ಅಂಕಣ

ಬುಡಕಟ್ಟು ವಾಸಿಗಳಿಗೆ 500 ಶೌಚಗೃಹ ಕಟ್ಟಿ ಕೊಟ್ಟ ಅರಣ್ಯ ಇಲಾಖೆ ಮಹಿಳಾ ಅಧಿಕಾರಿ

ತಮ್ಮ ಉದ್ಯೋಗಕ್ಕಷ್ಟೇ ಸೀಮಿತವಾಗಿ ಕೆಲಸ ಮಾಡುವವರೇ ಹೆಚ್ಚು. ಆದರೆ ಫಾರೆಸ್ಟ್ ಬೀಟ್ ಆಫೀಸರ್ ಪಿ.ಜಿ.ಸುಧಾ, ಕಾಡಿನ ಸಂರಕ್ಷಣೆಯ ಜತೆಗೆ ಬುಡಕಟ್ಟು ಜನಾಂಗದವರ ಸುರಕ್ಷತೆ ಮತ್ತು ಏಳಿಗೆಗಾಗಿ ದುಡಿಯುತ್ತಿದ್ದಾರೆ.

ಫಾರೆಸ್ಟ್ ಬೀಟ್ ಆಫೀಸರ್​ಗಳ ಕೆಲಸ ಕೊಂಚ ಸವಾಲಿನದ್ದೇ. ವಾತಾವರಣ, ಭೂಪ್ರದೇಶ ಎಂಥದ್ದೇ ಆದರೂ ಅದಕ್ಕೆ ಹೆದರದೆ ತಮ್ಮ ಕೆಲಸದ ಭಾಗವಾಗಿ ಪ್ರತಿದಿನ ದಟ್ಟ ಕಾಡಿನ ಮೂಲೆಮೂಲೆಗೂ ಭೇಟಿಕೊಡಬೇಕು. ಅದರ ಜತೆಗೆ ಕಾಡುಪ್ರಾಣಿಗಳ ಹಾಗೂ ಕಾಡುಗಳ್ಳರ ಚಲನವಲನಗಳ ಮೇಲೆಯೂ ಸದಾ ಒಂದು ಕಣ್ಣಿಟ್ಟಿರಬೇಕು. ಅದೇ ಫಾರೆಸ್ಟ್ ಬೀಟ್ ಆಫೀಸರ್ ಹೆಣ್ಣಾದರೆ? ಅವರಿಗಾಗಿ ವಿಶೇಷ ರಿಯಾಯಿತಿಗಳೇನೂ ಇಲ್ಲ. ಆದರೆ ಇದೇ ಸವಾಲುಗಳು ಮತ್ತಷ್ಟು ಬಿಗಿಗೊಳ್ಳುತ್ತವೆ.

ಸವಾಲುಗಳನ್ನು ಧೈರ್ಯವಾಗಿ ಎದುರಿಸಿ ಎಂಥದ್ದೇ ಪರಿಸ್ಥಿತಿಯನ್ನು ತಮ್ಮ ಆತ್ಮವಿಶ್ವಾಸ, ದೃಢ ನಿರ್ಧಾರದಿಂದ ಮೆಟ್ಟಿನಿಂತ ಹಲವು ಮಹಿಳಾ ಅಧಿಕಾರಿಗಳು ನಮ್ಮಲ್ಲಿ ಇದ್ದಾರೆ.

ಎಲ್ಲರಿಗಿಂತ ವಿಭಿನ್ನ ಸ್ಥಾನದಲ್ಲಿ ನಿಲ್ಲುವವರು ಕೇರಳದ ಎರ್ನಾಕುಲಮ್ ಜಿಲ್ಲೆಯ ಕುಟ್ಟಂಪೂಜಾ ವಲಯದ ಬೀಟ್ ಆಫೀಸರ್ ಪಿ ಜಿ ಸುಧಾ. ಬಯಲು ಶೌಚದಿಂದ ಗ್ರಾಮಗಳನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ (ಣಟಛ್ಞಿ ಈಛ್ಛಿಛ್ಚಿಚಠಿಜಿಟ್ಞ ಊಛಿಛಿ ಣಈಊ) ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಯೋಜನೆಯ ಭಾಗವಾಗಿ ಅಲ್ಲಿನ ಬುಡಕಟ್ಟು ಜನಾಂಗದವರಿಗೆ ಸುಮಾರು 500 ಶೌಚಗೃಹಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ತನ್ನ ಸಂಬ ಳದ ಒಂದಿಷ್ಟು ಭಾಗವನ್ನೂ ಬುಡಕಟ್ಟಿನ ಏಳಿಗೆಗಾಗಿ ವಿನಿಯೋಗಿಸುವುದರ ಮೂಲಕ ಇತರೆ ಮಹಿಳೆಯರಿಗೂ ಮಾದರಿಯಾಗಿದ್ದಾರೆ.

2016ರಲ್ಲಿ ಕೇರಳ ಇಡೀ ಭಾರತದಲ್ಲಿಯೇ ಬಯಲು ಶೌಚ ಮುಕ್ತದಲ್ಲಿ ಮೂರನೇ ಸ್ಥಾನ ಪಡೆದಿತ್ತು. ಇದರ ಬಹುಪಾಲು ಯಶಸ್ಸು ಪಿ.ಜಿ. ಸುಧಾ ಅವರಿಗೆ ಸಲ್ಲಬೇಕು. ಐವತ್ತೊಂದು ವಯಸ್ಸಿನ ಸುಧಾ 2002 ರಲ್ಲಿ ಬೀಟ್ ಆಫೀಸರ್ ಆಗಿ ಎರ್ನಾಕುಲಮ್ ತುಂಡಾಯಿಲ್ ಮತ್ತು ಮಲಯಾತೂರ್ ವಲಯಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 27 ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡ ಇವರು ಕಾಡಿನ ರಕ್ಷಣೆಯನ್ನೇ ತಮ್ಮ ಧ್ಯೇಯವಾಗಿಸಿಕೊಂಡಿದ್ದಾರೆ.

ನಿರ್ವಣದ ಹಾದಿ ಸುಲಭದ್ದಾಗಿರಲಿಲ್ಲ: ಎಲ್ಲಾ ಬೀಟ್ ಆಫೀಸರ್​ಗಳಂತೆ ಸುಧಾ ಕೂಡ ಪತ್ರಿದಿನ ಬೆಳಗ್ಗೆ ಕಾಡಿನಲ್ಲಿ ಗಸ್ತು ತಿರುಗಲು ಬಂದರೆ ಮನೆಗೆ ವಾಪಸಾಗುತ್ತಿದ್ದದ್ದು ಸಂಜೆಯೇ. ಅವರೇ ಹೇಳುವಂತೆ ‘ಪರಿಸರಕ್ಕಾಗಿ ನನ್ನಿಂದಾಗುವ ಏನಾದರೊಂದು ಕೊಡುಗೆ ನೀಡಬೇಕೆಂಬುದು ನನ್ನ ಮನಸ್ಸಿನಲ್ಲಿ ಮೊದಲಿನಿದಲೂ ಉಳಿದಿತ್ತು. ಬುಡಕಟ್ಟು ಪ್ರದೇಶದಲ್ಲಿನ ನೈರ್ಮಲ್ಯ ಮತ್ತು ಮಹಿಳೆಯರ ಸುರಕ್ಷತೆಯ ಸಲುವಾಗಿ ಶೌಚಗೃಹ ನಿರ್ಮಾಣ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು ಅವಶ್ಯಕವಾಗಿತ್ತು. ಆಗ ದೊರೆತದ್ದೆ ಈ ಅಭಿಯಾನ.

ಜತೆಗೆ ಸರ್ಕಾರ ಟೆಂಡರ್ ಕರೆದಾಗ ಯಾರೊಬ್ಬರೂ ಅದನ್ನು ವಹಿಸಿಕೊಳ್ಳಲು ಮುಂದಾಗಲಿಲ್ಲ. ಕಾರಣ, ಕಾಡಿನೊಳಗಿನ ಒಂಬತ್ತೂ ಬುಡಕಟ್ಟಿನ ಜಾಗಗಳಿಗೆ ಹೋಗಲು ಯಾವುದೇ ಸರಿಯಾದ ರಸ್ತೆಯಾಗಲಿ, ನೀರಿನ ವ್ಯವಸ್ಥೆಯಾಗಲಿ ಇರಲಿಲ್ಲ. ಶೌಚಗೃಹ ನಿರ್ವಣಕ್ಕೆ ಬೇಕಾದ ಕಚ್ಚಾವಸ್ತುಗಳನ್ನು ಸಾಗಿಸುವುದೂ ಕಷ್ಟವಾಗಿತ್ತು. ಸ್ಥಳೀಯರು ಕೂಡ ನಿರ್ವಣಕ್ಕೆ ಬೇಕಾದ ಕಲ್ಲುಗಳನ್ನು ಸಾಗಿಸಲು ಸಹಾಯ ಮಾಡಿದರು. ಮುಖ್ಯ ರಸ್ತೆಯಿಂದ ಸುಮಾರು ಹದಿನೈದರಿಂದ ಇಪತ್ತು ಕಿಲೋಮೀಟರ್​ಗಳಷ್ಟು ದೂರ ಕಾಲ್ನಡಿಗೆಯಲ್ಲೇ ಸಾಗಬೇಕಿತ್ತು. ಏನಿಲ್ಲವಾದರೂ ಮೂರರಿಂದ ನಾಲ್ಕು ತಾಸು ನಿರ್ದಿಷ್ಟ ಜಾಗಕ್ಕೆ ತಲುಪುವುದಕ್ಕೆ ಬೇಕಾಗುತ್ತಿತ್ತು.

ಅಲ್ಲದೆ ಈ ಬುಡಕಟ್ಟು ಕಾಡಾನೆಗಳು ಮತ್ತು ನರಭಕ್ಷಕ ಪ್ರಾಣಿಗಳ ನೆಲೆಯೂ ಹೌದು. ಅವುಗಳ ಕಣ್ಣಿಗೆ ಬೀಳದಂತೆ, ಅವುಗಳಿಗೆ ಎದುರಾಗಂತೆ ಎಚ್ಚರಿಕೆಯನ್ನು ವಹಿಸಬೇಕಿತ್ತು. ಇದೇ ಕಾರಣದಿಂದ ಯಾರೊಬ್ಬರು ಶೌಚಗೃಹ ನಿರ್ಮಾಣ ಕೆಲಸಕ್ಕೆ ಕೈ ಹಾಕಿರಲಿಲ್ಲ. ಅದು ನನ್ನ ಪಾಲಿಗೆ ಸಿಕ್ಕಾಗ ಅದನ್ನು ಇಲ್ಲ ಎನ್ನುವ ಮನಸ್ಸು ಬರಲಿಲ್ಲ’ ಎನ್ನುತ್ತಾರೆ.

ಕಾರ್ವಿುಕರು ವಸ್ತುಗಳನ್ನು ಸ್ವಲ್ಪ ದೂರ ತೆಪ್ಪಗಳಲ್ಲಿಯೂ ಸಾಗಿಸಬೇಕಿತ್ತು. ಹೀಗೆ ಸಾಗಿಸುವಾಗ ಒಮ್ಮೆ ತೆಪ್ಪ ತಲೆಕೆಳಕಾಗಿ ಮಗುಚಿತ್ತು. ಸಾಮಾನುಗಳೆಲ್ಲ ನೀರು ಪಾಲಾಗಿತ್ತು. ಅದಾಗ್ಯೂ ಮೇಲಿನ ಅಧಿಕಾರಿಗಳು ನನ್ನ ಮೇಲೆ ನಂಬಿಕೆ ಇಟ್ಟು ಕೆಲಸವನ್ನು ವಹಿಸಿ ಬೆಂಬಲ ನೀಡಿದರು.

ಅದರಿಂದ ನಾವು ಕೆಲಸವನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂಬುದನ್ನು ನೆನೆಸಿಕೊಳ್ಳಲು ಮರೆಯುವುದಿಲ್ಲ. ಇನ್ನು ಸರ್ಕಾರದಿಂದ ಪ್ರತಿಯೊಂದು ಶೌಚಗೃಹಕ್ಕಾಗಿ ಅಂದಾಜು 15,400 ರೂಪಾಯಿ ಮಂಜೂರಾಗಿತ್ತು. ಒಂದು ಲೋಡು ಜಲ್ಲಿ ಕಲ್ಲಿಗೆ ಮಾರ್ಕೆಟ್ ಬೆಲೆ 800 ರೂಪಾಯಿ ಇದ್ದರೆ ಕಾಡಿನ ಒಳಗೆ ಸಾಗಿಸಬೇಕಿದ್ದರಿಂದ ಲೋಡಿಗೆ ಸುಮಾರು 3000 ರಿಂದ 4000 ರೂಪಾಯಿಯವರೆಗೂ ತಗುಲುತ್ತಿತ್ತು. ಹಾಗಾಗಿ ಸುಧಾರವರು ತಮ್ಮ ಸಂಬಳದ ಹಣವನ್ನು ಬಳಸಬೇಕಾಯಿತು. ನಿರ್ಮಾಣ ಹಂತದಲ್ಲಿ ಇಡೀ ವಾರ ಸುಧಾರವರು ಬುಡಕಟ್ಟಿನಲ್ಲಿಯೇ ಉಳಿದುಕೊಂಡು ಕೆಲಸ ನಿರ್ವಹಿಸಿದ್ದರು.

ಸಾಧನೆಗೆ ಪ್ರಶಸ್ತಿಯ ಗರಿ

ಕೇರಳವು ಬಯಲು ಶೌಚದಿಂದ ಮುಕ್ತವಾಗಿದ್ದು, ಇದರಲ್ಲಿ ಮೂರನೆಯ ಸ್ಥಾನವನ್ನು ಪಡೆದಿದೆ. ಈ ಸಾಧನೆಯ ಹಿಂದೆ ಸುಧಾರ ಪಾತ್ರ ಬಹು ದೊಡ್ಡದು. ಹಾಗಾಗಿ 2016ರಲ್ಲಿ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರಿಂದ ಶುಚಿತ್ವ ಮಿಷನ್ ಪ್ರಶಸ್ತಿ ಲಭಿಸಿದೆ. ಅದೇ ವರ್ಷ ದೇಶದ ಪ್ರತಿಷ್ಠಿತ ನಾರಿಶಕ್ತಿ ಪುರಸ್ಕಾರವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಸ್ವೀಕರಿಸಿದ್ದಾರೆ. ಅಲ್ಲದೆ 2006 ರಲ್ಲಿ ಮುಖ್ಯಮಂತ್ರಿಗಳಿಂದ ಅತ್ತು್ಯತ್ತಮ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಸ್ತಿಯೂ ದೊರೆತಿದೆ. ಖ್ಯಾತ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಸುಧಾರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.

| ಕೋಕಿಲ ಎಂ.ಎಸ್.