನಾಗಿ ಬೆಳೆಯಬಹುದು. ಇನ್ನು ಇದಕ್ಕೆ ಹೆಚ್ಚು ಆರೈಕೆ ಮಾಡುವ ಅಗತ್ಯವಿಲ್ಲ. ವಾರದಿಂದ 10 ದಿನಕ್ಕೊಮ್ಮೆ ನೀರು ಕೊಟ್ಟರೆ ಸಾಕು. ಮತ್ತೊಂದು ವಿಶೇಷ ಅಂದ್ರೆ ಡ್ರಾ್ಯಗನ್ ಫೂ›ಟ್ ಕೃಷಿಗೆ ಹಾಕಿದ ಆರಂಭಿಕ ಬಂಡವಾಳವನ್ನು ಎರಡರಿಂಡ ಮೂರು ವರ್ಷಗಳಲ್ಲಿ ಹಿಂಪಡೆಯಬಹುದು. ಭಾರತದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಸೇರಿ ಹಲವು ರಾಜ್ಯಗಳಲ್ಲಿ ಡ್ರಾ್ಯಗನ್ ಫೂ›ಟ್ ಕೃಷಿ ಮುನ್ನೆಲೆಗೆ ಬರುತ್ತಿದೆ. ಹಾಗಾಗಿ ಸ್ಥಳೀಯ ಮಾರುಟಕ್ಕೆಗೆ ಪೂರೈಕೆ ಮಾಡುವ ಜತೆಗೆ ವಿದೇಶಿ ಮಾರುಕಟ್ಟೆಗೆ ಡ್ರಾ್ಯಗನ್ ಫೂ›ಟ್ ರಫ್ತು ಮಾಡುವ ಅವಕಾಶವೂ ರೈತರಿಗಿದೆ. ಗಿಡಗಳನ್ನು ನಾಟಿ ಮಾಡಿದ ಮೂರು ವರ್ಷಗಳ ನಂತರ ಪ್ರತಿ ಎಕರೆಗೆ 5 ರಿಂದ 6 ಟನ್ ಇಳುವರಿ ನಿರೀಕ್ಷಿಸಬಹುದಾಗಿದೆ. ಈ ಹಣ್ಣಿಗೆ ಹೆಚ್ಚಿನ ಬೆಳಕು ಅಗತ್ಯವಿರುವುದರಿಂದ ಇದನ್ನು ಏಕ ಬೆಳೆಯಾಗಿ ಬೆಳೆಯಬೇಕು. ಸದ್ಯ ಮಾರುಕಟ್ಟೆಯಲ್ಲಿ ಡ್ರಾ್ಯಗನ್ ಫೂನ್​ನ ವೆರೈಟಿ ಮತ್ತು ಗುಣಮಟ್ಟ ಆಧರಿಸಿ ರೈತರಿಗೆ ಕೆ.ಜಿ. ಫೂ›ಟ್​ಗೆ 150 ರಿಂದ 200 ರೂ. ವರೆಗೆ ಸಿಗುತ್ತಿದೆ. ರಿಟೇಲ್ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಡ್ರಾ್ಯಗನ್ ಫೂ›ಟ್ ಬೆಲೆ 250 ರಿಂದ 450 ರೂ. ವರೆಗೆ ಇದೆ. ಋತುಮಾನ ಮತ್ತು ಗುಣಮಟ್ಟದ ಆಧಾರದಲ್ಲಿ ಬೆಲೆಯಲ್ಲಿ ಸ್ವಲ್ಪ ಏರಿಳಿತವಾಗುತ್ತದೆ.

ದಾಳಿಂಬೆ ಕೃಷಿ ಮಾಡಿ ಎಕರೆಗೆ 10 ಲಕ್ಷ ರೂ. ಗಳಿಸಿ: ದಾಳಿಂಬೆ ಉತ್ಪಾದನೆಯಲ್ಲಿ ಭಾರತ ವಿಶ್ವದ ಪ್ರಮುಖ ರಾಷ್ಟ್ರವಾಗಿದೆ. ದೇಶದಲ್ಲಿ ಕಳೆದ ಎರಡು ದಶಕಗಳ ಅವಧಿಯಲ್ಲಿ ದಾಳಿಂಬೆ ವಿಸ್ತೀರ್ಣ, ಉತ್ಪಾದನೆ ಮತ್ತು ರಫ್ತುಗಳಲ್ಲಿ ಸ್ಥಿರವಾಗಿ ಹೆಚ್ಚಳವಾಗುತ್ತಿದೆ. ದಾಳಿಂಬೆ ಬೆಳೆ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದ್ದು, ನಂತರ ಸ್ಥಾನದಲ್ಲಿ ಕರ್ನಾಟಕ, ಗುಜರಾತ್ ಮತ್ತು ಆಂಧ್ರಪ್ರದೇಶ ರಾಜ್ಯಗಳಿವೆ. ಜಾಗತಿಕ ಮಾರುಕಟ್ಟೆ ವಿಚಾರಕ್ಕೆ ಬರುವುದಾದರೆ 2018 ರ ಅಂಕಿ-ಅಂಶದಂತೆ ದಾಳಿಂಬೆಯ ಮಾರುಕಟ್ಟೆ ಮೌಲ್ಯ 59,860 ಕೋಟಿ ರೂ. ಇದು 2026ರ ವೇಳೆಗೆ 1,68,922 ಕೋಟಿ ರೂ.ಗೆ ಏರಿಕೆಯಾಗುವ ಅಂದಾಜಿದೆ. ಹಾಗಾಗಿ ದಾಳಿಂಬೆ ಬೆಳೆಗೆ ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಬೇಡಿಕೆ ಹೆಚ್ಚಳವಾಗೋದು ನಿಶ್ಚಿತ. ದಾಳಿಂಬೆ ಕೃಷಿ ಮಾಡಿ 10 ಲಕ್ಷ, 20 ಲಕ್ಷ, 30 ಲಕ್ಷ, 1 ಕೋಟಿ, 2 ಕೋಟಿ ರೂ. ಸಂಪಾದಿಸಿರುವ ಅನೇಕ ರೈತರು ಕರ್ನಾಟಕದಲ್ಲೇ ಇದ್ದಾರೆ. ಒಂದು ಎಕರೆ ದಾಳಿಂಬೆ ಕೃಷಿ ಮಾಡಲು ಆರಂಭದಲ್ಲಿ ಸಸಿ ವೆಚ್ಚ, ಡ್ರಿಪ್ ಖರ್ಚು, ಗೊಬ್ಬರ, ಕೆಲಸದವರ ಕೂಲಿ ಎಲ್ಲವೂ ಸೇರಿ ಒಂದರಿಂದ ಒಂದೂವರೆ ಲಕ್ಷ ರೂ. ಖರ್ಚು ಬರುತ್ತದೆ. ಎಕರೆಗೆ 300 ದಾಳಿಂಬೆ ಗಿಡಗಳನ್ನು ಬೆಳಸಬಹುದು. ಒಳ್ಳೆಯ ಇಳುವರಿ ತೆಗೆದರೆ ಒಂದು ಎಕರೆ ದಾಳಿಂಬೆಯಂದ 10 ರಿಂದ 12 ಲಕ್ಷ ರೂ. ಆದಾಯ ಪಡೆಯಬಹುದು.

ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಹಣ್ಣಿನ ಕೃಷಿ ಕೋರ್ಸ್: ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಹಣ್ಣಿನ ಬೆಳೆಗಳ ಕುರಿತಾದ ಹತ್ತಾರು ಕೋರ್ಸ್​ಗಳಿವೆ, ಡ್ರಾ್ಯಗನ್ ಫೂಟ್, ತೈವಾನ್ ಸೀಬೆ, ದಾಳಿಂಬೆ, ರಂಬೂಟಾನ್, ನೇರಳೆ, ಬಟರ್ ಫೂ›ಟ್, ಹಲಸಿನ ಹಣ್ಣು, ಪಪ್ಪಾಯ ಹೀಗೆ ಹತ್ತು ಹಲವು ಹಣ್ಣಿನ ಮಾದರಿಗಳ ಬಗ್ಗೆ ಇಲ್ಲಿ ಪೂರ್ಣ ಮಾಹಿತಿ ಕೋರ್ಸ್​ಗಳಿವೆ. ನಿರ್ದಿಷ್ಟ ಕ್ಷೇತ್ರದಲ್ಲಿ ಯಶಸ್ಸುಗಳಿಸಿರುವ ಸಾಧಕರೇ ಇಲ್ಲಿ ಮಾರ್ಗದರ್ಶಕರಾಗಿದ್ದಾರೆ. ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ, ಹಣ್ಣಿನ ಬೇಸಾಯದ ಬಗ್ಗೆ ಕಲಿತು ಹೆಚ್ಚೆಚ್ಚು ಆದಾಯ ಗಳಿಸಿ.

ಮೇಕಪ್ ಆರ್ಟಿಸ್ಟ್, ಅಣಬೆ ಮತ್ತು ಆಯಿಲ್ ಮಿಲ್ ಬಿಸಿನೆಸ್ ಬಗ್ಗೆ ಕಾರ್ಯಾಗಾರ: ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆ್ಯಪ್​ ​ವತಿಯಿಂದ ಮೇಕಪ್ ಆರ್ಟಿಸ್ಟ್, ಅಣಬೆ ಮತ್ತು ಗಾಣದ ಎಣ್ಣೆ (ಆಯಿಲ್ ಮಿಲ್) ಬಿಸಿನೆಸ್ ತರಬೇತಿ ಜತೆ ಉದ್ಯಮ ಮಾರ್ಗದರ್ಶನ ಕಾರ್ಯಾಗಾರ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 7975465873ಕ್ಕೆ ಸಂಪರ್ಕಿಸಿ.