More

    ಮಲೇಷ್ಯಾದ ಪ್ರೇಯಸಿಯ ವರಿಸಿದ ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್..!

    ಜಲಂಧರ್: ಭಾರತ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಬುಧವಾರ ತಮ್ಮ ಬಹುಕಾಲದ ಗೆಳತಿ ಮಲೇಷ್ಯಾದ ಲೀ ಸಿದ್ದಿಕಿ ಅವರನ್ನು ವರಿಸಿದರು. ಪಂಜಾಬ್‌ನ ಜಲಂಧರ್‌ನಲ್ಲಿರುವ ಜಿಟಿಬಿ ನಗರದಲ್ಲಿ ಮದುವೆ ಸಮಾರಂಭ ನಡೆಯಿತು. 2012ರಲ್ಲಿ ಸುಲ್ತಾನ್ ಜೋಹರ್ ಕಪ್ ಹಾಕಿ ಟೂರ್ನಿಯಲ್ಲಿ ಆಡಲು ಮನ್‌ಪ್ರೀತ್ ಸಿಂಗ್ ಭಾರತ ಜೂನಿಯರ್ ತಂಡದೊಂದಿಗೆ ಮಲೇಷ್ಯಾಗೆ ತೆರಳಿದ್ದ ವೇಳೆ ಲೀ ಸಿದ್ಧಿಕಿ ಪರಿಚಯವಾಗಿತ್ತು. ಈ ಪರಿಚಯ ಸ್ನೇಹಕ್ಕೆ ತಿರುಗಿ, ಆ ಬಳಿಕ ಪ್ರೀತಿಗೆ ತಿರುಗಿತ್ತು.

    ಇದನ್ನೂ ಓದಿ: VIDEO: ಮುಶ್ಫಿಕರ್ ರಹೀಂ ಸಹ-ಆಟಗಾರನ ಮೇಲೆ ಕೈಎತ್ತಿದ್ದು ಎಷ್ಟು ಬಾರಿ ಗೊತ್ತಾ..? 

    ಲೀ ಸಿದ್ದಿಕಿ ಮಲೇಷ್ಯಾದ ಖಾಸಗಿ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ತಾಯಿ ಮಸಿತಾ ಕೂಡ ಮಲೇಷ್ಯಾ ಆರ್ಮಿ ಹಾಕಿ ತಂಡದ ಸದಸ್ಯೆಯಾಗಿದ್ದರು. ಮನ್‌ಪ್ರೀತ್ ಹಾಗೂ ಸಿದ್ಧಿಕಿ 2014ರಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲೇ ಮದುವೆಯಾಗಲು ಯೋಚಿಸಿದ್ದರೂ ಲಾಕ್‌ಡೌನ್‌ನಿಂದಾಗಿ ಮುಂದೂಡಲಾಗಿತ್ತು. ಲೀ ಸಿದ್ಧಿಕಿ ಮದುವೆಗಾಗಿ ಮಲೇಷ್ಯಾ ಸರ್ಕಾರ ಹಾಗೂ ಭಾರತೀಯ ಗೃಹ ಸಚಿವಾಲಯದಿಂದ ವಿಶೇಷ ಅನುಮತಿ ಪಡೆಯಲಾಗಿತ್ತು. ಮದುವೆ ಸಮಾರಂಭದಲ್ಲಿ ಕುಟುಂಬ ಸದಸ್ಯರು, ಸ್ನೇಹಿತರು, ರಾಷ್ಟ್ರೀಯ ತಂಡದ ಸಹ ಆಟಗಾರರಾದ ಮಂದೀಪ್ ಸಿಂಗ್, ವರುಣ್ ಕುಮಾರ್ ಮಾತ್ರ ಉಪಸ್ಥಿತರಿದ್ದರು.

    ಇದನ್ನೂ ಓದಿ: ನಾನು ನವಭಾರತದ ಪ್ರತೀಕ ಎಂದು ವಿರಾಟ್ ಕೊಹ್ಲಿ ಹೇಳಿದ್ದೇಕೆ ಗೊತ್ತಾ..?

    ಮಲೇಷ್ಯಾದ ಪ್ರೇಯಸಿಯ ವರಿಸಿದ ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್..!1992 ಬಾರ್ಸಿಲೋನಾ ಹಾಗೂ 1996 ಅಟ್ಲಾಂಟ ಒಲಿಂಪಿಕ್ ಕ್ರೀಡಾಕೂಟಗಳಿಗೆ ಭಾರತ ತಂಡದ ಮಾಜಿ ನಾಯಕನಾಗಿದ್ದ ಪರ್‌ಗತ್ ಸಿಂಗ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಳೆದ ಆಗಸ್ಟ್ ತಿಂಗಳಲ್ಲಿ ಮನ್‌ಪ್ರೀತ್, ಬೆಂಗಳೂರಿನಲ್ಲಿ ರಾಷ್ಟ್ರೀಯ ಶಿಬಿರದಲ್ಲಿದ್ದ ವೇಳೆ ಕೋವಿಡ್-19 ಕಾಣಿಸಿಕೊಂಡಿತ್ತು. 28 ವರ್ಷದ ಮನ್‌ಪ್ರೀತ್ ಸಿಂಗ್ 2021ರ ಜುಲೈನಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ತಂಡ ಮುನ್ನಡೆಸಲಿದ್ದಾರೆ.

    ಇಂಡಿಗೋದಲ್ಲಿ ಕನ್ನಡವೇಕಿಲ್ಲ?; ಪ್ರಶ್ನೆ ಎತ್ತಿದ ಐಎಎಸ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts