More

    ವರ್ತಮಾನದ ಬಿಕ್ಕಟ್ಟುಗಳಿಗೆ ಬುದ್ಧತತ್ವ ಪರಿಹಾರ

    ಶಿವಮೊಗ್ಗ: ಅಸಮಾನತೆ, ಹಸಿವು, ಅವಮಾನಗಳಿಂದ ತಲ್ಲಣಿಸುತ್ತಿದ್ದ ಸಮಾಜಕ್ಕೆ ಸೌಹಾರ್ದತೆ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಮಹಾನ್ ಚೇತನ ಗೌತಮ ಬುದ್ಧನ ತತ್ವಗಳು ಸಾರ್ವಕಾಲಿಕ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಎ.ಎಲ್.ಮಂಜುನಾಥ್ ಅಭಿಪ್ರಾಯಪಟ್ಟರು.

    ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ.ಆರ್.ಅಂಬೇಡ್ಕರ್ ಸಂಶೋಧನೆ ಮತ್ತು ಅಧ್ಯಯನ ಕೇಂದ್ರದಿಂದ ಗುರುವಾರ ಬುದ್ಧಪೂರ್ಣಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನ ವಿವಿಧ ಭಾಗಗಳಲ್ಲಿ ಗಡಿ, ಭಾಷೆ, ಸಂಸ್ಕೃತಿ ವಿಚಾರಗಳಲ್ಲಿ ದೇಶ ದೇಶಗಳ ನಡುವೆ ಬಗೆಹರಿಸಲಾಗದ ಬಿಕ್ಕಟ್ಟುಗಳಿವೆ. ಅವು ಉಲ್ಬಣಗೊಳ್ಳುತ್ತಲೇ ಇವೆ. ವರ್ತಮಾನ ಕಾಲದ ಇಂತಹ ಹಲವು ಬಿಕ್ಕಟ್ಟುಗಳಿಗೆ ಬುದ್ಧತತ್ವದಲ್ಲಿ ಪರಿಹಾರವಿದೆ ಎಂದರು.
    ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ್ ಮಾತನಾಡಿ, ಜಗತ್ತಿಗೆ ಶಾಂತಿ, ಅಹಿಂಸೆ ತತ್ವವನ್ನು ಪ್ರತಿಪಾದಿಸಿದ ಬುದ್ಧ, ಜನತೆಯ ದುಃಖವನ್ನು ನಿವಾರಿಸಲು ದೇಶಾದ್ಯಂತ ಸಂಚರಿಸಿ ತನ್ನದೇ ಆದ ಪರಿಹಾರ ಹುಡುಕಿಕೊಂಡವನು. ಬುದ್ಧನ ತತ್ವವನ್ನು ಅಳವಡಿಸಿಕೊಂಡರೆ ಸಾರ್ಥಕ ಬದುಕು ನಮ್ಮದಾಗುವುದು ಎಂದರು.
    ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ನೆಲ್ಲಿಕಟ್ಟೆ ಸಿದ್ದೇಶ್, ಕಲಾ ನಿಕಾಯದ ಡೀನ್ ಪ್ರೊ. ಗುರುಲಿಂಗಯ್ಯ, ಕಾಲೇಜು ಅಭಿವೃದ್ಧಿ ಪರಿಷತ್ತಿನ ನಿರ್ದೇಶಕ ಪ್ರೊ. ನಾಗರಾಜ್, ಡಾ. ವಿಜಯಕುಮಾರ, ಡಾ. ಯೋಗೀಶ್ ನಾಯಕ್, ಡಾ. ಎನ್.ಬಿ.ತಿಪ್ಪೇಸ್ವಾಮಿ, ವಿಶ್ವವಿದ್ಯಾಲಯ ಕಾಲೇಜಿನ ಪ್ರಾಚಾರ್ಯ ಡಾ. ಧರ್ಮೇಗೌಡ, ಡಾ. ಅಣ್ಣಯ್ಯ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts