| ರಮೇಶ್ ಮೈಸೂರು ಬೆಂಗಳೂರು
ಕೆಲಸದ ಸ್ಥಳದಲ್ಲಿ ಕಾರ್ವಿುಕರ ಸುರಕ್ಷತೆ, ಆರೋಗ್ಯ ಹಾಗೂ ಉತ್ತಮ ವಾತಾವರಣವನ್ನು ಖಾತ್ರಿಪಡಿಸಲೆಂದೇ ಸಂಹಿತೆಯನ್ನು ರೂಪಿಸಲಾಗಿದೆ. ಕಾರ್ವಿುಕ ಇಲಾಖೆ ಕರಡನ್ನು ಸಿದ್ಧಪಡಿಸಿದ್ದು, ಕೇಂದ್ರ ಸರ್ಕಾರದ ಅಂತಿಮ ಸಮ್ಮತಿ ಬಳಿಕ ಈ ನಿಯಮಗಳು ಜಾರಿಗೆ ಬರಲಿವೆ. ಈಗ ಎಲ್ಲ ಕಾರ್ವಿುಕ ಕಾಯ್ದೆಗಳನ್ನು ನಾಲ್ಕು ಸಂಹಿತೆಗಳಾಗಿ ಜಾರಿಗೊಳಿಸಲಾಗುತ್ತಿದೆ. ಅಂತೆಯೇ ಕಾರ್ವಿುಕರ ವೇತನ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ ಬಳಿಕ ಇದೀಗ ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿ ಸಂಹಿತೆಯ ಕರಡು ನಿಯಮಗಳನ್ನು ಬಿಡುಗಡೆ ಮಾಡಲಾಗಿದೆ. ಈ ಪ್ರಕಾರ, ಕಾರ್ವಿುಕರಿಗೆ ವರ್ಷಕ್ಕೊಮ್ಮೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಬೇಕು. ಕೆಲಸದ ಸ್ಥಳದಲ್ಲಿ ಅಸುರಕ್ಷಿತ, ಅನಾರೋಗ್ಯಕರ ವಾತಾವರಣ ಕಂಡುಬಂದಲ್ಲಿ ಕಾರ್ವಿುಕರು ಉದ್ಯೋಗದಾತರಿಗೆ ದೂರು ಸಲ್ಲಿಸಬಹುದು. ಸಂಬಂಧಪಟ್ಟವರು ಇದಕ್ಕೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಕ್ರಮಗಳನ್ನು ಕೈಗೊಂಡು, ಕಾರ್ವಿುಕ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಬೇಕು.
ರಾಜ್ಯ ಸಲಹಾ ಮಂಡಳಿ: ರಾಜ್ಯ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಸಲಹಾ ಮಂಡಳಿಯನ್ನು ಸ್ಥಾಪಿಸಬೇಕು.
ಸುರಕ್ಷತಾ ಸಮಿತಿ ರಚನೆ: ಪ್ರತಿ ಕಾರ್ಖಾನೆ, ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಯಲ್ಲಿ ಸುರಕ್ಷತಾ ಸಮಿತಿಯೊಂದನ್ನು ರಚಿಸತಕ್ಕದ್ದು. ಪ್ರತಿ ಸಂಸ್ಥೆಯಲ್ಲೂ ಸುರಕ್ಷತಾ ಅಧಿಕಾರಿಗಳನ್ನು ನೇಮಿಸುವುದು ಕಡ್ಡಾಯವಾಗಿದೆ. 500-1000 ಕಾರ್ವಿುಕರಿಗೆ ಒಬ್ಬರಂತೆ, ಇದಕ್ಕೂ ಹೆಚ್ಚಾಗಿದ್ದರೆ ಪ್ರತಿ ಸಾವಿರ ಸಿಬ್ಬಂದಿಗೆ ಒಬ್ಬರಂತೆ ನೇಮಿಸಬೇಕು.
ಸಂಘಟಿತ ಹಾಗೂ ಅಸಂಘಟಿತ ಕಾರ್ವಿುಕರೆಲ್ಲರೂ ಈ ನಿಯಮದಡಿಗೆ ಬರಲಿದ್ದಾರೆ. ಕೇಂದ್ರ ಸರ್ಕಾರವೂ ಈ ನಿಯಮಗಳನ್ನು ಅಂತಿಮಗೊಳಿಸಿದ ಬಳಿಕ ಅನುಷ್ಠಾನಕ್ಕೆ ತರಲಾಗುತ್ತದೆ. | ಕೆ. ಶ್ರೀನಿವಾಸ ಕಾರ್ವಿುಕ ಇಲಾಖೆ ನಿರ್ದೇಶಕ ಆಕ್ಷೇಪಣೆಗಳು ಸಲ್ಲಿಕೆಯಾದ ಬಳಿಕ ಸರ್ಕಾರದ ಮಟ್ಟದಲ್ಲಿ ಅವುಗಳ ವಿಚಾರಣೆ ನಡೆಸಬೇಕು. ಇದು ಕಾಟಾಚಾರದ ಪ್ರಕ್ರಿಯೆಯಾಗಬಾರದು. | ವಸಂತಕುಮಾರ್ ಎನ್. ಹಿಟ್ಟಣಗಿ ನಿವೃತ್ತ ಜಂಟಿ ಕಾರ್ವಿುಕ ಆಯುಕ್ತ
ಯಾರು ಒಳಗೊಳ್ಳುತ್ತಾರೆ?: ಸಿನಿರಂಗದ ಆಡಿಯೋ ವಿಡಿಯೋ ಪ್ರೊಡಕ್ಷನ್ ಘಟಕಗಳ ಕಾರ್ವಿುಕರು, ನಟರು, ಸಂಗೀತಗಾರರು, ಆಂಕರ್, ನ್ಯೂಸ್ ರೀಡರ್, ಡಾನ್ಸರ್, ಡಬ್ಬಿಂಗ್ ಕಲಾವಿದರು, ಕಾರ್ಖಾನೆ ಕಾರ್ವಿುಕರು, ಮೋಟಾರು ಸಾರಿಗೆ, ಬೀಡಿ-ಸಿಗಾರ್ ತಯಾರಿಸುವ ಕಾರ್ವಿುಕರು, ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ವಿುಕರು, ಗುತ್ತಿಗೆ ಕಾರ್ವಿುಕರು, ಶ್ರವಣ ಹಾಗೂ ದೃಶ್ಯ ಉದ್ಯಮಗಳ ಕಾರ್ವಿುಕರು, ಪತ್ರಕರ್ತರು, ಎಲ್ಲ ರಂಗದ ಗುತ್ತಿಗೆ ಕಾರ್ವಿುಕರು, ಬಂದು ಕೆಲಸದವರು, ಮಾರಾಟ ಸಿಬ್ಬಂದಿ.