More

    ಭಾರತೀಯ ಮೂಲದ ಯುವ ವೈದ್ಯೆಯ ಕನಸುಗಳು ಆಸ್ಟ್ರೇಲಿಯಾದಲ್ಲಿ ನುಚ್ಚು ನೂರು!

    ಸಿಡ್ನಿ: ಉನ್ನತ ಶಿಕ್ಷಣವನ್ನು ಪಡೆಯಲು… ಜೀವನದಲ್ಲಿ ಉನ್ನತ ಸ್ಥಾನಕ್ಕೆ ತಲುಪಲು.. ಉತ್ತಮ ಆದಾಯ ಗಳಿಸುವ ಭರವಸೆಯೊಂದಿಗೆ ದೇಶದ ಯುವಸಮೂಹ ವಿದೇಶಕ್ಕೆ ತೆರಳುತ್ತಿದೆ. ಆದರೆ, ಅಲ್ಲಿಗೆ ಹೋದ ಬಳಿಕ ಸಂಕಷ್ಟಗಳನ್ನೂ ಎದುರಿಸುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವಿದೇಶಕ್ಕೆ ತೆರಳಿದ ಯುವಕ-ಯುವತಿಯರು ಅಪಘಾತ ಅಥವಾ ಪುಂಡರ ದಾಳಿಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ತಾಜಾ ಘಟನೆಯೊಂದರಲ್ಲಿ ಅತ್ಯುತ್ತಮ ವೈದ್ಯೆಳಾಗಬೇಕೆಂಬ ಕನಸನ್ನು ಹೊತ್ತು, ಹುಟ್ಟೂರನ್ನು ತೊರೆದು ವಿದೇಶಕ್ಕೆ ಹೋದ ಯುವತಿ ದುರಂತವಾಗಿ ಸಾವಿಗೀಡಾಗಿದ್ದಾಳೆ.

    ಇತ್ತೀಚೆಗೆ ಆಂಧ್ರ ಪ್ರದೇಶ ಮೂಲದ ಯುವ ವೈದ್ಯೆ ಆಸ್ಟ್ರೇಲಿಯಾದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಮೋಜು, ಮಸ್ತಿ ಮಾಡಲು ಫ್ರೆಂಡ್ಸ್​ ಜತೆ ಟ್ರೆಕ್ಕಿಂಗ್​ಗೆ ತೆರಳಿದ ಯುವ ವೈದ್ಯೆ ಪ್ರಾಣ ಕಳೆದುಕೊಂಡಿದ್ದಾರೆ. ಮೃತಳನ್ನು ಉಜ್ವಲಾ ಎಂದು ಗುರುತಿಸಲಾಗಿದೆ. ಈಕೆ ಆಂಧ್ರದ ಕೃಷ್ಣ ಜಿಲ್ಲೆಯ ಗನ್ನವರಂ ನಿವಾಸಿ.

    ಉಜ್ವಲಾ ಸಾವಿಗೀಡಾಗಿರುವುದಾಗಿ ಆಕೆಯ ಫ್ರೆಂಡ್ಸ್​ ಕುಟುಂಬಕ್ಕೆ ಮಾಹಿತಿ ನೀಡಿದ್ದು, ವೈದ್ಯೆಯಾಗಿ ಉನ್ನತ ಸ್ಥಾನಕ್ಕೇರಬೇಕು ಅಂದುಕೊಂಡಿದ್ದ ಮಗಳ ಸಾವು ಹೆತ್ತವರನ್ನು ಬೆಚ್ಚಿ ಬೀಳಿಸಿದೆ. ಉಜ್ವಲಾ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನ ಬಾಂಡ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಮುಗಿಸಿ, ರಾಯಲ್ ಬ್ರಿಸ್ಬೇನ್​ನ ಮಹಿಳಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಕೆಲ ದಿನಗಳ ಹಿಂದೆ ತನ್ನ ಸ್ನೇಹಿತರ ಜೊತೆ ಟ್ರೆಕ್ಕಿಂಗ್ ಹೋಗಿದ್ದರು. ಆದರೆ ಅನಿರೀಕ್ಷಿತವಾಗಿ ನಿಧನರಾಗಿದ್ದಾರೆ. ಕಳೆದ ಶನಿವಾರ ಉಜ್ವಲಾ ಅವರ ಪಾರ್ಥಿವ ಶರೀರವನ್ನು ಕೃಷ್ಣಾ ಜಿಲ್ಲೆಯ ಅವರ ಸ್ವಗ್ರಾಮಕ್ಕೆ ಸ್ಥಳಾಂತರಿಸಲಾಗಿದ್ದು, ಉಂಗುತ್ತೂರು ಮಂಡಲದ ಎರ್ಟಕಪಾಡು ಎಂಬಲ್ಲಿ ಆಕೆಯ ಅಂತಿಮ ಸಂಸ್ಕಾರ ನೆರವೇರಿದೆ. ವೈದ್ಯೆಯಾಗಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕಿದ್ದ ಮಗಳ ಹಠಾತ್ ಸಾವಿನಿಂದ ಪೋಷಕರು ರೋಧಿಸುತ್ತಿದ್ದಾರೆ. (ಏಜೆನ್ಸೀಸ್​)

    ನಾಯಿ ರೀತಿ ಇರುತ್ತೇನೆಂದರು, ರೂಮಿಗೆ ಕರೆದರು… ಹಲವು ವರ್ಷಗಳ ಬಳಿಕ ನಟಿ ಲಕ್ಷ್ಮೀ ರಹಸ್ಯ ಬಯಲು

    ಬೇಸಿಗೆ ಶುರು… ನೀರಿನ ಜತೆ ಇದನ್ನು ಬೆರೆಸಿ ಸಿಂಪಡಿಸಿ ಹಾವುಗಳು ಮನೆ ಬಳಿ ಸುಳಿಯುವುದಿಲ್ಲ!

    1,122 ಮೃತದೇಹಗಳನ್ನು ಮಾರಾಟ ಮಾಡಿ 3.66 ಕೋಟಿ ರೂ. ಸಂಪಾದಿಸಿದ ಕೇರಳ ಸರ್ಕಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts