More

    ಸಾರಿಗೆ, ಲಾಜಿಸ್ಟಿಕ್​ ಮೇಲಿನ ಥೀಮ್ಯಾಟಿಕ್​ ಹೂಡಿಕೆಯಿಂದ ಪೋರ್ಟ್‌ಫೋಲಿಯೊಗೆ ವೇಗ

    | ನಾಗರಾಜ ಸಿರಿಗೇರಿ, ನಿರ್ದೇಶಕರು, ಕಾರ್ಯಂ ಫೈನಾನ್ಶಿಯಲ್ ಸರ್ವೀಸಸ್ ಪ್ರೈ.ಲಿ.

    ಇಂದಿನ ಅಸ್ಥಿರ ಮಾರುಕಟ್ಟೆಯ ಸನ್ನಿವೇಶದಲ್ಲಿ ಪ್ರತಿಯೊಬ್ಬ ಹೂಡಿಕೆದಾರ ತನ್ನ ಪೋರ್ಟ್​ಫೋಲಿಯೊ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಬಗ್ಗೆ ಚಿಂತಿಸುತ್ತಾನೆ. ಇದಾದ ಬಳಿಕ ತಾನು ಎಲ್ಲಿ ಹೂಡಿಕೆ ಮಾಡಬೇಕು ಎಂಬ ಚಿಂತೆ ಆತನಿಗೆ ಬರುತ್ತದೆ. ಸಾಮಾನ್ಯವಾಗಿ ಹೇಳುವಂತೆ ಸೂಕ್ತವಾದ ಮಾರ್ಗಗಳಲ್ಲಿ ಹೂಡಿಕೆ ಮಾಡಲು ಮತ್ತು ಮಾರುಕಟ್ಟೆಗೆ ಧುಮುಕಲು ಇದು ಸೂಕ್ತ ಸಮಯವಾಗಿದ್ದು, ಕಡಿಮೆ ಬೆಲೆಗೆ ಹೆಚ್ಚಿನ ಆಸ್ತಿಗಳನ್ನು ಖರೀದಿಸಿ ಲಾಭ ಮಾಡಬಹುದಾಗಿದೆ.

    ಮ್ಯೂಚುವಲ್ ಫಂಡ್‌ಗಳಲ್ಲಿ, ರೂಪಾಯಿ ವೆಚ್ಚದ ಸರಾಸರಿ ಪರಿಕಲ್ಪನೆಯಿಂದ ನೀವು ಪ್ರಯೋಜನ ಪಡೆಯಬಹುದು, ಅದರಲ್ಲೂ ವಿಶೇಷವಾಗಿ ನೀವು ವ್ಯವಸ್ಥಿತ ಹೂಡಿಕೆ ಯೋಜನೆಯನ್ನು ಹೊಂದಿದ್ದರೆ, ನಿಮ್ಮ ಹಣವು ನಿಮಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ. ಮಾರುಕಟ್ಟೆಯು ಅದರ ಲಾಭವನ್ನು ಗಳಿಸಿದಾಗ ನೀವು ಹೆಚ್ಚಿನ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ. ಪ್ರಸ್ತುತ ಮಾರುಕಟ್ಟೆ ಸನ್ನಿವೇಶದಲ್ಲಿ ನೀವು ಥೀಮ್ಯಾಟಿಕ್​ (ವಿಷಯಾಧಾರಿತ) ಹೂಡಿಕೆಯ ಅವಕಾಶಗಳನ್ನು ಪರಿಗಣಿಸುತ್ತಿದ್ದರೆ, ಆ ಬಗ್ಗೆ ಚಿಂತಿಸಲು ಒಂದಿಷ್ಟು ಅಂಶಗಳು ಇಲ್ಲಿವೆ.

    ಥೀಮ್ಯಾಟಿಕ್​ ಹೂಡಿಕೆ ಏಕೆ?
    ಥೀಮ್ಯಾಟಿಕ್​ ಹೂಡಿಕೆ ಬಗ್ಗೆ ಹೇಳುವುದಾದರೆ, ಇದೊಂದು ವಿಷಯಾಧಾರಿತ ಹೂಡಿಕೆ ಆಗಿದೆ. ಈ ಹೂಡಿಕೆಗೆ ಹೋಗುವುದರಿಂದ ನೀವು ಬಲವಾಗಿ ನಂಬುವ ಯಾವುದಾದರೊಂದು ಥೀಮ್​‌ನಲ್ಲಿ ಅಂತರ್ಗತವಾಗಿರುವ ಸಾಮರ್ಥ್ಯವನ್ನು ಬಳಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಅದು ಗ್ರಾಹಕ ಬಾಳಿಕೆಯ ವಸ್ತುಗಳಾಗಿರಬಹುದು ಅಥವಾ ಔಷಧಗಳು, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಆಗಿರಬಹುದು. ನೀವು ನಂಬುವಂತಹ ಥೀಮ್​ ಅನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು. ಈ ರೀತಿಯ ಹೂಡಿಕೆ ತಂತ್ರವು ನಿಮ್ಮ ಪೋರ್ಟ್‌ಫೋಲಿಯೊಗೆ ಒಂದು ಬಲವನ್ನು ನೀಡುತ್ತದೆ ಮತ್ತು ನೀವು ನಂಬುವ ಥೀಮ್​ಗಳಿಗೆ ಸಂಬಂಧಿಸಿದ ವಿವಿಧ ಕಂಪನಿಗಳಲ್ಲಿ ಹೆಚ್ಚಿನ ಆದಾಯ ಗಳಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ನಿಮ್ಮ ಹೂಡಿಕೆಯ ಪ್ರಯಾಣವನ್ನು ನೀವು ಹೆಚ್ಚು ಸರಳ ಮತ್ತು ಸುವ್ಯವಸ್ಥಿತಗೊಳಿಸುವುದಾದರೆ, ನೀವು ಪರಿಗಣಿಸಬೇಕಾದ ಪ್ರಮುಖ ವಿಷಯವೆಂದರೆ ಅದು ಸಾರಿಗೆ ಮತ್ತು ಲಾಜಿಸ್ಟಿಕ್ಸ್.

    ಸಾರಿಗೆ ಮತ್ತು ಲಾಜಿಸ್ಟಿಕ್ಸ್​ ವಿಷಯವನ್ನು ಆರ್ಥಿಕ ಬೆಳವಣಿಗೆಯ ಎಂಜಿನ್​ ಎಂದು ಪರಿಗಣಿಸಲಾಗಿದ್ದು, ಇದು 3 ಪ್ರಮುಖ ವಲಯಗಳ ಅಡಿಯಲ್ಲಿ ವಿಶಾಲವಾಗಿ ವರ್ಗೀಕರಿಸಲಾದ ಕೈಗಾರಿಕೆಗಳನ್ನು ಒಳಗೊಂಡಿದೆ.
    1. ಆಟೋ ಒರಿಜಿನಲ್​ ಎಕ್ವಿಪ್​ಮೆಂಟ್​ ಮ್ಯಾನುಫ್ಯಾಕ್ಚರರ್ಸ್​​ (OEMs): ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಟ್ರ್ಯಾಕ್ಟರ್​ ಮುಂತಾದವುಗಳ ತಯಾರಕರು
    2. ಆಟೋ ಆ್ಯನ್ಸಿಲರೀಸ್​: ಬ್ಯಾಟರಿಗಳು, ಎಲೆಕ್ಟ್ರಾನಿಕ್ಸ್​, ಟೈರ್​ಗಳು ಮುಂತಾದವುಗಳ ತಯಾರಕರು
    3. ಲಾಜಿಸ್ಟಿಕ್​​ ಕಂಪನಿಗಳು: ಸರಬರಾಜು ಸರಪಳಿ, ರೈಲು, ಹಡಗು ಮುಂತಾದವುಗಳು

    ಈ ವೈವಿಧ್ಯಮಯ ವರ್ಗೀಕರಣವು ಸಾರಿಗೆ ಮತ್ತು ಲಾಜಿಸ್ಟಿಕ್ ವಿಷಯದ ಮೇಲಿನ ಹೂಡಿಕೆದಾರರಿಗೆ ದೃಢವಾದ ಆದಾಯವನ್ನು ನೀಡುವ ಸಾಮರ್ಥ್ಯವನ್ನು ಅಸಾಧಾರಣವಾಗಿ ಹೆಚ್ಚಿಸುತ್ತದೆ.

    ಈ ಮೇಲಿನ ಥೀಮ್​ಗಳ ಸಾಮರ್ಥ್ಯದ ಬಗ್ಗೆ ನಿಮಗೆ ಮನವರಿಕೆಯಾದ ನಂತರ ನೀವು ಅವುಗಳನ್ನು ಪರಿಗಣಿಸಿ, ಹೂಡಿಕೆ ಮಾಡಬಹುದು. ಸಕ್ರಿಯವಾಗಿ ನಿರ್ವಹಿಸಲ್ಪಡುವ ಥೀಮ್ಯಾಟಿಕ್​​​ ಹೂಡಿಕೆ ಆಧಾರದ ಮೇಲೆ ಸಾರಿಗೆ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಥೀಮ್‌ನ ಲಾಭ ಪಡೆಯಲು ಸುಲಭವಾದ ಮಾರ್ಗಗಳಲ್ಲಿ ಥೀಮ್ಯಾಟಿಕ್​​​ ಹೂಡಿಕೆ ಸಹ ಒಂದಾಗಿದೆ.

    ICICI ಪ್ರುಡೆನ್ಶಿಯಲ್ AMC ಇತ್ತೀಚೆಗೆ ICICI ಪ್ರುಡೆನ್ಶಿಯಲ್ ಟ್ರಾನ್ಸ್‌ಪೋರ್ಟೇಶನ್ ಮತ್ತು ಲಾಜಿಸ್ಟಿಕ್ಸ್ ಫಂಡ್ ಅನ್ನು ಪ್ರಾರಂಭಿಸಿದೆ ಮತ್ತು ಇದರ NFO ಅವಧಿಯು 2022ರ ಅಕ್ಟೋಬರ್ 6 ರಿಂದ ಅಕ್ಟೋಬರ್ 20 ರವರೆಗೆ ತೆರೆದಿರುತ್ತದೆ. ನೀವು ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

    ಕರ್ನಾಟಕ ಹಿಜಾಬ್​ ಬ್ಯಾನ್​ ಕೇಸ್​: ಇಬ್ಬರು ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು, ಸಿಜೆಐ ಪೀಠಕ್ಕೆ ವರ್ಗಾವಣೆ

    ಕುಡುಕನಿಗೆ ಕಚ್ಚಿದ ಕೂಡಲೇ ನಾಗರಹಾವು ಸಾವು! ಭಯದಿಂದಲೇ ಸತ್ತ ಹಾವಿನ ಸಮೇತ ಆಸ್ಪತ್ರೆಗೆ ದಾಖಲು

    ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಕಳಚಿಬಿತ್ತು ವಿಮಾನದ ಲ್ಯಾಂಡಿಂಗ್​ ಗೇರ್​ ಟೈರ್! ಮುಂದೇನಾಯ್ತು ನೀವೇ ನೋಡಿ…​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts