More

    ಬಾದಾಮಿಯಲ್ಲಿ ಸಿದ್ದು ಸ್ಪರ್ಧಿಸೋದು ಬೇಡ! ಪಕ್ಷದ ವೇದಿಕೆಯಲ್ಲೇ ಭುಗಿಲೆದ್ದ ಆಕ್ರೋಶ, ಕೈಮುಗಿದರೂ ನಿಲ್ಲಲಿಲ್ಲ ಚಿಮ್ಮನಕಟ್ಟಿಯ ಅಸಮಾಧಾನ

    ಬಾಗಲಕೋಟೆ: ವೇದಿಕೆಯಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಗುಡುಗಿದ್ದಾರೆ. ಬಾದಾಮಿಯಿಂದ ಸಿದ್ದು ಸ್ಪರ್ಧಿಸೋದು ಬೇಡ ಎಂದು ಮುಖಕ್ಕೆ ಹೊಡೆದಂತೆ ಮಾಜಿ ಸಚಿವರು ಹೇಳಿದ್ದು, ಭಾಷಣ ನಿಲ್ಲಿಸುವಂತೆ ಮುಖಂಡರು ಮಾಡಿದರೂ ಮನವಿ ಕ್ಯಾರೇ ಅಂದಿಲ್ಲ.

    ಇಂತಹ ಘಟನೆ ಬಾದಾಮಿ ಪಟ್ಟಣದಲ್ಲಿ ಸೋಮವಾರ ಸಂಭವಿಸಿದೆ. ಸಿದ್ದರಾಮಯ್ಯ ಸಮ್ಮುಖದಲ್ಲಿ ನಡೆಯುತ್ತಿದ್ದ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಚಿಮ್ಮನಕಟ್ಟಿ, ನಾನು ಬಾದಾಮಿಯಿಂದ ಸ್ಪರ್ಧಿಸಿ ಎಂಎಲ್​ಎ ಆಗ್ತೀನಿ, ಮಂತ್ರಿನೂ ಆಗ್ತೀನಿ, ಸಿಎಂ ಕೂಡ ಆಗ್ತೀನಿ. ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸೋದು ಬೇಡ. ನನಗೆ ಎಂಎಲ್ಸಿ ಮಾಡ್ತೇನೇ ಅಂದಿದ್ದ ಸಿದ್ದರಾಮಯ್ಯ… ಮಾಡಿದ್ರಾ? ಎಂದು ಗರಂ ಆದ ಚಿಮ್ಮನಕಟ್ಟಿ, ಎಷ್ಟು ನೋವು ಅನುಭವಿಸಿದ್ದೇನೆ ಎಂದು ನನಗೆ ಗೊತ್ತು. ನಾನು ಐದಾರು ಸಲ ಎಂಎಲ್​ಎ ಆಗಿದ್ದೆ… ಮಂತ್ರಿ ಆಗಿದ್ದೆ… ಎಂದು ಆಕ್ರೋಶ ಹೊರಹಾಕಿದರು. ಆ ವೇಳೆ ಚಿಮ್ಮನಕಟ್ಟಿ ಅವರ ಭಾಷಣ ತಡೆಯಲು ಕೈ ಮುಖಂಡರು ಮುಂದಾದರೂ ಫಲಿಸಲಿಲ್ಲ. ಹಾಗೆಲ್ಲ ಮಾತಾಡಬೇಡಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಕೈ ಮುಗಿದು ಕೇಳಿಕೊಂಡರೂ ಚಿಮ್ಮನಕಟ್ಟಿ ಮಾತ್ರ ಸಿದ್ದುಗೆ ಟಾಂಗ್ ನೀಡುತ್ತಲೇ ಇದ್ದರು.

    ಸಿದ್ದರಾಮಯ್ಯ ಹಾಗೂ ಬೆಂಬಲಿಗರು ತಮ್ಮನ್ನು ಕಡೆಗಣಿಸಿದ್ದಾರೆ ಎಂಬ ವಿಚಾರಕ್ಕಾಗಿ ಅಸಮಾಧಾನಗೊಂಡಿರುವ ಚಿಮ್ಮನಕಟ್ಟಿ, ಈ ಹಿಂದಿನ ಅನೇಕ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇಂದು ಸಿದ್ದರಾಮಯ್ಯ ಅವರ ಎದುರೇ ಅಸಮಾಧಾನ ಹೊರ ಹಾಕಿದ್ದಾರೆ. ಚಿಮ್ಮನಕಟ್ಟಿ ಮಾತಿನಿಂದ ಸಿದ್ದರಾಮಯ್ಯ ಭಾರಿ ಮುಜುಗರಕ್ಕೆ ಒಳಗಾಗಿದ್ದಾರೆ.

    ಸೋಮವಾರ ಬೆಳಗ್ಗೆಯಷ್ಟೇ ಈಶ್ವರಪ್ಪ ಅವರಿಗೆ ಟಾಂಗ್ ಕೊಡುವ ವೇಳೆ ಸಿದ್ದರಾಮಯ್ಯ, ಬಾದಾಮಿ ಜನರು ಕರೆಯುತ್ತಿದ್ದಾರೆ. ನಾನು ಬಾದಾಮಿಯಿಂದಲೇ ಸ್ಪರ್ಧೆ ಮಾಡುವೆ ಎಂದಿದ್ದರು. ಇದಾದ ಸ್ವಲ್ಪ ಹೊತ್ತಲ್ಲೇ ಕ್ಷೇತ್ರದ ಹಿಂದಿನ ಶಾಸಕ, ಕಳೆದ ಸಲ ಸಿದ್ದುಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದ ಚಿಮ್ಮನಕಟ್ಟಿ ಅವರು ವೇದಿಕೆಯಲ್ಲೇ ಅಸಮಧಾನ ಹೊರಹಾಕಿದ್ದಾರೆ.

    ಎಸ್​ಐ ಹರೀಶ್​ನ ಕರ್ಮಕಾಂಡ ಬಿಚ್ಚಿಟ್ಟ ಮುಖ್ಯಪೇದೆ: ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದ ಸಬ್​ಇನ್​ಸ್ಪೆಕ್ಟರ್​

    ನಾನು ದೆಹಲಿಗೆ ಹೋದಾಗ ನನಗ್ಯಾರೂ ಒಂದು ಗ್ಲಾಸ್ ಕಾಫಿ ಕೊಡಲಿಲ್ಲ: ದೇವೇಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts