More

    ಬೇಲೂರಿನ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದ ವೇಳೆ ಕುರಾನ್ ಪಠಣ ಬೇಡ: ಡಿಸಿ ಮನವಿ

    ಹಾಸನ: ವಿಶ್ವ ವಿಖ್ಯಾತ ಬೇಲೂರಿನ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದ ವೇಳೆ ಕುರಾನ್ ಪಠಣ ಪದ್ದತಿ ನಿಲ್ಲಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.
    ಪ್ರತಿವರ್ಷ ಯುಗಾದಿ ಬಳಿಕ ಚನ್ನಕೇಶವ ಸ್ವಾಮಿ ರಥೋತ್ಸವ ನೆರವೇರುತ್ತದೆ. ರಥೋತ್ಸವ ಸಮಯದಲ್ಲಿ ದೊಡ್ಡ ಮೇದೂರಿನ ಖಾಜಿಯವರು ಚನ್ನಕೇಶವನ ತೇರಿನ ಮುಂದೆ ಕೆಲವರು ಕುರಾನ್ ಪಠಿಸುತ್ತಾರೆ. ಐತಿಹಾಸಿಕ ಹಿಂದೂ ದೇವಾಲಯದಲ್ಲಿ ಮುಸ್ಲಿಂ ಧರ್ಮ ಪ್ರಚಾರ ಮಾಡುವುದು ಸರಿಯಲ್ಲ. ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ ನಡೆಸುವ ಉದ್ದೇಶದಿಂದಲೇ ಈ ಪದ್ಧತಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
    ಬೇಲೂರಿನ ಚನ್ನಕೇಶವ ದೇವಾಲಯ ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಹೊಯ್ಸಳರ ಕಾಲದ ಗತ ವೈಭವವನ್ನು ಸಾರುವ ದೇವಾಲಯದಲ್ಲಿ ಅನ್ಯ ಮತೀಯರಿಂದ ಈ ರೀತಿಯ ಕೆಲಸ ಮಾಡಿಸುವುದು ಸರಿಯಲ್ಲ. ತೇರಿನ ಮುಂದೆ ಕುರಾನ್ ಪಠಣೆ ಅಥವಾ ಮುಜುರೆ ಮರ್ಯಾದೆ ಸಲ್ಲಿಸುವುದಕ್ಕೆ ಯಾವ ಆಧಾರವಿಲ್ಲ ಎಂದರು.
    ಜಿಲ್ಲಾಡಳಿತ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ವರ್ಷ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಪ್ರಮಾದ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಮನವಿ ಸಲ್ಲಿಸಿದರು.
    ಹಿಂದೂ ಸಂಘಟನೆ ಮುಖಂಡರಾದ ಡಾ.ರಮೇಶ್, ಭಜರಂಗದಳ ನಗರ ಕಾರ್ಯದರ್ಶಿ ರೋಹಿತ್, ನಗರ ಸಂಯೋಜಕ ಯಶವಂತ್, ತಾಲ್ಲೂಕು ಕಾರ್ಯದರ್ಶಿ ಮಂಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts