More

    ಕೌನ್​ ಬನೇಗಾ ಕ್ರೋರ್​ಪತಿ ಶೂಟಿಂಗ್​ನಲ್ಲಿ ಭಾಗವಹಿಸಿದ ಅಮಿತಾಬ್​

    ಈಗಷ್ಟೇ ಕರೊನಾದಿಂದ ಗುಣಮುಖರಾಗಿ ಮನೆಯಲ್ಲಿಯೇ ಹೋಮ್​ ಕ್ವಾರಂಟೈನ್​ ಆಗಿದ್ದ ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​ ಶೂಟಿಂಗ್​ಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಕೌನ್​ ಬನೇಗಾ ಕ್ರೋರ್​ಪತಿ 12ನೇ ಸೀಸನ್​ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದ್ದು ಅಮಿತಾಬ್​ ಬಚ್ಚನ್​ ಈ ವಿಚಾರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಸದ್ಯಕ್ಕೆ ಮೂರು; ಧನಂಜಯನ ಪ್ರಪಂಚ

    ಸೋನಿ ಲೈವ್​ ವಾಹಿನಿಯಲ್ಲಿ ಪ್ರಸಾರವಾಗಲಿರುವ ಈ ಶೋ ಕರೊನಾ ಹಿನ್ನೆಲೆಯಲ್ಲಿ ಮೇ 9ರಿಂದಲೇ ಆನ್​ಲೈನ್​ ನೋಂದಣಿ ಮೂಲಕವೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಿಕೊಂಡಿತ್ತು. ಇದೀಗ ಇನ್ನು ಕೆಲದಿನಗಳಲ್ಲಿ ಟಿವಿಯಲ್ಲಿ ಪ್ರಸಾರ ಶುರುವಾಗಲಿದೆ.

    ಇನ್ನು ಸ್ಟುಡಿಯೊ ನೆಕ್ಸ್ಟ್ ಈ ಕಾರ್ಯಕ್ರಮವನ್ನು ನಿರ್ಮಾಣ ಮಾಡುತ್ತಿದ್ದು, ನಿತೇಶ್ ತಿವಾರಿ ಈ ಕಾರ್ಯಕ್ರಮವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಪ್ರೋಮೋ ಶೂಟ್​ ಸಹ ಮುಗಿದಿದ್ದು, ಶೂಟಿಂಗ್​ ಸಹ ಶುರುವಾಗಿದೆ.

    ಇದನ್ನೂ ಓದಿ: ‘ಮನಸು ಭಾರವಾದಾಗ ಹಾರುವುದೆಂತೋ … ಸುಚೇತನ್​ ಕಂಠಸಿರಿಯಲ್ಲಿ ಮನಸಿನ ಹಾಡು

    ಇನ್ನು ಈಗಷ್ಟೇ ಕರೊನಾ ಗೆದ್ದು ಬಂದಿರುವ ಬಿಗ್​ಬಿ ಅಮಿತಾಬ್​ ಅವರ ಆರೋಗ್ಯದ ದೃಷ್ಟಿಯಿಂದ ಸೆಟ್​ನಲ್ಲಿ ಮುಂಜಾಗೃತಾ ಕ್ರಮವನ್ನು ಕೈಗೊಳ್ಳಲಾಗುತ್ತಿದ್ದು, ಸೀಮಿತ ಜನರು ಮಾತ್ರ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಹೇಗೆ ಮೂಡಿಬರಲಿದೆ ಎಂಬುದನ್ನು ಸದ್ಯ ಗೌಪ್ಯವಾಗಿ ಇಟ್ಟಿರುವ ತಂಡ, ಅದರ ನೂತನ ಪ್ರೋಮೋವನ್ನು ಬಿಡುಗಡೆ ಮಾಡಲಿದೆ. (ಏಜೆನ್ಸೀಸ್​)

    ಗಜಾನನ ಗ್ಯಾಂಗ್ ಸೇರಿದ ಅದಿತಿ ಪ್ರಭುದೇವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts