ಐಪಿಎಲ್​ ಹರಾಜಿಗೆ 1,166 ಕ್ರಿಕೆಟಿಗರ ಹೆಸರು ನೋಂದಣಿ; ಕಣದಲ್ಲಿದ್ದಾರೆ ವಿಶ್ವಕಪ್​ ತಾರೆಯರು…

ಬೆಂಗಳೂರು: ಏಕದಿನ ವಿಶ್ವಕಪ್​ ವಿಜೇತ ಆಸ್ಟ್ರೆಲಿಯಾ ತಂಡದ ತಾರೆಯರಾದ ಟ್ರಾವಿಸ್​ ಹೆಡ್​, ನಾಯಕ ಪ್ಯಾಟ್​ ಕಮ್ಮಿನ್ಸ್​ ಮತ್ತು ಮಿಚೆಲ್​ ಸ್ಟಾರ್ಕ್​ ಸಹಿತ 1,166 ಆಟಗಾರರು ಮುಂಬರುವ ಐಪಿಎಲ್​ 17ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 830 ಭಾರತೀಯರಾಗಿದ್ದರೆ, 336 ವಿದೇಶೀಯರಾಗಿದ್ದಾರೆ. ಐಪಿಎಲ್​ ಹರಾಜು ಪ್ರಕ್ರಿಯೆ ಡಿಸೆಂಬರ್​ 19ರಂದು ದುಬೈನಲ್ಲಿ ನಡೆಯಲಿದ್ದು, 10 ತಂಡಗಳು ಒಟ್ಟಾರೆ ಗರಿಷ್ಠ 77 ಆಟಗಾರರನ್ನು ಖರೀದಿಸಲು ಅವಕಾಶವಿದೆ. 10 ತಂಡಗಳು ಒಟ್ಟು 262.95 ಕೋಟಿ ರೂ. ಬಜೆಟ್​ ಕೂಡ ಹೊಂದಿವೆ. … Continue reading ಐಪಿಎಲ್​ ಹರಾಜಿಗೆ 1,166 ಕ್ರಿಕೆಟಿಗರ ಹೆಸರು ನೋಂದಣಿ; ಕಣದಲ್ಲಿದ್ದಾರೆ ವಿಶ್ವಕಪ್​ ತಾರೆಯರು…