ಒಂದು ಊರಿನ ಪುಟ್ಟ ಮನೆಯಲ್ಲಿ, ಪುಟ್ಟ ಮಗುವೊಂದು ಅಪ್ಪ-ಅಮ್ಮನೊಟ್ಟಿಗೆ ಇರುತ್ತಿತ್ತು. ಅದು ಬಹಳ ತುಂಟ ಮಗುವಾಗಿತ್ತು. ಅಮ್ಮ ಏನೇ ಹೇಳಿದರೂ ಅದರ ತದ್ವಿರುದ್ಧವಾಗಿಯೇ ಎಲ್ಲಾ ಕೆಲಸಗಳನ್ನು ಮಾಡುತ್ತಿತ್ತು. ಒಂದು ದಿನ ಅಮ್ಮನೊಟ್ಟಿಗೆ ಮಹಡಿ ಮೇಲೆ ಹೋಗುವಾಗ, ಅಮ್ಮ ಎಚ್ಚರಿಸಿದರು, ನಿಧಾನವಾಗಿ ಹತ್ತು. ಬಿದ್ದು ಪೆಟ್ಟಾದೀತು! ಎಂದು.
ಆದರೆ ಮಗುವಿಗೆ ಹತ್ತುವ ತವಕ, ಅಮ್ಮನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅಮ್ಮ ಮಗುವಿನ ಹಿಂದೆ - ಹಿಂದೆ ಬರುತ್ತಿದ್ದಳು. ಮಗು ಬೇಗನೇ ಮೇಲೇರಬೇಕೆಂಬ ಹಟದಿಂದ ಮೆಟ್ಟಿಲುಗಳನ್ನು ಪಟಪಟನೆ ಹತ್ತಿತು. ಆದರೆ ಹಾಗೆ ಹತ್ತುವಾಗ ಸಹಜವಾಗಿಯೆ ಕಾಲು ಜಾರಿತು. ಮಗು ಇನ್ನೇನು ಕೆಳಗೆ ಬೀಳಬೇಕು, ಅಷ್ಟರಲ್ಲಿ ಅಮ್ಮ ಹಿಡಿದುಕೊಂಡಳು. ಆದರೂ ಮಗುವಿನ ಮೈ, ಕೈ, ಕಾಲುಗಳ ಮೇಲೆ ಗಾಯಗಳಾದವು. ಕೈ - ಕಾಲೆಲ್ಲ ನೋವು. ಆ ಮಗುವಿಗೆ ಇದು ಒಂದು ಪಾಠವಾಗಿ, ಮುಂದೆ ಅಮ್ಮನ ಎಲ್ಲಾ ಮಾತುಗಳನ್ನು ಕೇಳಲು ಪ್ರಾರಂಭಿಸಿತು. ಆ ಮಗು ಸಂಪೂರ್ಣವಾಗಿ ಬದಲಾಯಿತು.
ನಮ್ಮ ಜೀವನದಲ್ಲೂ ಅಷ್ಟೇ, ಪ್ರತಿಯೊಂದು ಅನುಭವವು ನಮ್ಮನ್ನು ಬದಲಿಸುತ್ತದೆ. ನಾವು ಪ್ರತಿದಿನವೂ, ಪ್ರತಿ ಕ್ಷಣವೂ ಬದಲಾಗುತ್ತಿರುತ್ತೇವೆ. ನಮ್ಮ ಬದಲಾವಣೆಗಳು ಸಕಾರಾತ್ಮವಾಗಿದ್ದರೆ ಒಳಿತು. ಹಾಗಾಗಿ ಅನುಭವವು ಒಂದು ವಿಶ್ವವಿದ್ಯಾಲಯವಿದ್ದಂತೆ ಎಂದರೆ ತಪ್ಪಾಗುವುದಿಲ್ಲ.
| ಅನ್ವೇಷಾ.ಡಿ.ಆರ್ 8ನೇ ತರಗತಿ, ನ್ಯಾಷನಲ್ ಪಬ್ಲಿಕ್ ಶಾಲೆ, ಶಿವಮೊಗ್ಗ