More

    ಪಾಕ್ ಕ್ರಿಕೆಟ್ ಮಂಡಳಿಯಿಂದ ಕಿರುಕುಳ, 28ನೇ ವಯಸ್ಸಲ್ಲೇ ವೇಗಿ ಆಮೀರ್ ವಿದಾಯ

    ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಹಾಲಿ ಆಡಳಿತ ಮಂಡಳಿಯ ವಿರುದ್ಧ ‘ಮಾನಸಿಕ ಕಿರುಕುಳ’ದ ಆರೋಪ ಮಾಡಿರುವ ಎಡಗೈ ವೇಗದ ಬೌಲರ್ ಮೊಹಮದ್ ಆಮೀರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುರುವಾರ ದಿಢೀರ್ ವಿದಾಯ ಘೋಷಿಸಿದ್ದಾರೆ.

    ಪಾಕ್ ವೆಬ್‌ಸೈಟ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು 28ನೇ ವಯಸ್ಸಿನಲ್ಲೇ ನಿವೃತ್ತಿಯಾಗುವ ಅಚ್ಚರಿಯ ನಿರ್ಧಾರ ಪ್ರಕಟಿಸಿದರು. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ 2010ರಿಂದ 2015ರವರೆಗೆ 5 ವರ್ಷಗಳ ಕಾಲ ನಿಷೇಧ ಶಿಕ್ಷೆ ಅನುಭವಿಸಿದ್ದ ಆಮೀರ್, ಸೀಮಿತ ಓವರ್‌ನತ್ತ ಗಮನಹರಿಸುವ ಸಲುವಾಗಿ ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. ಅವರು 36 ಟೆಸ್ಟ್, 61 ಏಕದಿನ ಮತ್ತು 49 ಟಿ20 ಪಂದ್ಯವಾಡಿದ್ದು, ಕ್ರಮವಾಗಿ 119, 81 ಮತ್ತು 59 ವಿಕೆಟ್ ಕಬಳಿಸಿದ್ದಾರೆ.

    ಇದನ್ನೂ ಓದಿ: ನಾನು ನವಭಾರತದ ಪ್ರತೀಕ ಎಂದು ವಿರಾಟ್ ಕೊಹ್ಲಿ ಹೇಳಿದ್ದೇಕೆ ಗೊತ್ತೇ?

    ಸಾಕಷ್ಟು ಮಾನಸಿಕ ಕಿರುಕುಳ ಎದುರಿಸುತ್ತ ಬಂದಿದ್ದೇನೆ. ಪಿಸಿಬಿಯ ಹಾಲಿ ಆಡಳಿತ ಮಂಡಳಿ ಇರುವವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದಿಲ್ಲ ಎಂದು ಆಮೀರ್ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿರುವ ಅವರು ಇನ್ನೆರಡು ದಿನಗಳಲ್ಲಿ ಪಾಕ್‌ಗೆ ಮರಳಿ ಸಕಾರಣದೊಂದಿಗೆ ವಿದಾಯದ ಅಧಿಕೃತ ಪ್ರಕಟಣೆ ಹೊರಡಿಸುವುದಾಗಿ ತಿಳಿಸಿದ್ದಾರೆ.

    ಫುಟ್​ಬಾಲ್​ ತಾರೆ ಮರಡೋನಾಗೆ 5 ವಿವಾದಿತ ಮಕ್ಕಳು: ಮೃತದೇಹ ಸಂರಕ್ಷಿಸಿಡಲು ಕೋರ್ಟ್​ ಆದೇಶ

    ಮಲೇಷ್ಯಾದ ಪ್ರೇಯಸಿಯ ವರಿಸಿದ ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್..!

    ಬಾಲಿವುಡ್‌ನಲ್ಲಿ ಬರಲಿದೆ ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಬಯೋಪಿಕ್

    ವಿಶೇಷ ದಾಖಲೆ ಬರೆದ ಕೆಎಲ್ ರಾಹುಲ್, ಅಭಿಮಾನಿಗಳಿಗೆ ಧನ್ಯವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts