More

    ಐಪಿಎಲ್​​ ಹರಾಜು 2024: ಆರ್​ಸಿಬಿಯ ಲೆಕ್ಕಾಚಾರವೇನು? ಯಾರ ಮೇಲೆ ಕಣ್ಣಿಟ್ಟಿದೆ ಫಾಫ್ ಪಡೆ?

    ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ನ 17ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ದಿನಗಣನೆ ಆರಂಭವಾಗಿದೆ. ಡಿ.19ರಂದು ಇದೇ ಮೊದಲ ಬಾರಿಗೆ ವಿದೇಶದಲ್ಲಿ 2024ನೇ ಸಾಲಿನ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ದೂರದ ದುಬೈನಲ್ಲಿ ವೇದಿಕೆ ಸಿದ್ಧಗೊಳ್ಳುತ್ತಿದೆ. ಈಗಾಗಲೇ 10 ಫ್ರಾಂಚೈಸಿಗಳು ಆಟಗಾರರ ರಿಟೇನ್​ ಮತ್ತು ರಿಲೀಸ್​ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹರಾಜಿನಲ್ಲಿ ಪ್ರಮುಖ ಆಟಗಾರರನ್ನು ತಮ್ಮ ತಂಡಕ್ಕೆ ಸೆಳೆದುಕೊಳ್ಳಲು ಲೆಕ್ಕಾಚಾರ ಹಾಕುತ್ತಿವೆ.

    ಒಟ್ಟು 174 ಆಟಗಾರರನ್ನು ತಂಡಗಳು ಉಳಿಸಿಕೊಂಡಿದ್ದು, 81 ಆಟಗಾರರನ್ನು ಬಿಡುಗಡೆ ಮಾಡಿವೆ. ಕೋಲ್ಕತ್ತ ನೈಟ್ ರೈಡರ್ಸ್ ಅತಿ ಹೆಚ್ಚು ಆಟಗಾರರನ್ನು ಬಿಡುಗಡೆ ಮಾಡಿದ್ದು, ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಂಬರುವ ಐಪಿಎಲ್​ ಆವೃತ್ತಿಗೆ ಗರಿಷ್ಠ ಆಟಗಾರರನ್ನು ರಿಟೇನ್​ ಮಾಡಿಕೊಂಡಿವೆ.

    ಇನ್ನು ಆರ್​ಸಿಬಿ ತಂಡವು ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. ವನಿಂದು ಹಸರಂಗಾ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ದಾರ್ಥ್ ಕೌಲ್ ಹಾಗೂ ಕೇದಾರ್ ಜಾಧವ್ ಅವರನ್ನು ಬಿಡುಗಡೆ ಮಾಡಿದ್ದು, ಫಾಫ್ ಡುಪ್ಲೆಸಿಸ್ (ನಾಯಕ), ಗ್ಲೇನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರಣ್​ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್‌ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸಿ ಟೋಪ್ಲೆ, ಹಿಮಾನ್ಶು ಶರ್ಮಾ ಮತ್ತು ರಾಜನ್ ಕುಮಾರ್ ಅವರನ್ನು ಉಳಿಸಿಕೊಂಡಿದೆ. ಅಲ್ಲದೆ, ಮುಂಬೈ ತಂಡದಿಂದ ಆಲ್​ರೌಂಡರ್​ ಕ್ಯಾಮರನ್​ ಗ್ರೀನ್​ ಅವರನ್ನು ಖರೀದಿಸಿದೆ.

    ಇದೀಗ ತಂಡವನ್ನು ಮತ್ತಷ್ಟು ಬಲಪಡಿಸಲು ಆರ್​ಸಿಬಿ ಫ್ರಾಂಚೈಸಿ ಪ್ರಮುಖ ಆಟಗಾರರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಲೆಕ್ಕಾಚಾರ ಹಾಕಿದೆ. ಆರ್​ಸಿಬಿ ಜೇಬಿನಲ್ಲಿ ಸದ್ಯ 23.25 ಕೋಟಿ ರೂ. ಇದೆ. ಸದ್ಯಕ್ಕೆ ತಂಡದಲ್ಲಿ ಅತ್ಯುತ್ತಮ ಬ್ಯಾಟರ್​ಗಳಿರುವುದರಿಂದ ಆರ್​ಸಿಬಿ ಕಣ್ಣು ಇದೀಗ ಉತ್ತಮ ಬೌಲರ್​ಗಳ ಮೇಲೆ ನೆಟ್ಟಿದೆ. ಆಲ್​ರೌಂಡರ್​ ಕ್ಯಾಮರಾನ್​ ಗ್ರೀನ್​ ಜತೆಯಲ್ಲಿ ಇನ್ನೊಬ್ಬ ಆಲ್​ರೌಂಡರ್​ಗೆ ಆರ್​ಸಿಬಿ ಕಣ್ಣಿಟ್ಟಿದೆ. ಹರ್ಷಲ್​ ಪಟೇಲ್​ ಮತ್ತು ಜೋಶ್​ ಹಜಾಲ್​ವುಡ್​ರಂತಹ ಗುಣಮಟ್ಟದ ಬೌಲರ್​ಗಳ ಸ್ಥಾನವನ್ನು ತುಂಬಬಲ್ಲ ಉತ್ತಮ ಬೌಲರ್​ಗಳನ್ನು ಖರೀದಿಸುವ ಲೆಕ್ಕಾಚಾರದಲ್ಲಿ ಆರ್​​ಸಿಬಿ ತೊಡಗಿದೆ. ವೇಗಿಗಳು ಮಾತ್ರವಲ್ಲದೆ, ಸ್ಪಿನ್ನರ್​ಗಳ ಅವಶ್ಯಕತೆ ಇದ್ದು, ಅತ್ಯುತ್ತಮ ಸ್ಪಿನ್ನರ್​​ಗಳ ಮೇಲೆ ಆರ್​ಸಿಬಿ ಕಣ್ಣಿಟ್ಟಿದೆ.

    ಆಟಗಾರರ ರಿಟೇನ್​ ಮತ್ತು ರಿಲೀಸ್​ ಪಟ್ಟಿ ಬಿಡುಗಡೆಯ ಬಳಿಕ ಮುಂಬರುವ ಐಪಿಎಲ್​ ಹರಾಜಿಗೆ ಯಾವ್ಯಾವ ತಂಡಗಳು ತಮ್ಮ ಖಾತೆಯಲ್ಲಿ ಎಷ್ಟು ಹಣ ಬಾಕಿ ಉಳಿಸಿಕೊಂಡಿವೆ ಎಂಬುದರ ಮಾಹಿತಿ ಈ ಕೆಳಕಂಡತಿದೆ.
    1. ರಾಯಲ್ ಚಾಲೆಂಜರ್ಸ್ ಬೆಂಗಳೂರು – 23. 25 ಕೋಟಿ ರೂ.
    2. ಸನ್ ರೈಸರ್ಸ್ ಹೈದರಾಬಾದ್ – 34 ಕೋಟಿ ರೂ.
    3. ಕೋಲ್ಕತ್ತ ನೈಟ್ ರೈಡರ್ಸ್ – 32.7 ಕೋಟಿ ರೂ.
    4. ಚೆನ್ನೈ ಸೂಪರ್ ಕಿಂಗ್ಸ್ – 31.4 ಕೋಟಿ ರೂ.
    5. ಪಂಜಾಬ್ ಕಿಂಗ್ಸ್ – 29.1 ಕೋಟಿ ರೂ.
    6. ಡೆಲ್ಲಿ ಕ್ಯಾಪಿಟಲ್ಸ್ – 28.95 ಕೋಟಿ ರೂ.
    7. ಮುಂಬೈ ಇಂಡಿಯನ್ಸ್ – 17.75 ಕೋಟಿ ರೂ.
    8. ರಾಜಸ್ಥಾನ ರಾಯಲ್ಸ್ – 14.5 ಕೋಟಿ ರೂ.
    9. ಲಖನೌ ಸೂಪರ್​ ಗೇಂಟ್ಸ್​- 13.15 ಕೋಟಿ ರೂ.
    10. ಗುಜರಾತ್​ ಟೈಟಾನ್ಸ್​ – 38.15 ಕೋಟಿ ರೂ.

    ಹೊಸ ಆಕರ್ಷಣೆ
    ಐಪಿಎಲ್​ ಹರಾಜಿನಲ್ಲಿ ಈ ಬಾರಿ ಕೆಲ ಹೊಸ ಆಟಗಾರರ ಆಕರ್ಷಣೆಯೂ ಇರಲಿದೆ. ವಿಶ್ವಕಪ್​ ಫೈನಲ್​ ಹೀರೋ ಟ್ರಾವಿಸ್​ ಹೆಡ್​, ಪ್ಯಾಟ್​ ಕಮ್ಮಿನ್ಸ್​, ಮಿಚೆಲ್​ ಸ್ಟಾರ್ಕ್​ ಹರಾಜಿಗೆ ಮರಳುವ ನಿರೀಕ್ಷೆ ಇದ್ದರೆ, ನ್ಯೂಜಿಲೆಂಡ್​ನ ರಚಿನ್​ ರವೀಂದ್ರ ಮತ್ತು ಡೆರಿಲ್​ ಮಿಚೆಲ್​ ಮೊದಲ ಬಾರಿ ಅದೃಷ್ಟ ಪರೀಕ್ಷಿಸಲಿದ್ದಾರೆ. (ಏಜೆನ್ಸೀಸ್​)

    ಐಪಿಎಲ್​ ಹರಾಜಿಗೆ 1,166 ಕ್ರಿಕೆಟಿಗರ ಹೆಸರು ನೋಂದಣಿ; ಕಣದಲ್ಲಿದ್ದಾರೆ ವಿಶ್ವಕಪ್​ ತಾರೆಯರು…

    ಐಪಿಎಲ್​ನಲ್ಲಿ ಕರ್ನಾಟಕದ ಯಾವ ಕ್ರಿಕೆಟಿಗ ರಿಟೇನ್​? ಯಾರು ರಿಲೀಸ್? ಇಲ್ಲಿದೆ ವಿವರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts