ವಿಶೇಷ ದಾಖಲೆ ಬರೆದ ಕೆಎಲ್ ರಾಹುಲ್, ಅಭಿಮಾನಿಗಳಿಗೆ ಧನ್ಯವಾದ

ಬೆಂಗಳೂರು: ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರಾಗಿ ಮಿಂಚುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ಮಂಗಳವಾರ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಅದರ ಬೆನ್ನಲ್ಲೇ ಅವರು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಕೆಎಲ್ ರಾಹುಲ್ ಅವರು ಈಗ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ 50 ಲಕ್ಷ ಹಿಂಬಾಲಕರನ್ನು ಸಂಪಾದಿಸಿದ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಟಿ20, ಏಕದಿನ ಸರಣಿಯಲ್ಲಿ ಉಪನಾಯಕರಾಗಿಯೂ ಕಾರ್ಯನಿರ್ವಹಿಸಿರುವ ಕೆಎಲ್ ರಾಹುಲ್ ಇದೀಗ ಅಭಿಮಾನಿಗಳ ಪ್ರೀತಿಯನ್ನು ಹೆಚ್ಚು ಹೆಚ್ಚು ಸಂಪಾದಿಸುತ್ತಿರುವುದು … Continue reading ವಿಶೇಷ ದಾಖಲೆ ಬರೆದ ಕೆಎಲ್ ರಾಹುಲ್, ಅಭಿಮಾನಿಗಳಿಗೆ ಧನ್ಯವಾದ