More

    ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವಂಥ ದಾಳ ಉರುಳಿಸಿದ ಅಮಿತ್ ಷಾ

    ಬೆಳಗಾವಿ: ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್​ ಷಾ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುಂಥ ದಾಳ ಉರುಳಿಸಿದ್ದಾರೆ. ಬೆಳಗಾವಿಯ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಒಂದೇ ಹೇಳಿಕೆ ಮೂಲಕ ಎರಡೂ ವಿರೋಧ ಪಕ್ಷಗಳನ್ನು ಟೀಕಿಸಿದ್ದಾರೆ.

    ಜ್ಞಾನಯೋಗಾಶ್ರಮದ ಸಿದ್ದೇಶ್ವರರ ಭಾವಚಿತ್ರಕ್ಕೆ ಪ್ರಣಾಮ ಸಲ್ಲಿಸಿದ ಅಮಿತ್ ಷಾ, ಸವದತ್ತಿ ಯಲ್ಲಮ್ಮ, ರಾಣಿ ಚನ್ನಮ್ಮ ಹೆಸರು ಪ್ರಸ್ತಾಪಿಸಿದರು. ವಿಧಾನಸಭೆಯಲ್ಲಿ ಸಾವರ್ಕರ್ ಫೋಟೋ ಹಾಕಿದ ಸಿಎಂ ಬೊಮ್ಮಾಯಿಯವರನ್ನು ಅಭಿನಂದಿಸಿದರು. ಅಲ್ಲದೆ ಎರಡು ಗಂಟೆ ತಡವಾದರೂ ದೊಡ್ಡ ಸಂಖ್ಯೆಯಲ್ಲಿ ನೆರೆದ ಜನರಿಗೆ ನಮಸ್ಕರಿಸಿದ ಅವರು, ಮುಖ್ಯಮಂತ್ರಿಯವರ ಹುಟ್ಟುಹಬ್ಬವಿದೆ, ಎಲ್ಲರೂ ಚಪ್ಪಾಳೆ ತಟ್ಟಿ ಎಂದು ಹೇಳಿ ಶುಭಾಶಯ ಕೋರಿದರು.

    ಎಲ್ಲರೂ ಎರಡು ಡೋಸ್ ವ್ಯಾಕ್ಸಿನ್ ಪಡೆದಿದ್ದೀರಾ ಎಂದು ಪ್ರಶ್ನೆ ಮಾಡಿದ ಅವರು, ಎರಡು ಡೋಸ್ ಲಸಿಕೆ ಉಚಿತವಾಗಿ ಬಿಜೆಪಿ ಸರ್ಕಾರ ನೀಡಿದೆ. ಕೊರೊನಾದಿಂದ ದೇಶವನ್ನು ಸುರಕ್ಷಿತಗೊಳಿಸುವ ಕೆಲಸ ಮಾಡಿದೆ ಎಂದರು. ದಲಿತ ಮಗನನ್ನು ರಾಷ್ಟ್ರಪತಿ ಮಾಡಿದ್ವಿ, ಆದಿವಾಸಿ ‌ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ ಎಂದರು.

    ಅನೇಕ ಭರವಸೆಯನ್ನು ಕಾಂಗ್ರೆಸ್-ಜೆಡಿಎಸ್​​ನವರು ಕೊಡುತ್ತಿದ್ದಾರೆ. ಆದರೆ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಮೋದಿ ಸರ್ಕಾರ ಯೋಜನೆ ಕೊಂಡಾಡಿದ ಅಮಿತ್ ಷಾ, ಕಾಂಗ್ರೆಸ್-ಜೆಡಿಎಸ್ ಬಡವರಿವಾಗಿ ಏನು ಮಾಡಿದೆ ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್ ದೆಹಲಿಯ ಅನೇಕರ ಎಟಿಎಂ ಆಗಿ ಕೆಲಸ ಮಾಡಿದೆ. ಕಾಂಗ್ರೆಸ್ ನೆರವಿನಿಂದ ಅಧಿಕಾರದ ಮಾಡಿದ ಜೆಡಿಎಸ್ ಪಕ್ಷವನ್ನೂ ದೂರವಿಡಬೇಕಿದೆ. ಜೆಡಿಎಸ್​ಗೆ ಹಾಕುವ ಮತ ಕಾಂಗ್ರೆಸ್ ಹಾಕಿದ ಹಾಗೆ. ಕರ್ನಾಟಕದ ಜನರು ಏಪ್ರಿಲ್-ಮೇನಲ್ಲಿ ರಾಜ್ಯದ ಚುಕ್ಕಾಣಿ ಯಾರ ಕೈಯಲ್ಲಿ ಇರಬೇಕು ಎಂದು ತೀರ್ಮಾನ ಮಾಡಬೇಕಿದೆ ಎನ್ನುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವಂಥ ಹೇಳಿಕೆಯನ್ನು ಷಾ ನೀಡಿದರು.

    ಭಾರತ ಇಂದು ಜಿ‌-20 ಅಧ್ಯಕ್ಷತೆ ವಹಿಸುತ್ತಿದೆ. ಜಗತ್ತು ಇಂದು ಭಾರತದ ಪ್ರಧಾನಿ ಏನು ಹೇಳುತ್ತಾರೆ ಎಂಬುದನ್ನು ಗಮನಿಸುತ್ತದೆ. ದೇಶದ ಆರ್ಥಿಕತೆ 11ನೇ ಸ್ಥಾನದಲ್ಲಿ ಇದ್ದಿದ್ದು, ಈಗ ಐದನೇ ಸ್ಥಾನದಲ್ಲಿದೆ ಎಂದ ಷಾ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಗಬೇಕು. ಜಿಲ್ಲೆಯಲ್ಲಿ 17 ಸ್ಥಾನ ಗೆಲ್ಲಿಸಬೇಕು. ಮೋದಿ ಮೇಲೆ ಭರವಸೆ ಇಟ್ಟು ಪೂರ್ಣ ಪ್ರಮಾಣದ ಸರ್ಕಾರದ ರಚನೆಗೆ ಅವಕಾಶ ಕೊಡಿ ಎಂದು ಹೇಳಿದರು.

    ಶಾಲೆಯಲ್ಲೇ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಹದಿಹರೆಯದ ವಿದ್ಯಾರ್ಥಿನಿ!

    ನಮ್ಮಲ್ಲೇ ಮೊದಲು: ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ-ತಂತ್ರಜ್ಞಾನ ಬಳಸಿ ಬರೆದ ಸುದ್ದಿ; ಇದು ಸಮಸ್ತ ಹಿರಿಯ ನಾಗರಿಕರಿಗೆ ಅರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts