ಐಪಿಎಲ್‌ಗೆ ನಿವೃತ್ತಿ ಘೋಷಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೆಂಟರ್ ಆಗಿ ನೇಮಕಗೊಂಡಿರುವ ಎಂ.ಎಸ್. ಧೋನಿ 
IPL

13 ಪ್ಲೇಆಫ್ಸ್...11 ಫೈನಲ್ಸ್​...5 ಟ್ರೋಫಿ: ಐಪಿಎಲ್‌ಗೆ ವಿದಾಯ ಹೇಳಿದ ಎಂ.ಎಸ್. ಧೋನಿ; 19 ವರ್ಷಗಳ ಸುದೀರ್ಘ ಪಯಣಕ್ಕೆ ತೆರೆ ಎಳೆದ ಮಹಿ! Dhoni Retirement

ಚೆನ್ನೈ: ಭಾರತದಲ್ಲಿ ಐಪಿಎಲ್​ ಅನ್ನು ಕೇವಲ ಒಂದು ಕ್ರಿಕೆಟ್​ ಟೂರ್ನಿಯನ್ನಾಗಿ ಅಲ್ಲ, ಬದಲಿಗೆ ಇದನ್ನು ಎರಡು ತಿಂಗಳುಗಳ ಕಾಲ ನಡೆಯುವ ಕ್ರಿಕೆಟ್​ ಹಬ್ಬವಾಗಿ ನೋಡಲಾಗುತ್ತದೆ. ಈ ಐಪಿಎಲ್​ ಇತಿಹಾಸಲ್ಲಿ ಅತ್ಯಂತ ಯಶಸ್ವಿ ತಂಡದಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದ್ದ ತಂಡದ ಮಾಜಿ ನಾಯಕ ಈಗ ಮೈದಾನಕ್ಕೆ ವಿದಾಯ ಹೇಳಿ ಮೆಂಟರ್​ಶಿಫ್​ನತ್ತ ಮುಖ ಮಾಡಿದ್ದಾರೆ.

ಐಪಿಎಲ್​ನ ಆರಂಭದಿಂದಲೂ ತನ್ನದೇ ಆದ ಬಲಿಷ್ಟ ತಂಡ, ಸತತ ಗೆಲುವು, ಭರ್ತಿ ಐದು ಭಾರಿ ಚಾಂಪಿಯನ್​ಶಿಫ್​ ಟ್ರೋಫಿ ಗೆದ್ದ ತಂಡವಾಗಿದ್ದ, ಚೆನ್ನೈ ಸೂಪರ್​ ಕಿಂಗ್ಸ್​​​ ತಂಡ ಇಂದು ಶಾಕಿಂಗ್​ ಸುದ್ದಿಯೊಂದನ್ನು ರಿವೀಲ್​ ಮಾಡಿದೆ. 2008 ರಿಂದ ಇಲ್ಲಿವರೆಗೆ ತಂಡದ ನಾಯಕನಾಗಿ, ನಂತರ ವಿಕೆಟ್ ಕೀಪರ್​ನಾಗಿ ತಂಡದ ಹಿರಿಯಣ್ಣನಾಗಿದ್ದ ಎಂ.ಎಸ್​. ಧೋನಿ ಐಪಿಎಲ್​ಗೆ ನಿವೃತ್ತಿ ಘೋಷಿಸಿದ್ದು, 2027 ರಿಂದ ಸಿಎಸ್​ಕೆ ತಂಡದ ಮೆಂಟರ್​ನಾಗಿ ಮುಂದುವರಿಯಲಿದ್ದಾರೆಂದು ತಿಳಿಸಿದೆ.

ಐಪಿಎಲ್​ ಕಂಡ ಅದ್ವಿತೀಯ ನಾಯಕ!

ಭಾರತ ಕ್ರಿಕೆಟ್​ ತಂಡದಲ್ಲಿ ಕ್ಯಾಪ್ಟನ್​ ಕೂಲ್ ಎಂದೇ ಖ್ಯಾತಿ ಗಳಿಸಿದ್ದ ಮಹೇಂದ್ರ ಸಿಂಗ್ ಧೋನಿ, ಐಪಿಎಲ್​ನಲ್ಲಿ ಕೂಡ ತಮ್ಮ ತಂತ್ರಗಾರಿಕೆ ಮೂಲಕವೇ ಬರೊಬ್ಬರಿ 5 ಬಾರಿ ಐಪಿಎಲ್​ ಟ್ರೋಫಿಯನ್ನು ಚೆನ್ನೈ ತಂಡಕ್ಕೆ ತಂದುಕೊಟ್ಟಿದ್ದರು.

2010, 2011, 2018, 2021 ಹಾಗೂ 2023 ರಲ್ಲಿ ಸಿಎಸ್​ಕೆ ತಂಡ ಧೋನಿ ಅವರ ನಾಯಕತ್ವದಲ್ಲಿ ಐಪಿಎಲ್​ ಟ್ರೋಫಿಗೆ ಮುತ್ತಿಟ್ಟರೆ, 2010 ಹಾಗೂ 2014 ರಲ್ಲಿ ಅಂದು ನಡೆಯುತ್ತಿದ್ದ ಚಾಂಪಿಯನ್ಸ್​​ ಲೀಗ್​ನಲ್ಲಿ ಕೂಡ ಎರಡು ಬಾರಿ ಚಾಂಪಿಯನ್​ಗಳಾಗಿ ಹೊರಹೊಮ್ಮಿತು.

ಸಿಎಸ್​ಕೆ ಕ್ಯಾಪ್ಟನ್​ ಆಗಿ ಧೋನಿ ಒಟ್ಟು 244 ಪಂದ್ಯಗಳಲ್ಲಿ ಮೈದಾನಕ್ಕಿಳಿದಿದ್ದು, ಒಟ್ಟು 145 ಪಂದ್ಯಗಳನ್ನು ಗೆಲ್ಲಿಸಿಕೊಟ್ಟು, 96 ಪಂದ್ಯಗಳ ಸೋಲಿನ ಕಹಿಯನ್ನು ಕಂಡು ಒಟ್ಟು ಶೇ.59.42 ರಷ್ಟು ತಂಡವನ್ನು ಗೆಲ್ಲಿಸಿಕೊಂಡಿರುವ ಶ್ರೇಯಸ್ಸು ಮಹಿ ಅವರದ್ದಾಗಿದೆ. ಇನ್ನು ಇವರ ನಾಯಕತ್ವದಲ್ಲಿ ಬರೊಬ್ಬರಿ 13 ಸಲ ಪ್ಲೇಆಫ್ಸ್​ ಹಂತವನ್ನು ತಲುಪಿ, ಅದರಲ್ಲಿ 11 ಬಾರಿ ಫೈನಲ್​​ ಪ್ರವೇಶಿಸಿ 5 ಸಲ ತಂಡವನ್ನು ಚಾಂಪಿಯನ್​ ಸ್ಥಾನಕ್ಕೆ ತಲುಪುವಂತೆ ಮಾಡಿದ್ದಾರೆ.

ತಮ್ಮ ಈ ಅವಿಸ್ಮರಣೀಯ ದಾಖಲೆ ಮೂಲಕ, ಒಂದು ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಚಾಂಪಿಯನ್​ ಟ್ರೋಫಿ ಪಡೆದ ನಾಯಕ ಎಂಬ ಹೆಗ್ಗಳಿಕೆ ಧೋನಿ ಪಾತ್ರರಾಗಿದ್ದಾರೆ (ರೋಹಿತ್​ ಶರ್ಮಾ ಕೂಡ 5 ಬಾರಿ ಟ್ರೋಫಿ ಗೆದ್ದಿದ್ದಾರೆ). ಹಾಗೆಯೇ 2010 ಮತ್ತು 2011 ರಲ್ಲಿ ಟ್ರೋಫಿಯನ್ನು ಡಿಫೆಂಡ್​ ಮಾಡಿಕೊಂಡ ಮೊದಲ ನಾಯಕ ಕೂಡ ಎಂ.ಎಸ್​. ಧೋನಿಯೇ ಆಗಿದ್ದಾರೆ, (ಏಜೆನ್ಸೀಸ್).