More

    ಓಟಿಟಿಯಲ್ಲಿ ಬಿಜಿಯಾದ ನಟಿ ಯಾಮಿ; ಮೂರು ವರ್ಷಗಳಲ್ಲಿ ಐದು ಚಿತ್ರಗಳು ಬಿಡುಗಡೆ

    ಬಾಲಿವುಡ್ ನಟಿ ಯಾಮಿ ಗೌತಮ್ ಧರ್ 2021ರಲ್ಲಿ ಮದುವೆಯಾದ ಬಳಿಕವೂ ಸಾಕಷ್ಟು ಬಿಜಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ಅವರು ಇತ್ತೀಚಿನ ದಿನಗಳಲ್ಲಿ ನಟಿಸಿದ ಬಹುತೇಕ ಚಿತ್ರಗಳು ಬಿಡುಗಡೆಯಾಗಿರುವುದು ಓಟಿಟಿಯಲ್ಲಿ. 2019ರಲ್ಲಿ ಬಿಡುಗಡೆಯಾದ ‘ಬಾಲಾ’ ಬಳಿಕ ‘ಗಿನ್ನಿ ವೆಡ್ಸ್ ಸನ್ನಿ’, ‘ಭೂತ್ ಪೊಲೀಸ್’, ‘ಎ ಥರ್ಸೆ್ಡ, ‘ದಸ್ವೀ’ ಚಿತ್ರಗಳು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗಿವೆ.

    ಇದೀಗ ಅವರು ನಟಿಸಿರುವ ಮತ್ತೊಂದು ಸಿನಿಮಾ ‘ಲಾಸ್ಟ್’ ಕೂಡ ಓಟಿಟಿ ದಾರಿ ಹಿಡಿದಿದೆ. ಅಮಿತಾಭ್ ಬಚ್ಚನ್ ನಟಿಸಿದ್ದ ‘ಪಿಂಕ್ ’ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಅನಿರುದ್ಧ ರಾಯ್ ಚೌಧರಿ, ‘ಲಾಸ್ಟ್’ ಸಿನಿಮಾ ನಿರ್ದೇಶಿಸಿದ್ದಾರೆ. ಕೊಲ್ಕತ್ತಾದಲ್ಲಿ ನಡೆದ ನೈಜ ಘಟನೆಗಳಿಗೆ ಅನಿರುದ್ಧ ಸಿನಿಮಾ ರೂಪ ನೀಡಿದ್ದಾರೆ. ಯುವ ರಂಗಭೂಮಿ ಕಲಾವಿದ ಹಠಾತ್ತಾಗಿ ಕಣ್ಮರೆಯಾಗುತ್ತಾನೆ. ಆತನ ಹುಡುಕಾಟದಲ್ಲಿ ತೊಡಗುವ ಪತ್ರಕರ್ತೆಯ ಪಾತ್ರದಲ್ಲಿ ಯಾಮಿ ನಟಿಸಿದ್ದಾರೆ.

    ಪಂಕಜ್ ಕಪೂರ್, ರಾಹುಲ್ ಖನ್ನಾ, ನೀಲ್ ಭೂಪಾಳಂ, ಪಿಯಾ ಬಾಜಪೇಯಿ, ತುಷಾರ್ ಪಾಂಡೆ ಪ್ರಮುಖ ತಾರಾಗಣ ದಲ್ಲಿದ್ದಾರೆ. ಚಿತ್ರ ಫೆ. 16ರಂದು ಓಟಿಟಿಯಲ್ಲಿ ಬಿಡುಗಡೆ ಆಗಲಿದೆ. ‘ಲಾಸ್ಟ್’ ಜತೆಗೆ ಯಾಮಿ ಗೌತಮ್ ‘ಓಹ್ ಮೈ ಗಾಡ್ 2’ ಹಾಗೂ ‘ಚೋರ್ ನಿಕಲ್ ಕೆ ಭಾಗಾ’ ಚಿತ್ರಗಳು ಬಿಡುಗಡೆಗೆ ರೆಡಿಯಿವೆ.

    ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವಂಥ ದಾಳ ಉರುಳಿಸಿದ ಅಮಿತ್ ಷಾ

    ಗಂಡನ ನಾಲಗೆಯನ್ನೇ ಕಚ್ಚಿ ತುಂಡರಿಸಿದ ಹೆಂಡ್ತಿ; ವಾಪಸ್​ ಬಾ ಎಂದು ತವರಿಗೆ ಹೋಗಿ ಕರೆದಿದ್ದೇ ತಪ್ಪಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts