ವೈಭವ್​ ಸೂರ್ಯವಂಶಿ ಸಂಗ್ರಹ ಚಿತ್ರ
IPL

ಎರಡು ವರ್ಷದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯ: ಆನ್‌ಲೈನ್ ಟಿಕೆಟ್ ಮಾರಾಟಕ್ಕೆ ದಿನಾಂಕ ಫಿಕ್ಸ್!

ಚಿನ್ನಸ್ವಾಮಿ ಕ್ರೀಡಾಂಗಣ ಎರಡು ವರ್ಷಗಳ ನಂತರ ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯಕ್ಕೆ ಸಜ್ಜಾಗುತ್ತಿದ್ದು, ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಹಾಲಿ ಟಿ20 ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದ ಆನ್‌ಲೈನ್ ಟಿಕೆಟ್ ಮಾರಾಟ ಪ್ರಕ್ರಿಯೆ ಭಾನುವಾರ ಆರಂಭವಾಗಲಿದೆ.

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣ ಎರಡು ವರ್ಷಗಳ ನಂತರ ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯಕ್ಕೆ ಸಜ್ಜಾಗುತ್ತಿದ್ದು, ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಹಾಲಿ ಟಿ20 ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದ ಆನ್‌ಲೈನ್ ಟಿಕೆಟ್ ಮಾರಾಟ ಪ್ರಕ್ರಿಯೆ ಭಾನುವಾರ ಆರಂಭವಾಗಲಿದೆ.

ಅ.17ರ ಶನಿವಾರ ಪಂದ್ಯ ನಿಗದಿಯಾಗಿದ್ದು, Ticketgenie ಆ್ಯಪ್‌ನಲ್ಲಿ ಭಾನುವಾರ ಮಧ್ಯಾಹ್ನ 12 ಗಂಟೆಗೆ ಟಿಕೆಟ್‌ಗಳು ಖರೀದಿಗೆ ಲಭ್ಯವಾಗಲಿವೆ. ಟಿಕೆಟ್‌ಗಳು ಕೇವಲ Ticketgenie ಮೊಬೈಲ್ ಆ್ಯಪ್ ಮೂಲಕ ಮಾತ್ರ ಖರೀದಿಗೆ ಲಭ್ಯವಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಅಧಿಕೃತ ವಿಶೇಷ ಟಿಕೆಟಿಂಗ್ ಪಾಲುದಾರ ಸಂಸ್ಥೆಯಾಗಿರುವ Ticketgenie ಆ್ಯಪ್ ಆ್ಯಪಲ್ ಆ್ಯಪ್ ಸ್ಟೋರ್ ಅಥವಾ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್‌ಗೆ ಲಭ್ಯವಿದೆ. https://ticketgenie.in.

ಈ ಆ್ಯಪ್‌ನಲ್ಲಿ ಮಾತ್ರ ಕ್ರಿಕೆಟ್ ಅಭಿಮಾನಿಗಳು ಟಿಕೆಟ್ ಖರೀದಿಸುವಂತೆ ಎಂದು ಕೆಎಸ್‌ಸಿಎ ತಿಳಿಸಿದ್ದು, ಆನ್‌ಲೈನ್ ಹೊರತುಪಡಿಸಿ ಯಾವುದೇ ಅನಧಿಕೃತ ಮೂಲಗಳಿಂದ ಟಿಕೆಟ್ ಖರೀದಿಸದಂತೆಯೂ ಸಲಹೆ ನೀಡಿದೆ. 2024ರ ಅಕ್ಟೋಬರ್‌ನಲ್ಲಿ ನಡೆದ ಭಾರತ-ನ್ಯೂಜಿಲೆಂಡ್ ನಡುವಿನ ಟೆಸ್ಟ್, ಬೆಂಗಳೂರಿನಲ್ಲಿ ನಡೆದ ಕೊನೇ ಅಂತಾರಾಷ್ಟ್ರೀಯ ಪಂದ್ಯವಾಗಿದೆ.