More

    ಗಡಿ ವಿವಾದ, ಸದ್ಯಕ್ಕಿಲ್ಲ ಗಡಿಬಿಡಿ: ಷಾ ನೇತೃತ್ವದಲ್ಲಿ ಸಿಎಂಗಳ ಸಭೆ ಮುಕ್ತಾಯ: ‘ಚಾಣಕ್ಯ’ನ ಸಲಹೆ-ಸೂಚನೆಗಳಿವು..

    ನವದೆಹಲಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ಇಂದು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆದಿದ್ದು, ಸೂಕ್ತ ಭರವಸೆಯೊಂದಿಗೆ ಸಮಯೋಚಿತ ಸಲಹೆಯನ್ನೂ ಷಾ ನೀಡಿದ್ದಾರೆ.

    ಗಡಿ ವಿವಾದ ವಿಚಾರವಾಗಿ ಮಹಾರಾಷ್ಟ್ರದ ವಿಪಕ್ಷ ಸಂಸದರು ಅಮಿತ್ ಷಾಗೆ ಮನವಿ ನೀಡಿದ್ದಲ್ಲದೆ, ಸಂಸತ್ತಿನಲ್ಲೂ ಪ್ರಸ್ತಾಪಿಸಿದ್ದರು. ಅಲ್ಲದೆ ಹಸ್ತಕ್ಷೇಪ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಮಿತ್ ಷಾ ಇಂದು ಉಭಯ ರಾಜ್ಯಗಳ ಮುಖ್ಯಮಂತ್ರಿಯವರನ್ನು ಸಭೆ ಕರೆದು ಮಾತುಕತೆ ನಡೆಸಿದ್ದಾರೆ.

    ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಜತೆ ಮಾತುಕತೆ ನಡೆಸಿದ ಅಮಿತ್ ಷಾ, ಇಬ್ಬರೂ ಮುಖ್ಯಮಂತ್ರಿಗಳು ಸಕಾರಾತ್ಮಕ ಧೋರಣೆ ಹೊಂದಿದ್ದಾರೆ ಎಂದು ತಿಳಿಸುವ ಜತೆಗೆ ಸಭೆಯ ನಿರ್ಣಯದ ಕುರಿತು ಕೂಡ ಮಾಹಿತಿ ಹಂಚಿಕೊಂಡಿದ್ದಾರೆ.

    ಯಾವುದೇ ಗಡಿ ವಿವಾದ ರಸ್ತೆ ಬದಿಯಲ್ಲಿ ತೀರ್ಮಾನ ಆಗುವುದಿಲ್ಲ ಎನ್ನುವ ಮೂಲಕ ಸಮಸ್ಯೆ ಸಂಕೀರ್ಣತೆಯನ್ನು ಸೂಚ್ಯವಾಗಿ ತಿಳಿಸಿರುವ ಅವರು, ಈ ಗಡಿ ವಿಷಯ ಕುರಿತು ಸುಪ್ರೀಂಕೋರ್ಟ್​ನಲ್ಲಿ ಪ್ರಕರಣವಿದೆ. ಅಲ್ಲಿ ವಿಚಾರಣೆ ಮುಗಿಯವ ತನಕ ಎರಡೂ ರಾಜ್ಯಗಳು ಈ ವಿಚಾರವನ್ನು ಪ್ರಸ್ತಾಪಿಸುವುದಿಲ್ಲ ಎಂದೂ ಹೇಳಿದ್ದಾರೆ.

    ಮಾತ್ರವಲ್ಲದೆ ವಿವಾದ ಬಗೆಹರಿಸುವ ಸಲುವಾಗಿ ಸಮಿತಿಯೊಂದನ್ನು ರಚಿಸಲು ಅವರು ಒಪ್ಪಿಗೆ ನೀಡಿದ್ದು, ಆ ಸಮಿತಿಯಲ್ಲಿ ಎರಡು ರಾಜ್ಯಗಳಿಂದ ಮೂವರು ಸಚಿವರು ಇರಲಿದ್ದಾರೆ ಎಂದು ಹೇಳಿದ್ದಾರೆ. ಜತೆಗೆ ವಿವಾದದ ಹಿನ್ನೆಲೆಯಲ್ಲಿ ಎರಡು ರಾಜ್ಯಗಳ ನಾಗರಿಕರಿಗೆ, ಪ್ರಯಾಣಿಕರಿಗೆ, ವ್ಯಾಪಾರಿಗಳಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವಂತೆಯೂ ಅವರು ಎರಡೂ ರಾಜ್ಯಗಳ ಮುಖ್ಯಮಂತ್ರಿಯವರಿಗೆ ಸೂಚಿಸಿದ್ದಾರೆ.

    ಕಳೆದ ಒಂದು ವರ್ಷದಲ್ಲಿ ಹಠಾತ್ ಹೃದಯಾಘಾತ, ಅನಾರೋಗ್ಯ ಶೇ. 20 ಹೆಚ್ಚಳ: ಬಾಧಿತರಲ್ಲಿ ಲಸಿಕೆ ಪಡೆದವರ ಪ್ರಮಾಣವೆಷ್ಟು?

    ಹಿರಿಯ ನಟಿಯ ತಲೆಗೆ 40 ಸಲ ಬ್ಯಾಟ್​ನಿಂದ ಬಾರಿಸಿ ಕೊಲೆ; ತಾಯಿಯನ್ನು ಕೊಲ್ಲಲು ಮಗನಿಗಿತ್ತು ವರ್ಷಗಳ ಕಾಲದ ಅಸಹನೆ!

    ಇದು ಕಾಮುಕರು ಕಾಲ್ಕೀಳುವಂತೆ ಮಾಡುವ ಪಾದರಕ್ಷೆ; ಆ್ಯಂಟಿ ರೇಪ್ ಚಪ್ಪಲ್ ಕಂಡು ಹಿಡಿದ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts