More

    ಅಪ್ಪು ಸರ್ ‘ಗಂಧದ ಗುಡಿ’ ಟೀಸರ್ ನೋಡಿ, ಅದನ್ನು ತೆಗೆದು ಬಿಡಿ ಅಂದ್ರು: ಮಹತ್ವದ ವಿಚಾರ ಹಂಚಿಕೊಂಡ ನಿರ್ದೇಶಕ

    ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್ ಅವರ ಕನಸಿನ ‘ಗಂಧದ ಗುಡಿ’ ಟೀಸರ್‌ ಇಂದು ಬಿಡುಗಡೆಯಾಗಿದ್ದು, ಈ ಸುಸಂದರ್ಭದಲ್ಲಿ ಗಂಧದ ಗುಡಿ ಅಂದ್ರೆನು? ಅದರಲ್ಲಿ ಏನೆಲ್ಲ ಇದೆ? ತನ್ನ ಹೆಸರಿನ ಮುಂದೆ ಪವರ್​ ಸ್ಟಾರ್​ ಎಂದು ಹಾಕಬೇಡಿ ಎಂದು ಸ್ವತಃ ಪುನೀತ್​ ಅವರೇ ಹೇಳಿ ತೆಗೆಸಿದ್ದೇಕೆ? ಎಂಬುದರ ಬಗ್ಗೆ ‘ಗಂಧದ ಗುಡಿ’ ನಿರ್ದೇಶಕ ಅಮೋಘವರ್ಷ ‘ದಿಗ್ವಿಜಯ ನ್ಯೂಸ್‘ಗೆ ವಿವರಿಸಿದ್ದಾರೆ.

    ಅಪ್ಪು ಸರ್​ಗೆ ಈ ಪ್ರಾಜೆಕ್ಟ್ ಮೇಲೆ ತುಂಬಾ ನಂಬಿಕೆಯಿತ್ತು. ಒಂದು ವರ್ಷ ಈ ಪ್ರಾಜೆಕ್ಟ್​ಗೆ ಕೆಲಸ ಮಾಡಿದ್ವಿ. ಬೆಟ್ಟ-ಗುಡ್ಡ, ಕಾಡು-ಮೇಡು, ಸಮುದ್ರ ಎಲ್ಲವನ್ನೂ ಅವರ ಜೊತೆ ಸುತ್ತಿದ್ದೇವೆ. ಇದು ಡಾಕ್ಯುಮೆಂಟರಿ ಅಲ್ಲ, ಡಿಫ್ರೆಂಟ್ ಸಿನಿಮಾ. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಅಪ್ಪು ಪಾತ್ರಧಾರಿಯಲ್ಲ. ಅವರಾಗೇ ಅವರು ಇದ್ದಾರೆ. ಟೀಸರ್ ರೆಡಿಯಾದ ಮೇಲೆ ಅಪ್ಪು ಸರ್​ ನನಗೆ ಕಾಲ್ ಮಾಡಿದ್ರು. ಈ ಸಿನಿಮಾದಲ್ಲಿ ‘ಪವರ್ ಸ್ಟಾರ್’ ಅಂತ ಬಳಸಬೇಡಿ ಅಂತ ಹೇಳಿದ್ರು. ಅವರು ಅಂದುಕೊಂಡ ಲೆವೆಲ್​ನಲ್ಲೇ ಲಾಂಚ್ ಮಾಡ್ತೀವಿ ಎಂದರು.

    ಕಿಂಚಿತ್ತೂ ಮೇಕಪ್​ ಇಲ್ಲದೇ ಅಪ್ಪು ಇದರಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಮತ್ತೊಂದು ವಿಶೇಷ. ಪ್ರತಿ ಶಾಲೆಯ ಮಕ್ಕಳು ನೋಡಬೇಕಾದ ಸಿನಿಮಾ ಇದು. ಇಡೀ ಕುಟುಂಬದವರು ಚಿತ್ರಮಂದಿರಕ್ಕೆ ಬಂದು ಇದನ್ನು ನೋಡಬಹುದು. ಇದರಲ್ಲಿ ಹಾಡುಗಳು ಕೂಡ ಇವೆ ಎಂದು ಅಮೋಘವರ್ಷ ವಿವರಿಸಿದರು. ಅಪ್ಪು ಅವರು ಹೇಗೆ ಕನಸು ಕಂಡಿದ್ದರೋ ಹಾಗೆ ಚಿತ್ರವನ್ನು ಹೊರ ತರುತ್ತೇವೆ ಎಂದರು.

    ಅಪ್ಪು ಸರ್ 'ಗಂಧದ ಗುಡಿ' ಟೀಸರ್ ನೋಡಿ, ಅದನ್ನು ತೆಗೆದು ಬಿಡಿ ಅಂದ್ರು: ಮಹತ್ವದ ವಿಚಾರ ಹಂಚಿಕೊಂಡ ನಿರ್ದೇಶಕ

    ನನಗೆ ಅವರೊಂದಿಗೆ ಒಂದು ವರ್ಷ ಕಳೆದದ್ದೇ ನನ್ನ ಪಾಲಿಗೆ ಪುಣ್ಯ. ಸದ್ಯ ಈ ಸಿನಿಮಾ ಪೋಸ್ಟ್​ ಪ್ರೊಡಕ್ಷನ್​ನಲ್ಲಿದೆ. ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತೆ ಈ ಸಿನಿಮಾ. ಸಮಯ ಬಂದಾಗ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಕೊಡುತ್ತೇವೆ ಎಂದರು.

    ನವೆಂಬರ್​ 1 ರಂದೇ ಗಂಧದಗುಡಿ ಟೀಸರ್​ ಬಿಡುಗಡೆ ಮಾಡಲು ಅಪ್ಪು ತಯಾರಿ ನಡೆಸಿದ್ದರು. ಎಲ್ಲವೂ ಅಂದುಕೊಂಡಂತೆ ಹಾಗಿದ್ದರೆ ಆ ದಿನವೇ ಅಪ್ಪು ಕನಸು ಅನಾವರಣಗೊಳ್ಳುತ್ತಿತ್ತು. ಆದರೆ, ಅ.29ರಂದು ಅಪ್ಪು ಬಾರದ ಲೋಕಕ್ಕೆ ಹೋಗಿದ್ದು, ಇಡೀ ಕರುನಾಡು ಕಣ್ಣೀರ ಕಡಲಲ್ಲಿ ಮುಳುಗಿತ್ತು. ಅಪ್ಪು ಕನಸನ್ನು ನನಸಾಗಿಸಲು ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ಮತ್ತು ಪಿಆರ್​ಕೆ ಪ್ರೊಡಕ್ಷನ್​ ಟೊಂಕ ಕಟ್ಟಿದ್ದು, ಇಂದು ಟೀಸರ್​ ಬಿಡುಗಡೆ ಆಗಿದೆ. 1 ನಿಮಿಷ 20 ಸೆಕೆಂಡ್‌ ಇರುವ ಟೀಸರ್​ ಸಖತ್​ ವೈರಲ್​ ಆಗುತ್ತಿದ್ದು. ಅಪ್ಪುವನ್ನ ನೋಡಿ ಅಭಿಮಾನಿಗಳು ಮಿಸ್​ ಯೂ ಸರ್​ ಎನ್ನುತ್ತಿದ್ದಾರೆ. ಕನ್ನಡ ನಾಡಿನ ಪ್ರಕೃತಿ ಸೌಂದರ್ಯ ಮತ್ತು ವನ್ಯಜೀವಿಗಳ ಕುರಿತ ಸಿನಿಮಾ ಇದಾಗಿದೆ.

    ಅಪ್ಪುವಿನ ‘ಗಂಧದ ಗುಡಿ’ ಟೀಸರ್ ನೋಡಿ ಶಾಕ್​ ಆಯ್ತು, ಬೇಜಾರೂ ಆಯ್ತು: ಶಿವಣ್ಣ ಭಾವುಕ

    ನಟ ಪುನೀತ್​ಗಾಗಿ 500 ಕಿ.ಮೀ. ದೂರದಿಂದ ಓಟದ ಮೂಲಕವೇ ಬೆಂಗಳೂರಿಗೆ ಆಗಮಿಸುತ್ತಿದ್ದಾಳೆ 3 ಮಕ್ಕಳ ತಾಯಿ!

    ಬಾದಾಮಿಯಲ್ಲಿ ಸಿದ್ದು ಸ್ಪರ್ಧಿಸೋದು ಬೇಡ! ಪಕ್ಷದ ವೇದಿಕೆಯಲ್ಲೇ ಭುಗಿಲೆದ್ದ ಆಕ್ರೋಶ, ಕೈಮುಗಿದರೂ ನಿಲ್ಲಲಿಲ್ಲ ಚಿಮ್ಮನಕಟ್ಟಿಯ ಅಸಮಾಧಾನ

    ನನ್ನ ಮಗ ಸತ್ತಾಗ ನಮ್ಮನ್ನು ತಬ್ಬಿಕೊಂಡು ನಾನಿದ್ದೀನಿ ಅಂತ ಚೆಕ್​ ಕೊಟ್ಟಿದ್ಯಲ್ಲಪ್ಪಾ.. ಅಪ್ಪು ಸಮಾಧಿ ಬಳಿ ಗೌರಮ್ಮ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts