More

    ಚೀನಾದ ನರಿ ಬುದ್ಧಿ ಬಟಾ ಬಯಲು! ಭಾರತೀಯರ ಸೋಗಿನಲ್ಲಿ ನಡೆಯತ್ತಿದೆ ದಾರಿ ತಪ್ಪಿಸುವ ಕೆಲಸ

    ನವದೆಹಲಿ: ಭಾರತದ ವಿರುದ್ಧ ಸದಾ ಒಂದಿಲ್ಲೊಂದು ಮಸಲತ್ತು ಮಾಡುವ ಚೀನಾದ ಮತ್ತೊಂದು ಅಸಲಿ ಮುಖವಾಡ ಇದೀಗ ಕಳಚಿ ಬಿದ್ದಿದೆ. ಭಾರತದ ವಿರುದ್ಧ ನಕಲಿ ಸುದ್ದಿಗಳನ್ನು ಹರಡಲು ಚೀನಾದಲ್ಲಿ ಸಾಕಷ್ಟು ನಕಲಿ ಫೇಸ್​ಬುಕ್​ ಖಾತೆಗಳನ್ನು ತೆರೆಯಲಾಗುತ್ತಿದೆ ಎಂದು ಮೆಟಾ ಕಂಪನಿ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

    ಸಾರ್ವಜನಿಕ ಅಭಿಪ್ರಾಯವನ್ನು ಅತ್ಯಂತ ಕುಶಲತೆಯಿಂದ ನಿರ್ವಹಿಸಲು ಮತ್ತು ಮಾತುಗಳನ್ನು ಪ್ರಭಾವಿಸಲು ಈ ನಕಲಿ ಖಾತೆಗಳು ಬಳಸುತ್ತಿರುವ ಅತ್ಯಾಧುನಿಕ ಕಾರ್ಯತಂತ್ರಗಳ ಮೇಲೆ ಮೆಟಾ ವರದಿಯು ಬೆಳಕು ಚೆಲ್ಲುತ್ತದೆ. ತನ್ನ ತ್ರೈಮಾಸಿಕ ಬೆದರಿಕೆ ವರದಿಯಲ್ಲಿ ಅನೇಕ ಕಳವಳಕಾರಿ ಅಂಶಗಳನ್ನು ಮೆಟಾ ಉಲ್ಲೇಖಿಸಿದ್ದು, ಈ ವರ್ಷದ ಆರಂಭದಿಂದ ಬಹದೊಡ್ಡ ಮಟ್ಟದ ನಕಲಿ ಖಾತೆಗಳ ಜಾಲ ಸೃಷ್ಟಿ ಆಗಿರುವುದನ್ನು ಬಹಿರಂಗಪಡಿಸಿದೆ.

    ಭಾರತೀಯರ ಸೋಗಿನಲ್ಲಿ ಈ ನಕಲಿ ಖಾತೆಗಳು ಸಕ್ರಿಯವಾಗಿದ್ದು, ಭಾರತದ ರಾಜಕೀಯ ಮತ್ತು ರಾಷ್ಟ್ರೀಯ ಭದ್ರತೆ ಕುರಿತಾದ ಇತರೆ ಸಮಸ್ಯೆಗಳ ವಿಚಾರದಲ್ಲಿ ತಪ್ಪಾದ ಮಾಹಿತಿಯನ್ನು ಹರಿಬಿಡಲಾಗುತ್ತಿದೆ. ಪತ್ರಕರ್ತರು, ವಕೀಲರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ವೇಷದಲ್ಲಿ ಕಾಲ್ಪನಿಕ ವ್ಯಕ್ತಿಗಳು ಫೇಸ್​ಬುಕ್​ ನಕಲಿ ಖಾತೆಗಳ ಜಾಲವನ್ನು ಆಪರೇಟ್​ ಮಾಡುತ್ತಿದ್ದಾರೆ.

    ಈ ಖಾತೆಗಳಲ್ಲಿ ಹೆಚ್ಚಾಗಿ ಇಂಗ್ಲಿಷ್​​ನಲ್ಲಿ ಪೋಸ್ಟ್​ ಮಾಡಲಾಗುತ್ತಿದ್ದು, ಹಿಂದಿ ಮತ್ತು ಚೀನಾ ಭಾಷೆಯ ಬಳಕೆಯನ್ನು ಕಡಿಮೆ ಇದೆ. ಟಿಬೆಟ್ ಮತ್ತು ಅರುಣಾಚಲ ಪ್ರದೇಶದಲ್ಲಿ ಪ್ರಾದೇಶಿಕ ಸುದ್ದಿ, ಸಂಸ್ಕೃತಿ, ಕ್ರೀಡೆ ಮತ್ತು ಪ್ರಯಾಣದ ಬಗ್ಗೆ ಬರೀ ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದೇ ಈ ನಕಲಿ ಖಾತೆಗಳ ಪ್ರಧಾನ ಕೃತ್ಯವಾಗಿದೆ. ಅದರಲ್ಲೂ ಟಿಬೆಟ್ ಕೇಂದ್ರಿತ ನಕಲಿ ಖಾತೆಗಳು ದಲೈ ಲಾಮಾರನ್ನು ದೇಶಭ್ರಷ್ಟ ಟಿಬೆಟಿಯನ್ ನಾಯಕ ಎಂದು ಕರೆದಿದ್ದು, ಅವರ ಅನುಯಾಯಿಗಳನ್ನೂ ಸೇರಿಸಿ, ಭ್ರಷ್ಟಾಚಾರ ಮತ್ತು ಶಿಶುಕಾಮದ ಗಂಭೀರ ಆರೋಪ ಮಾಡಲಾಗಿದೆ. ಅಲ್ಲದೆ, ತಾವು ಸ್ವಾತಂತ್ರ್ಯ-ಪರ ಕಾರ್ಯಕರ್ತರೆಂದು ಹೇಳಿಕೊಂಡಿದ್ದಾರೆ ಎಂದು ಮೆಟಾ ವರದಿಯಲ್ಲಿ ತಿಳಿಸಿದೆ.

    ಅರುಣಾಚಲ ಪ್ರದೇಶ ಕೇಂದ್ರಿತ ಖಾತೆಗಳು ಭಾರತೀಯ ಸೇನೆ, ಭಾರತೀಯ ಅಥ್ಲೀಟ್‌ಗಳು ಮತ್ತು ಭಾರತೀಯ ವೈಜ್ಞಾನಿಕ ಸಾಧನೆಗಳ ಬಗ್ಗೆ ಪಾಸಿಟಿವ್​ ಆಗಿ ಪೋಸ್ಟ್ ಮಾಡಿದ್ದರೂ, ಮಣಿಪುರದಲ್ಲಿ ಭ್ರಷ್ಟಾಚಾರ ಮತ್ತು ಜನಾಂಗೀಯ ಹಿಂಸಾಚಾರವನ್ನು ಭಾರತ ಸರ್ಕಾರ ಬೆಂಬಲಿಸುತ್ತಿದೆ ಎಂದು ಆರೋಪಿಸಿರುವುದಾಗಿ ಫೇಸ್‌ಬುಕ್‌ನ ಮೂಲ ಕಂಪನಿ ತನ್ನ ವರದಿಯಲ್ಲಿ ಹೇಳಿದೆ.

    ಇನ್ನೂ ಈ ಖಾತೆಗಳಲ್ಲಿರುವ ವಿಚಾರಗಳು ಅಧಿಕೃತ ಎಂದು ಬಿಂಬಿಸಲು ಖಾತೆಗಳಲ್ಲಿ ಪರಸ್ಪರ ಕಾಮೆಂಟ್ ಮಾಡುವುದು ಮತ್ತು ಶೇರ್​ ಮಾಡಿಕೊಳ್ಳುತ್ತಿದ್ದಾರೆ ಎಂದು ಟೆಕ್ ದೈತ್ಯ ಮೆಟಾ ತಿಳಿಸಿದೆ. ಆದರೆ, ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ಈ ನೆಟ್‌ವರ್ಕ್ ಅನ್ನು ಯಶಸ್ವಿಯಾಗಿ ತೆಗೆದು ಹಾಕಲಾಗಿದೆ ಎಂದು ಮೆಟಾ ತಿಳಿಸಿದೆ.

    ಚೀನಾದ ಈ ಕುತಂತ್ರ ಬುದ್ಧಿ ಭಾರತಕ್ಕೆ ಮಾತ್ರ ಸೀಮಿತವಾಗದೆ, ಅಮೆರಿಕಕ್ಕೂ ವ್ಯಾಪಿಸಿದೆ. ಸುಮಾರು 4,700 ನಕಲಿ ಖಾತೆಗಳು ಯುಎಸ್ ರಾಜಕೀಯವನ್ನು ಗುರಿಯಾಗಿಸಿವೆ. ಗರ್ಭಪಾತ, ಅಧ್ಯಕ್ಷೀಯ ಅಭ್ಯರ್ಥಿಗಳು ಮತ್ತು ಯುಎಸ್-ಚೀನಾ ಸಂಬಂಧಗಳಂತಹ ವಿಷಯಗಳ ಕುರಿತು ನಿರಂತರವಾಗಿ ನಕಲಿ ಪೋಸ್ಟ್‌ಗಳನ್ನು ಮಾಡುತ್ತಲೇ ಇವೆ ಎಂದು ವರದಿ ಹೇಳಿದೆ. ಈ ಖಾತೆಗಳಲ್ಲಿ ಕೆಲವು ಅಮೆರಿಕನ್ನರಂತೆ ಪೋಸ್ ನೀಡಿದ್ದು, ಹಫ್‌ಪೋಸ್ಟ್, ಬ್ರೀಟ್‌ಬಾರ್ಟ್, ವಾಲ್ ಸ್ಟ್ರೀಟ್ ಜರ್ನಲ್ ಮತ್ತು ಫಾಕ್ಸ್ ನ್ಯೂಸ್‌ನಂತಹ ಮುಖ್ಯವಾಹಿನಿಯ ಯುಎಸ್ ಮಾಧ್ಯಮಗಳ ಲೇಖನಗಳಿಗೆ ಲಿಂಕ್‌ಗಳನ್ನು ಹಂಚಿಕೊಂಡಿವೆ ಎಂದು ವರದಿ ಹೇಳಿದೆ. (ಏಜೆನ್ಸೀಸ್​)

    ಐಪಿಎಲ್​​ ಹರಾಜು 2024: ಆರ್​ಸಿಬಿಯ ಲೆಕ್ಕಾಚಾರವೇನು? ಯಾರ ಮೇಲೆ ಕಣ್ಣಿಟ್ಟಿದೆ ಫಾಫ್ ಪಡೆ?

    ಪ್ರಧಾನಿ ಮೋದಿಯವರನ್ನು ಪ್ರಶಂಸಿಸಿದ ಜೆಡಿಯು ಎಂಪಿ: ‘ಇಂಡಿಯಾ’ಗೆ ಇರಿಸು ಮುರಸು- ರಾಜೀನಾಮೆಗೆ ಒತ್ತಾಯ

    ಮರಕ್ಕೆ ಡಿಕ್ಕಿ ಹೊಡೆದು ಎರಡು ತುಂಡಾಗಿ ಬಿದ್ದ ಬಸ್; 14 ಜನ ಸಾವು…20 ಮಂದಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts