ಬೆಂಗಳೂರು: ಹೆಣ್ಣು ಮಕ್ಕಳು, ಮಹಿಳೆಯರಿಗೆ ಇನ್ನು ಕಾಮುಕರ ವಿರುದ್ಧ ಹೋರಾಡಲು ಪಾದರಕ್ಷೆಯೇ ಗುರಾಣಿ ಆಗಲಿದೆ. ಮಾತ್ರವಲ್ಲ, ಕಾಲಲ್ಲೇ ಕಾಮುಕರನ್ನು ದೂರ ಇರಿಸಬಹುದು. ಇಂಥದ್ದೊಂದು ಚಪ್ಪಲಿಯನ್ನು ವಿದ್ಯಾರ್ಥಿಯೊಬ್ಬಳ ಕಂಡುಹಿಡಿದಿದ್ದಾಳೆ.
ಕಲಬುರಗಿಯ ಎಸ್ಆರ್ಎನ್ ಮೆಹ್ತ ಸ್ಕೂಲ್ನ ಹತ್ತನೇ ತರಗತಿಯ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಬಿರಾದಾರ್ ಈ ಆ್ಯಂಟಿ ರೇಪ್ ಚಪ್ಪಲಿ ರೂಪಿಸಿದ್ದಾಳೆ. ಇದನ್ನು ಧರಿಸಿದ ಯುವತಿಯರು, ಮಹಿಳೆಯರು ಕಾಮುಕರ ವಿರುದ್ಧ ರಕ್ಷಣೆ ಪಡೆಯಬಹುದು ಮತ್ತು ತಮ್ಮ ಇರುವಿಕೆ ಬಗ್ಗೆ ಮನೆಯವರಿಗೆ ಸುಳಿವು ಕೂಡ ನೀಡಬಹುದು.
ಕಾಮುಕರು ಮೈಮುಟ್ಟಿದಾಗ ಅಥವಾ ಎರಗಿದಾಗ ಅವರನ್ನು ಈ ಚಪ್ಪಲಿಯಿಂದ ಒದ್ದರೆ ಸಾಕು, ಆಗ ಶಾಕ್ ಹೊಡೆಯಲಿದ್ದು ಕಾಮುಕ ದೂರ ಸರಿಯುತ್ತಾನೆ. ಮಾತ್ರವಲ್ಲ, ಇದರಲ್ಲಿ ಅಳವಡಿಸಲಾದ ಜಿಪಿಎಸ್ನಿಂದ ಪಾಲಕರಿಗೆ ಲೈವ್ ಲೊಕೇಷನ್ ಮಾಹಿತಿಯೂ ರವಾನೆ ಆಗುತ್ತದೆ.
ಈಕೆ ತಾನು 7-8ನೇ ತರಗತಿಯಲ್ಲಿದ್ದಾಗಲೇ ಈ ಬಗ್ಗೆ ಅಧ್ಯಯನದಲ್ಲಿ ತೊಡಗಿದ್ದಳು. 2018ರಿಂದಲೇ ಇದರ ವಿನ್ಯಾಸದಲ್ಲಿ ನಿರತಳಾಗಿದ್ದ ವಿಜಯಲಕ್ಷ್ಮೀ ಅಂದಿನಿಂದಲೂ ಈ ಯೋಜನೆಯಲ್ಲಿ ತೊಡಗಿಕೊಂಡಿದ್ದಳು ಎಂಬುದಾಗಿ ಈಕೆಯ ಶಿಕ್ಷಕಿ ತಿಳಿಸಿದ್ದಾರೆ.
ಮೇಲಿಂದ ಮೇಲೆ ಸಂಭವಿಸುತ್ತಲೇ ಇದೆ ಹೃದಯಾಘಾತ; ಇಂದು ಮತ್ತೊಂದು ಪ್ರಕರಣ, ವಿಚಾರಣಾಧೀನ ಕೈದಿ ಸಾವು
‘ನನ್ನನ್ನು ಪೊಲೀಸರೇ ಸಾಯಿಸ್ತಾರೆ, ನ್ಯಾಯ ಕೊಡಿಸಿ’ ಎಂದು ಅಲವತ್ತುಕೊಂಡ ಯುವಕ!
ನಿಂತಿದ್ದ ಕಾರಲ್ಲಿ ಶವ ಪತ್ತೆ: ಬೆಂಗಳೂರು ಮೂಲದ ವ್ಯಕ್ತಿಯ ನಿಗೂಢ ಸಾವು!