More

    ಟೆಕ್ನಿಕಲ್ ಎವಿಡೆನ್ಸ್ ಸಿಗಲೇ ಇಲ್ಲ… ಕರಪತ್ರ ಹಂಚಿ ಆ್ಯಸಿಡ್​ ನಾಗೇಶ್​ನನ್ನು ಬಂಧಿಸಿದ್ದೇ ರೋಚಕ!

    ಬೆಂಗಳೂರು: ಸುಂಕದಕಟ್ಟೆಯಲ್ಲಿ ಏ.28ರಂದು ಹಾಡಹಗಲೇ ಯುವತಿಯ ಮೇಲೆ ಆ್ಯಸಿಡ್​ ದಾಳಿ ನಡೆಸಿ ಪರಾರಿಯಾಗಿದ್ದ ಭಗ್ನಪ್ರೇಮಿ ನಾಗೇಶ್​ನ ಪತ್ತೆಗೆ ಪೊಲೀಸರು ಪಟ್ಟ ಹರಸಾಹಸ ಅಷ್ಟಿಷ್ಟಲ್ಲ. ಆರೋಪಿ ಮೊಬೈಲ್, ಲ್ಯಾಪ್​ಟಾಪ್​ ಏನೂ ಬಳಸ್ತಿರಲಿಲ್ಲ. ಹೀಗಾಗಿ ಆತನನ್ನು ಹುಡುಕಲು ಟೆಕ್ನಿಕಲ್ ಎವಿಡೆನ್ಸ್ ಸಿಕ್ಕಿರಲಿಲ್ಲ. ಆದರೂ ಕರ್ನಾಟಕದ ಪೊಲೀಸರು ಕರಪತ್ರ ಹಂಚಿ ನಾಗೇಶ್​ನನ್ನು 16ನೇ ದಿನಕ್ಕೇ ಬಂಧಿಸಿದ್ದೇ ರೋಚಕ.

    ಹೌದು, ಆ್ಯಸಿಡ್​ ದಾಳಿಕೋರನ ಪತ್ತೆ ಹಚ್ಚುವಲ್ಲಿ ಮಹತ್ವದ ಪಾತ್ರವಹಿಸಿದ್ದು ಕರಪತ್ರ! ಎಸ್ಕೇಪ್ ಆಗೋವಾಗ್ಲೇ ಪ್ರೀ ಪ್ಲಾನ್ ಮಾಡ್ಕೊಂಡು ಆರೋಪಿ ಹೋಗಿದ್ದ. ಟೆಕ್ನಿಕಲ್ ಎವಿಡೆನ್ಸ್ ಏನೂ ಸಿಗದಂತೆ ಪ್ಲಾನ್ ಮಾಡಿಕೊಂಡು ಎಸ್ಕೇಪ್​ ಆಗಿದ್ದ. ಮೊಬೈಲ್ ಅನ್ನು ಎರಡೆರಡು ಬಾರಿ ಮೊಬೈಲ್ ಫ್ಲ್ಯಾಶ್ ಮಾಡಿ ಹೊಸಕೋಟೆಯಲ್ಲಿ ಮೊಬೈಲ್ ಬಿಸಾಕಿ ಹೋಗಿದ್ದ. ಆರೋಪಿಯ ಪತ್ತೆಗೆ ಒಂದೂ ಟೆಕ್ನಿಕಲ್ ಎವಿಡೆನ್ಸ್ ಸಿಕ್ಕಿರಲಿಲ್ಲ. ನಂತರ ಪೊಲೀಸರಿಗೆ ಹೊಳೆದದ್ದೇ ವಾಂಟೆಡ್​ ಕರಪತ್ರ ಐಡಿಯಾ! ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಪೊಲೀಸರು ಆರೋಪಿ ನಾಗೇಶ್ ಫೋಟೋ ಸಮೇತ ಕರಪತ್ರ ಹಂಚಿದ್ದರು. ಆಯಾ ರಾಜ್ಯಗಳಲ್ಲಿ, ಆಯಾ ಭಾಷೆಗಳಲ್ಲಿಯೇ ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರ ಅಂಟಿಸಿದ್ರು. ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳ ಮಠ, ಮಂದಿರ, ಧಾರ್ಮಿಕ ಕೇಂದ್ರ, ಆಶ್ರಮಗಳಲ್ಲಿ, ಅವುಗಳ ಸುತ್ತಮುತ್ತ ಕರಪತ್ರ ಅಂಟಿಸಲಾಗಿತ್ತು. ಅದ್ರಲ್ಲೂ ತಮಿಳುನಾಡಿನ ಸಿಟಿಗಳಲ್ಲಿ ಹೆಚ್ಚು ಫೋಕಸ್ ಮಾಡಲಾಗಿತ್ತು. ಕರಪತ್ರಕ್ಕಾಗಿಯೇ ಪೊಲೀಸ್ ಇಲಾಖೆ ಮೂರು ಲಕ್ಷ ರೂ. ಖರ್ಚು ಮಾಡಿತ್ತು.

    ತಿರುವಣ್ಣಾಮಲೈನಲ್ಲಿಯೂ ಆರೋಪಿಯ ಭಾವಚಿತ್ರವಿರೋ ಕರಪತ್ರಗಳನ್ನ ಮೇ 13ರ ಬೆಳಗ್ಗೆ ಅಂಟಿಸಲಾಗಿತ್ತು. ಅದನ್ನ ನೋಡಿಯೇ ಅಲ್ಲಿನ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಆಶ್ರಮದಲ್ಲಿ ಸ್ವಾಮೀಜಿ ವೇಷಧಾರಿಯಾಗಿರುವರ ವ್ಯಕ್ತಿಗೂ ಕರಪತ್ರದಲ್ಲಿರುವ ಭಾವಚಿತ್ರಕ್ಕೂ ಸಾಮ್ಯತೆ ಇದೆ ಎಂದಿದ್ದರು. ಕೂಡಲೇ ಅಲರ್ಟ್ ಆದ ಪೊಲೀಸರ ತಂಡ, ಭಕ್ತರ ವೇಷದಲ್ಲಿ ಆಶ್ರಮಕ್ಕೆ ಹೋಗಿ ಆ್ಯಸಿಡ್ ನಾಗನನ್ನು ಲಾಕ್ ಮಾಡಿದೆ. ಪೊಲೀಸರು ಆಶ್ರಮಕ್ಕೆ ಹೋದಾಗ ಆರೋಪಿ ಸ್ವಾಮೀಜಿ ವೇಷದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದ. ಅಲ್ಲಿ ಹೋಗಿ ನಿನ್ನ ಹೆಸರೇನು ಎಂದರೂ ಆರೋಪಿ ಬಾಯ್ಬಿಟ್ಟಿರಲಿಲ್ಲ. ಸ್ವಲ್ಪ ಜೋರಾಗಿ ಕೇಳಿದಾಗ ಆರೋಪಿ ತಾನೇ ನಾಗೇಶ ಎಂದು ಒಪ್ಪಿಕೊಂಡಿದ್ದಾನೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ ತಿಳಿಸಿದ್ದಾರೆ.

    ಆ್ಯಸಿಡ್​ ನಾಗ ಬಂಧನ: ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಯುವತಿ ಹೇಳ್ತಿರೋದು ಅದೊಂದೇ ಮಾತು…

    ಆ್ಯಸಿಡ್​ ದಾಳಿಕೋರ ನಾಗೇಶ್​ ಬಂಧನ: ಸ್ವಾಮೀಜಿ ವೇಷದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts