More

    ಸತ್ಯ ಹೊರಬಂದ್ರೆ ಜೈಲಿಗೆ ಯಾರು ಹೋಗ್ತಾರೆ ಅಂತಾ ಗೊತ್ತಾಗುತ್ತೆ: ರಮೇಶ್​ ಕುಮಾರ್​ವಿರುದ್ಧ ಸಚಿವ ಸುಧಾಕರ್​ ಆಕ್ರೋಶ

    ಚಿಕ್ಕಬಳ್ಳಾಪುರ: ‘ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾದರೆ ಯಾರು ಜೈಲಿಗೆ ಹೋಗುತ್ತಾರೆ ಎಂದು ಗೊತ್ತಾಗುತ್ತದೆ ಎಂದು ಶ್ರೀನಿವಾಸಪುರ ಶಾಸಕ ರಮೇಶ್​ ಕುಮಾರ್​ಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸವಾಲು ಹಾಕಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ ಬುಧವಾರ ಮಾತನಾಡಿದ ಸುಧಾಕರ್, ಯಾರೇ ಬಂದ್ರೂ ಕೋಚಿಮುಲ್ ವಿಭಜನೆ ಮಾಡೇ ಮಾಡ್ತೇನೆ. ರಮೇಶ್ ಕುಮಾರ್, ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ಅಂತಹ 100 ಜನ ಬಂದ್ರೂ ಬಿಡಲ್ಲ. ಇದು ನನ್ನ ಘೋಷಣೆ ಎಂದರು.

    ಡಿಸಿಸಿ ಬ್ಯಾಂಕ್ ಭ್ರಷ್ಟಾಚಾರದ ಬಗ್ಗೆ ಮಹಾಭಾರತ ಬರೆಯಬಹದು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಡಿಸಿಸಿ ಬ್ಯಾಂಕ್ ರಿಂಗ್ ಮಾಸ್ಟರ್. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದೇಗೌಡ ಆ್ಯಕ್ಟರ್ ಅಷ್ಟೆ. ಶ್ರೀನಿವಾಸಗೌಡರಿಗೂ ಡೈರೆಕ್ಷನ್ ಮಾಡೋಕೆ ಗೊತ್ತಿಲ್ಲ. ಡೈರೆಕ್ಟರ್- ಪ್ರೊಡ್ಯೂಸರ್ ಎಲ್ಲವೂ ಅವರೇ. ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಅವರು ಯತ್ನಿಸುತ್ತಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ಶಾಸಕರು ತನ್ನ ಮಾತು ಕೇಳಬೇಕು ಅನ್ನೋದು ಅವರ ಆಸೆ ಎಂದು ರಮೇಶ್​ ಕುಮಾರ್​ ವಿರುದ್ಧ ಸುಧಾಕರ್​ ಕಿಡಿಕಾರಿದರು.

    ಶ್ರೀನಿವಾಸಗೌಡರ ತಲೆ ಕೆಡಿಸಿ ಅವರನ್ನು ದಳದಿಂದ ಕಾಂಗ್ರೆಸ್​ಗೆ ಕರೆ ತರುತ್ತಿದ್ದಾರೆ‌. ಕಾಂಗ್ರೆಸ್​ನಲ್ಲಿ ಇದ್ದವರು ದಳಕ್ಕೆ ಹೋಗಿದ್ದರು. ಮತ್ತೆ ಕಾಂಗ್ರೆಸ್​ ಬಂದು ಮಕ್ಮಲ್ ಟೋಪಿ ಹಾಕಿಸಿಕೊಳ್ಳುತಿದ್ದಾರೆ. ಕೆಜಿಎಫ್, ಶ್ರೀನಿವಾಸಪುರದಲ್ಲಿ 400-5೦೦ ಕೋಟಿ ರೂ. ಸಾಲ ಕೊಡ್ತಾರೆ. ಚಿಕ್ಕಬಳ್ಳಾಪುರ ಜಿಲ್ಲೆಯವರು ಏನು ಮಾಡಿದ್ರು? ಸಹಕಾರ ಕ್ಷೇತ್ರ ಇರೋದು ಸರ್ವರಿಗೂ ಸಮಪಾಲು-ಸಮಬಾಳು ಎಂಬುದಕ್ಕಾಗಿ. ಆದರೆ ಡಿಸಿಸಿ ಬ್ಯಾಂಕ್ ಅನ್ನು ರಾಜಕೀಯ ಬೆರೆಸಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪಾರದರ್ಶಕ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದೇನೆ. ಆದರೆ, ನ್ಯಾಯಾಲಯಕ್ಕೆ‌ ಹೋಗಿ ತನಿಖೆ ಬೇಡ ಎಂದು ತಡೆಯಾಜ್ಞೆ ತಂದಿದ್ದಾರೆ‌. ಇದರಲ್ಲೇ ಗೊತ್ತಾಗುತ್ತೆ ಕಳ್ಳ ಯಾರು? ಎಂದು. ನೀವು ಸಾಚಾ ಆಗಿದ್ರೆ ತಡೆಯಾಜ್ಞೆ ತರಲು ಏಕೆ ಹೋಗ್ತಿದ್ರೀ? ತನಿಖೆ ಆಗಲಿ ಅಂತಿದ್ರಿ, ಸತ್ಯಾಸತ್ಯತೆ ಹೊರಬರಲಿ ಅಂತಿದ್ರಿ. ಸತ್ಯ ಆಚೆ ಬಂದರೆ ನೀವು ಜೈಲಿಗೆ ಹೋಗ್ತೀರಿ ಅಂತ ನಿಮಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಸಚಿವ ಸೋಮಶೇಖರ್​ರ ತಾಯಿಯ ಆಸೆ ನೆರವೇರಿಸಿದ ಎಸ್​.ಎಂ. ಕೃಷ್ಣ!

    ಡೇಟಿಂಗ್​ಗಾಗಿ ಹಾತೊರೆದು ಆತನ ಗೆಳೆತನ ಬೆಳೆಸಿದ ಬೆನ್ನಲ್ಲೇ ಮಹಿಳಾ ಉದ್ಯೋಗಿಗೆ ಕಾದಿತ್ತು ಆಘಾತ!

    ಪರಸ್ತ್ರೀ ಜತೆ ಗ್ರಾಪಂ ಅಧ್ಯಕ್ಷೆ ಗಂಡನ ಕಾಮದಾಟ! ವಾಟ್ಸ್ಆ್ಯಪ್​ ಗ್ರೂಪ್​ಗೆ ತನ್ನದೇ ಫೋಟೋ ತಾನೇ ಹಾಕಿಕೊಂಡ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts