More

    ಕೆಂಪು ಕೋಟೆ ಹಿಂಸಾಚಾರದ ಪ್ರಮುಖ ಆರೋಪಿ ದೀಪ್​ ಸಿಧು ಬಂಧನ

    ನವದೆಹಲಿ: ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆ ಬಳಿ ನಡೆದ ರೈತರ ಹಿಂಸಾಚಾರದ ಪ್ರಮುಖ ಆರೋಪಿ ಹಾಗೂ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಿರುವ ಪಂಜಾಬಿ ನಟ, ನಟ ದೀಪ್ ಸಿಧುವನ್ನು ದೆಹಲಿ ಪೊಲೀಸರು ಮಂಗಳವಾರ (ಫೆ. 9) ಬಂಧಿಸಿದ್ದಾರೆ.

    ಹಿಂಸಾಚಾರದ ಬಳಿಕ ತಲೆಮರೆಸಿಕೊಂಡಿದ್ದ ದೀಪ್​ ಸಿಧು ಮತ್ತು ಇತರೆ ಮೂವರು ಆರೋಪಿಗಳ ಸುಳಿವು ನೀಡಿದರೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಣೆ ಮಾಡಿದ್ದರು.

    ಇದನ್ನೂ ಓದಿರಿ: ಆಸ್ಪತ್ರೆ ಬೆಡ್​ ಮೇಲೆಯೇ ವಧುವಿಗೆ ತಾಳಿ ಕಟ್ಟಿದ ವರ: ಕಾರಣ ಕೇಳಿದ್ರೆ ನಿಜಕ್ಕೂ ಹುಬ್ಬೇರಿಸ್ತೀರಾ!

    ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟುಮಾಡುವುದನ್ನು ತಡೆಯುವ ಕಾಯ್ದೆ ಸೇರಿದಂತೆ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ತ್ವ ಶಾಸ್ತ್ರದ ತಾಣಗಳು ಮತ್ತು ಉಳಿದಿರುವ ಕಾಯಿದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ, ಕೊಲೆ ಯತ್ನ ಪ್ರಕರಣ (307), ಸೆಕ್ಷನ್ 152 ರ ಅಡಿಯಲ್ಲಿ ದಂಗೆಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾಗ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿದ ಆರೋಪಗಳ ಅಡಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೀಪ್​ ಸಿಧು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

    ಗಲಭೆಗೆ ಕುಮ್ಮಕ್ಕು ನೀಡುವ ಆರೋಪದ ಕುರಿತು ಬಹಿರಂಗಗೊಳ್ಳುತ್ತಿದ್ದಂತೆಯೇ ನಟ ದೀಪ್‌ ಸಿಧು ನಾಪತ್ತೆಯಾಗಿದ್ದರು. ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಸದಸ್ಯರಾಗಿರುವ ದೀಪ್ ಸಿಧು ಅವರು ಪ್ರಚೋದಿತ ಭಾಷಣ ಮಾಡಿ, ಗುಂಪನ್ನು ಕೆಂಪು ಕೋಟೆಗೆ ಕರೆದೊಯ್ದರು ಎಂದು ರೈತ ಸಂಘಟನಗೆಳು ಆರೋಪಿಸಿದ್ದವು.

    ಇದನ್ನೂ ಓದಿರಿ: ದೈಹಿಕ ಸಂಭೋಗ ನೆಪದಲ್ಲಿ ಮಂಚಕ್ಕೆ ಕಟ್ಟಿ ಮಹಿಳೆ ಮೇಲೆ ವಿಕೃತಿ: ಬಂಧಿತರು ಬಿಚ್ಚಿಟ್ಟ ಭಯಾನಕ ಸತ್ಯವಿದು!

    ಜ. 26ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ 86 ಮಂದಿ ಗಾಯಗೊಂಡಿದ್ದರು. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್​ ರ್ಯಾಲಿಗೆ ನಾಲ್ಕು ಗಡಿಗಳಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿತ್ತು. ಅದಕ್ಕಾಗಿ ಕೆಲವೊಂದು ಷರತ್ತುಗಳನ್ನೂ ವಿಧಿಸಲಾಗಿತ್ತು. ಎಲ್ಲಾ ಷರತ್ತುಗಳನ್ನು ರೈತರು ಒಪ್ಪಿಕೊಂಡಿದ್ದರು. ಆದರೆ, ಉದ್ದೇಶಪೂರ್ವಕವಾಗಿಯೇ ಹಿಂಸಾಚಾರವು ನಡೆದಿತ್ತು. ಈ ವೇಳೆ ಕಂಡಕಂಡಲ್ಲಿ ಪೊಲೀಸರ ಮೇಲೂ ಹಲ್ಲೆ ನಡೆದಿತ್ತು. ಹಿಂಸಾಚಾರದ ಹಿಂದೆ ದೀಪ್​ ಸಿಧು ಕೈವಾಡ ಹಿನ್ನೆಲೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿತ್ತು. ಇದೀಗ ಬಂಧಿಲಾಗಿದೆ. (ಏಜೆನ್ಸೀಸ್​)

    ಹಿಮದಲ್ಲಿ ಕರಗಿದ ಕಣ್ಣೀರು; 171 ಮಂದಿ ಇನ್ನೂ ನಾಪತ್ತೆ, ಸಂಪರ್ಕ ಕಡಿದುಕೊಂಡ14 ಹಳ್ಳಿ

    ಕಾಣೆಯಾಗಿದ್ದ ಯುವಕ ಮಂಗಳಮುಖಿಯಾಗಿ ಪ್ರತ್ಯಕ್ಷ: ಆತ್ಮಹತ್ಯೆಗೂ ಮುನ್ನ ಸ್ಫೋಟಕ ರಹಸ್ಯ ಬಯಲು!

    ಮದುವೆ ಸಮಾರಂಭದಲ್ಲಿ ಚೆನ್ನೈ ಟೆಸ್ಟ್ ಪಂದ್ಯ ನೇರಪ್ರಸಾರ, ಫೋಟೋ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts