More

    ಪೊಲೀಸರ ಸೇವೆಯನ್ನು ನಾಗರಿಕ ಸಮಾಜ ಗೌರವಿಸಬೇಕು: ಪೊಲೀಸ್​ ಹುತಾತ್ಮ ದಿನಾಚರಣೆಯಲ್ಲಿ ಸಿಎಂ ಕರೆ

    ಹುಬ್ಬಳ್ಳಿ: ರಾಜ್ಯ ಪೊಲೀಸ್ ಇಲಾಖೆ ಹಾಗೂ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಕಾರವಾರ ರಸ್ತೆಯ ಸಿಎಆರ್ ಮೈದಾನದಲ್ಲಿ ‘ಪೊಲೀಸ್ ಹುತಾತ್ಮ’ ದಿನ ಆಚರಿಸಲಾಯಿತು. ಹುತಾತ್ಮ ಪೊಲೀಸರಿಗೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೌರವ ಸಮರ್ಪಿಸಿದರು.

    2020-21ನೇ ಸಾಲಿನಲ್ಲಿ ಹುತಾತ್ಮರಾದ ರಾಜ್ಯದ 16 ಪೊಲೀಸರು ಸೇರಿದಂತೆ ದೇಶದ 372 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಆತ್ಮಕ್ಕೆ ಶಾಂತಿ ಕೋರಲಾಯಿತು. ದೇಶದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವಂತೆ ಮಾಡುವಲ್ಲಿ ಪೊಲೀಸರ ಪಾತ್ರ ದೊಡ್ಡದು. ಪೊಲೀಸರು ನಮ್ಮ ಹಾಗೂ ದೇಶದ ರಕ್ಷಣೆಗಿದ್ದಾರೆ. ಪೊಲೀಸರ ಸೇವೆಯನ್ನು ನಾಗರಿಕ ಸಮಾಜ ಗೌರವಿಸಬೇಕು. ಸರ್ಕಾರ ಪೊಲೀಸ್ ಇಲಾಖೆಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದೆ. ಪೊಲೀಸ್ ನೇಮಕಾತಿ, ಪೊಲೀಸರಿಗೆ ಆರೋಗ್ಯ ಭಾಗ್ಯ, ಪ್ರಮೋಷನ್ ನೀಡುವಲ್ಲಿ ಸರ್ಕಾರ ಶ್ರಮಿಸಿದೆ‌ ಎಂದು ಸಿಎಂ ಹೇಳಿದರು.

    ಆನ್​ಲೈನ್ ಗೇಮ್ ಮೂಲಕ ರಾಜ್ಯದ ಅನೇಕ ಯುವಕರು ಹಣ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅನೇಕ‌ ಕುಟುಂಬಗಳು ಬೀದಿಗೆ ಬಂದಿವೆ. ಆನ್​ಲೈನ್ ಗ್ಯಾಂಬ್ಲಿಂಗ್ ಅನ್ನು ಮಟ್ಟ ಹಾಕಲು ಬಿಗಿಯಾದ ಕಾನೂನು ತಂದಿದ್ದೇವೆ. ಹೆಣ್ಣು ಮಕ್ಕಳ ಸುರಕ್ಷತೆಗೆ ಹೊಸ ಯೋಜನೆ ರೂಪಿಸಿದ್ದೇವೆ.‌ ರಾಜ್ಯದ ಎಲ್ಲ ಕಾಲೇಜಗಳಲ್ಲಿ ಸೆಲ್ಫ್​ ಡಿಫೆನ್ಸ್ ಯುನಿಟ್ ಮಾಡಲಿದ್ದೇವೆ. ಆತ್ಮರಕ್ಷಣೆ ತರಬೇತಿ ನೀಡಲಿದ್ದೇವೆ ಎಂದು ಸಿಎಂ ಹೇಳಿದರು.

    ಪೊಲೀಸರ ಸೇವೆಯನ್ನು ನಾಗರಿಕ ಸಮಾಜ ಗೌರವಿಸಬೇಕು: ಪೊಲೀಸ್​ ಹುತಾತ್ಮ ದಿನಾಚರಣೆಯಲ್ಲಿ ಸಿಎಂ ಕರೆ

    ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಲಾಭೂರಾಮ ಮತ್ತಿತರರು ಉಪಸ್ಥಿತರಿದ್ದರು.

    ಪ್ರೇಯಸಿ ಹೆಸರಲ್ಲಿ ಕೊಡಗು ಎಸ್​ಪಿಗೆ ಪತ್ರ ಬರೆದು ಮಧ್ಯಪ್ರದೇಶದಲ್ಲಿ ಪೊನ್ನಂಪೇಟೆ ಮೂಲದ ಯುವಕ ಆತ್ಮಹತ್ಯೆ!

    ಸತ್ಯ ಹೊರಬಂದ್ರೆ ಜೈಲಿಗೆ ಯಾರು ಹೋಗ್ತಾರೆ ಅಂತಾ ಗೊತ್ತಾಗುತ್ತೆ: ರಮೇಶ್​ ಕುಮಾರ್​ವಿರುದ್ಧ ಸಚಿವ ಸುಧಾಕರ್​ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts