ಅಂಕಣ

ರೋಜಾ ಬಾಯಿಗೆ ಬೀಗ..ಆಕೆ ರಾಜಕೀಯ ಜೀವನ ಮುಗಿಯಿತೇ?

ಅಮರಾವತಿ: ಆಂಧ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವಿನತ್ತ ಸಾಗುತ್ತಿದೆ. ವೈಸಿಪಿ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದ್ದು, ಬಹುತೇಕ ಎಲ್ಲಾ ಸಚಿವರು ಸೋಲುಂಡಿದ್ದಾರೆ. ಅವರಲ್ಲಿ ರೋಜಾ ಸಹ ಒಬ್ಬರು. ವೈಸಿಪಿಯಲ್ಲಿ ಅಬ್ಬರಿಸಿದ ನಾಯಕರಲ್ಲಿ ರೋಜಾಗೆ ಅಗ್ರಸ್ಥಾನ. ನಾಯಕ ಜಗನ್ ವಿರುದ್ಧ ಯಾವುದೇ ಸಣ್ಣ ಟೀಕೆ ಬಂದಾಗಲೂ ಮಾಧ್ಯಮಗಳ ಮುಂದೆ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದ ರೋಜಾ ಬಾಯಿಗೆ ಇನ್ನಾದರೂ ಬೀಗ ಬೀಳಲಿದೆ ಎಂದು ಜನರು ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದಾರೆ.

ರೋಜಾ ಬಾಯಿ ಜೋರು ಅಷ್ಟೇ ಅಲ್ಲ, ಆಕೆಯ ಸಹೋದರರು ಅಧಿಕಾರ ಚಲಾಯಿಸುತ್ತಿದ್ದರು. ಆಕೆ ವಿರುದ್ಧ ದೂರು ನೀಡಿದರೂ ಜಗನ್​ ಕ್ಯಾರೆ ಎನ್ನುತ್ತಿರಲ್ಲ. ರೋಜಾ ಸೋಲು ಬಹುತೇಕ ಫಿಕ್ಸ್ ಆಗಿತ್ತಾದರೂ, ಈಗ ಸೋಲುಂಡಿದ್ದಾರೆ. ಹಾಗಾದರೆ ಇನ್ನು ಮುಂದೆ ರೋಜಾ ಅವರ ರಾಜಕೀಯದ ಬದುಕು ಮುಗಿಯಿತೇ? ಎಂಬ ಕುರಿತು ಆಂಧ್ರದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಇನ್ನು ವೈಸಿಪಿ ಪರಿಸ್ಥಿತಿ ಹೇಗಿರುತ್ತೋ ಗೊತ್ತಿಲ್ಲ. ನಿನ್ನೆಯವರೆಗೂ ಅಧಿಕಾರದ ಅಸ್ತ್ರ ಬಳಸಿ ನಾಯಕರ ಮೇಲಿದ್ದ ಪ್ರಕರಣಗಳು ಮುಂದಕ್ಕೆ ಹೋಗದಂತೆ ತಡೆದಿದ್ದರು. ಈಗ ವಿಧಾನಸಭೆ ಮತ್ತು ಲೋಕಸಭೆ ಎರಡರಲ್ಲೂ ವೈಎಸ್‌ಪಿ ಹೀನಾಯವಾಗಿ ಸೋತಿದೆ. ಇನ್ನು ಮುಂದೆ ಕೇಂದ್ರದ ಬೆಂಬಲ ಇರುವುದಿಲ್ಲ. ಒಟ್ಟಿನಲ್ಲಿ ವೈಸಿಪಿ ವರಿಷ್ಠರಿಗೆ ಸಂಕಷ್ಟದ ಕಾಲ ಎದುರಾಗಿದೆ. ಹೀಗಿರುವಾಗ ರೋಜಾ ಅವರ ರಾಜಕೀಯ ಬದುಕು ಬಹುತೇಕ ಮುಕ್ತಾಯವಾದಂತೆಯೇ. ಇದೀಗ ವೈಸಿಪಿಯ ರಾಜಕೀಯ ಭವಿಷ್ಯ ಕರಾಳವಾಗಿದ್ದು, ರೋಜಾ ಮುಂದೇನು ಮಾಡುತ್ತಾರೆ? ಎಂದು ವಿಶ್ಲೇಷಕರು ಹೇಳುತ್ತಾರೆ.