ಮಕ್ಕಳು ತಪ್ಪು ಮಾಡಿದರೆ ಅದಕ್ಕೆ ಅಮ್ಮ- ಅಪ್ಪ ಕೂಡ ಹಲವಾರು ರೀತಿಯಲ್ಲಿ ಕಾರಣ ಎಂದು ತಿಳಿದವರು ಹೇಳುತ್ತಾರೆ. ಆದರೆ ಹೆಂಡತಿ ಅಪರಾಧ ಎಸಗಿದರೆ ಗಂಡನಿಗೆ ಶಿಕ್ಷೆಯಾಗುವುದನ್ನು ಎಲ್ಲಾದರೂ ಕೇಳಿದ್ದೀರಾ? ಇಂಥದ್ದೊಂದು ಕಾನೂನು ಜಾರಿಗೆ ಬಂದಿದೆ.
ಹಾಗಂತ ಭಾರತದಲ್ಲಿರುವ ಪತಿಯಂದಿರು ಹೆದರುವ ಕಾರಣವಿಲ್ಲ. ಏಕೆಂದರೆ ಈ ಕಾನೂನು ಜಾರಿಯಾಗಿರುವುದು ಅಮೆರಿಕದ ಉತಾಹ್ ಎಂಬ ಪ್ರಾಂತ್ಯದಲ್ಲಿ. ಆದರೆ ಒಂದೇ ಒಂದು ರಿಯಾಯಿತಿ ಗಂಡನಿಗೆ ನೀಡಲಾಗಿದೆ. ಅದೇನೆಂದರೆ, ಹೆಂಡತಿ ಅಪರಾಧ ಮಾಡಿದಾಗ ಗಂಡ ಆ ಸಮಯದಲ್ಲಿ ಅಲ್ಲಿ ಇದ್ದರೆ ಮಾತ್ರ ಗಂಡನಿಗೆ ಶಿಕ್ಷೆ, ಒಂದು ವೇಳೆ ಆತ ಸ್ಥಳದಲ್ಲಿ ಇಲ್ಲ ಎಂದು ಕೋರ್ಟ್ನಲ್ಲಿ ಪ್ರೂವ್ ಆದರೆ ಆತ ಬಚಾವ್! ಆದ್ದರಿಂದ ಹೆಂಡತಿ ತನ್ನ ಎದುರೇ ಯಾವ ತಪ್ಪು ಮಾಡಿದರೂ ಗಂಡನಾದವ ತುಟಿ ಪಿಟಿಕ್ ಎನ್ನದೇ ಸುಮ್ಮನೇ ಸಹಿಸಿಕೊಂಡಿರಬೇಕು.
ಗಂಡನಿಗೆ ಬುದ್ಧಿ ಕಲಿಸಲು ಅವನು ಇರುವಾಗಲೇ ಹೆಂಡತಿ ಅಪರಾಧ ಮಾಡಿದರೂ ಗಂಡ ಮೌನಕ್ಕೆ ಜಾರಲೇಬೇಕಾದ ಅನಿವಾರ್ಯತೆ ಇದೆ.