ನಿಶಿಯೊ: ಟೋಕಿಯೊ ಒಲಿಂಪಿಕ್ಸ್ ಕಂಚು ವಿಜೇತೆ ಲವ್ಲಿನಾ ಬೋರ್ಗೊಹೈನ್, ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಪ್ರಿಯಾ ಘಂಘಾಸ್, ಕಪಿಲ್ ಪೋಖರಿಯಾ ಬಾಕ್ಸಿಂಗ್‌ನಲ್ಲಿ ಸೆಮಿನಲ್‌ಗೇರಿದ್ದಾರೆ. ಇದರೊಂದಿಗೆ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಕನಿಷ್ಠ ಆರು ಪದಕ ಗ್ಯಾರಂಟಿ ಆಗಿದ್ದು, ಹಿಂದಿನ ಆವೃತ್ತಿಯಲ್ಲಿ 4 ಮೆಡಲ್ ಗೆದ್ದ ದಾಖಲೆಯನ್ನು ಹಿಮ್ಮೆಟ್ಟಿಸಿದೆ.
ಸೋಮವಾರ ನಡೆದ 75 ಕೆಜಿ ಮಿಡಲ್‌ವೇಯ್ಟ ಕ್ವಾರ್ಟರ್‌ಫೈನಲ್‌ನಲ್ಲಿ ಲವ್ಲಿನಾ 5-0 ಅಂತರದಿಂದ ಕೊರಿಯಾದ ಸಿಯೋಂಗ್ ಸುಯಿಯೊನ್ ಎದುರು ಗೆಲುವು ದಾಖಲಿಸಿದರು. ಈ ಮೂಲಕ ಸತತ ಎರಡನೇ ಏಷ್ಯಾಡ್ ಪದಕ ಖಾತ್ರಿಪಡಿಸಿಕೊಂಡಿದ್ದು, ಕಳೆದ ಆವೃತ್ತಿಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು. 60 ಕೆಜಿ ವಿಭಾಗದಲ್ಲಿ ಪ್ರಿಯಾ ಘಂಘಾಸ್, ತಜಿಕಿಸ್ತಾನದ ಮಿಗೊನಾ ಸಮ್ದೊವಾ ಎದುರು ಗೆಲುವು ಒಲಿಸಿಕೊಂಡರೆ, ಗ್ಲಾಸ್ಗೋ ಕಾಮನ್ವೆಲ್ಸ್ ಗೇಮ್ಸ್‌ನಲ್ಲಿ ಪೋಡಿಯಂಗೇರಲು ವಿಲವಾಗಿದ್ದ ಕಪಿಲ್ ಪೋಖರಿಯಾ ಪುರುಷರ 90ಕೆಜಿ ವಿಭಾಗದಲ್ಲಿ 5-0ಯಿಂದ ದ.ಕೊರಿಯಾದ ಕಿಮ್ ಗಿಚೆ ಎದುರು ಜಯ ಸಾಧಿಸಿ, ಅಂತಿಮ 4ರ ಘಟ್ಟಕ್ಕೇರಿದರು.
ಮಳೆಯಿಂದಾಗಿ ಕ್ವಾರ್ಟರ್‌ಫೈನಲ್ ಒಂದೂ ಎಸೆತವಿಲ್ಲದೆ ರದ್ದು
ಹಾಲಿ ಚಾಂಪಿಯನ್ ಭಾರತ ತಂಡ ಪುರುಷರ ಟಿ20 ಕ್ರಿಕೆಟ್ ಸ್ಪರ್ಧೆಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ನಿರಂತರ ಮಳೆಯಿಂದಾಗಿ ಒದ್ದೆಯಾದ ಔಟ್‌ಫಿಲ್ಡ್‌ನಿಂದಾಗಿ ಭಾರತ ಹಾಗೂ ಅ್ಘಾನಿಸ್ತಾನ ತಂಡಗಳ ನಡುವಿನ ಕ್ವಾರ್ಟರ್‌ಫೈನಲ್ ಪಂದ್ಯ ರದ್ದುಗೊಂಡಿತು. ಟಾಸ್ ಪ್ರಕ್ರಿಯೆಗೆ 16 ನಿಮಿಷ ಬಾಕಿಯಿರುವಂತೆಯೇ ಪಂದ್ಯ ರದ್ದುಗೊಂಡಿತು. ಈ ಮೂಲಕ ಐಸಿಸಿ ಟಿ20 ಶ್ರೇಯಾಂಕ ಆಧಾರದಲ್ಲಿ ಶ್ರೇಯಸ್ ಅಯ್ಯರ್ ಪಡೆ ಮುನ್ನಡೆಯಿತು.
ಸತತ ಎರಡನೇ ಆವೃತ್ತಿಯಲ್ಲಿ ಸೆಮಿಫೈನಲ್ ಅರ್ಹತೆ ಪಡೆದಿರುವ ಭಾರತ ತಂಡ, ನೇಪಾಳ ಮತ್ತು ಶ್ರೀಲಂಕಾ ನಡುವಿನ ಕ್ವಾರ್ಟರ್‌ಫೈನಲ್ ಪಂದ್ಯದ ವಿಜೇತರನ್ನು ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಎದುರಿಸಲಿದೆ. ಸತತ ಎರಡನೇ ಬಾರಿಗೆ ಏಷ್ಯಾಡ್‌ನಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯ ಮಳೆಯಿಂದ ರದ್ದುಗೊಂಡ ದೃಷ್ಟಾಂತ ಇದಾಗಿದೆ. ಹಾಂಕಾಂಗ್ ಮತ್ತು ಪಾಕಿಸ್ತಾನ ನಡುವಿನ ಮೊದಲ ಕ್ವಾರ್ಟರ್‌ಫೈನಲ್ ಪಂದ್ಯವೂ ಟಾಸ್‌ಗೆ ಮುನ್ನ ರದ್ದುಗೊಂಡಿತು. ಇದರೊಂದಿಗೆ ಶ್ರೇಯಾಂಕದ ಆಧಾರದಲ್ಲಿ ಪಾಕಿಸ್ತಾನ ಸೆಮಿಫೈನಲ್‌ಗೇರಿತು.
ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಕ್ವಾರ್ಟರ್‌ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯುವ ನಾಲ್ಕು ಶ್ರೇಯಾಂಕಿತ ತಂಡಗಳಲ್ಲಿ ಒಂದಾಗಿರುವುದರಿಂದ, ನೇಪಾಳ ವಿರುದ್ಧದ ಪಂದ್ಯವೂ ಮಳೆಯಿಂದ ರದ್ದಾದರೆ ಶ್ರೀಲಂಕಾ ಸೆಮಿಫೈನಲ್‌ಗೆ ಮುನ್ನಡೆಯುತ್ತದೆ.