ಮರಕ್ಕೆ ಡಿಕ್ಕಿ ಹೊಡೆದು ಎರಡು ತುಂಡಾಗಿ ಬಿದ್ದ ಬಸ್; 14 ಜನ ಸಾವು…20 ಮಂದಿಗೆ ಗಾಯ

ಥಾಯ್ಲೆಂಡ್: ಚಾಲಕನ ನಿಯಂತ್ರಣ ತಪ್ಪಿದ ಬಸ್ ಮರಕ್ಕೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದಲ್ಲಿ 14 ಮಂದಿ ಪ್ರಾಣ ಕಳೆದುಕೊಂಡು, 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಥಾಯ್ಲೆಂಡ್‌ನ ಪ್ರಚುವಾಪ್ ಖಿರಿ ಖಾನ್ ಪ್ರಾಂತ್ಯದಲ್ಲಿ ಸೋಮವಾರ (ಡಿಸೆಂಬರ್ 4, 2023) ಮಧ್ಯರಾತ್ರಿ  ಈ ಘಟನೆ ನಡೆದಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಬಸ್ ಮರಕ್ಕೆ ಡಿಕ್ಕಿ ಹೊಡೆದು ಎರಡು ಭಾಗವಾಯಿತು. ಬಸ್‌ಗೆ ತೀವ್ರ ಹಾನಿಯಾಗಿದ್ದು, ಅವಶೇಷಗಳಡಿ ಸಿಲುಕಿದ್ದ ಸಂತ್ರಸ್ತರನ್ನು ಹೊರತೆಗೆಯಲು ರಕ್ಷಣಾ ತಂಡ ಶ್ರಮಿಸಿದೆ. … Continue reading ಮರಕ್ಕೆ ಡಿಕ್ಕಿ ಹೊಡೆದು ಎರಡು ತುಂಡಾಗಿ ಬಿದ್ದ ಬಸ್; 14 ಜನ ಸಾವು…20 ಮಂದಿಗೆ ಗಾಯ