More

    ದೇಶದಲ್ಲಿ ಇಂದು ಅರೆನೆರಳಿನ ಚಂದ್ರಗ್ರಹಣ ಗೋಚರ

    ಉಡುಪಿ: ಹುಣ್ಣಿಮೆ ಚಂದ್ರ ಭೂಮಿಯ ಅರೆನೆರಳಲ್ಲಿ ಹಾದುಹೋಗುತ್ತಿರುವುದರಿಂದ ಮೇ 5ರಂದು ದೇಶದಲ್ಲಿ ಅರೆನೆರಳಿನ ಚಂದ್ರಗ್ರಹಣ ಗೋಚರಿಸಿದೆ. ಈ ಗ್ರಹಣ ಭಾರತದ ಎಲ್ಲ ಪ್ರದೇಶಗಳಲ್ಲಿ ರಾತ್ರಿ 8.44ರಿಂದ ಮಧ್ಯರಾತ್ರಿ 1.01ರವರೆಗೆ ನಡೆಯಲಿದೆ. ರಾತ್ರಿ 10.52ಕ್ಕೆ ಗರಿಷ್ಠ ಗ್ರಹಣ ಗೋಚರವಾಗಿದೆ.

    ಇದನ್ನೂ ಓದಿ: ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

    ಈ ಗ್ರಹಣ ಭೂಮಿಯ ಅರೆನೆರಳಿನಲ್ಲಿ ಚಂದ್ರನು ಬಂದಾಗ ಸಂಭವಿಸುತ್ತದೆ. ಚಂದ್ರನು ಭೂಮಿಯ ಅರೆನೆರಳಲ್ಲಿ ಹಾದು ಹೋಗುವುದನ್ನು ಅರೆನೆರಳಿನ ಚಂದ್ರಗ್ರಹಣ ಎನ್ನುತ್ತಾರೆ. ಇದೇ ರೀತಿ ಚಂದ್ರನು ಭೂಮಿಯ ನೆರಳಿನಿಂದ ಹಾದುಹೋಗುವಾಗ ಅದು ಪಾರ್ಶ್ವಗ್ರಹಣ ಅಥವಾ ಖಗ್ರಾಸ ಚಂದ್ರಗ್ರಹಣವಾಗಿರುತ್ತದೆ.

    ಇದನ್ನೂ ಓದಿ: ಜೊತೆಗಿದ್ದವನ ಹೆಣವನ್ನೇ 2 ವರ್ಷ ಫ್ರಿಡ್ಜ್​ನಲ್ಲಿಟ್ಟ; ಸತ್ತವನ ಹಣವನ್ನೇ ದಿನಗಟ್ಟಲೆ ಬಳಸಿಬಿಟ್ಟ!

    ಅರೆನೆರಳಿನ ಚಂದ್ರಗ್ರಹಣವನ್ನು ವೀಕ್ಷಿಸುವುದು ಕಷ್ಟ. ಭೂಮಿಯ ಅರೆನೆರಳು ಮಸುಕಾಗಿರುವುದರಿಂದ ಚಂದ್ರನ ಮೇಲೆ ಈ ನೆರಳನ್ನು ಗಮನಿಸುವುದು ಸುಲಭವಲ್ಲ. ಬರಿಗಣ್ಣಿನಲ್ಲಿ ನೋಡುವಾಗ ಗರಿಷ್ಠ ಗ್ರಹಣದ ಸಮಯ ಚಂದ್ರ, ಸಾಮಾನ್ಯ ಹುಣ್ಣಿಮೆ ಚಂದ್ರನಿಗಿಂತ ಸ್ವಲ್ಪ ಕಡಿಮೆ ಪ್ರಕಾಶಮಾನದಿಂದ ಗೋಚರಿಸುತ್ತದೆ. ಭಾರತದ ಎಲ್ಲ ಪ್ರದೇಶಗಳಿಂದ ಈ ಗ್ರಹಣವನ್ನು ನೋಡಬಹುದು. ಅದೇ ರೀತಿ ದಕ್ಷಿಣ ಏಷ್ಯಾದ ಎಲ್ಲ ದೇಶಗಳಲ್ಲಿ, ರಷ್ಯಾ ಹಾಗೂ ಆಸ್ಟ್ರೆಲಿಯಾದಲ್ಲೂ ಈ ಗ್ರಹಣ ಗೋಚರಿಸಿದೆ ಎಂದು ಭೌತಶಾಸ್ತ್ರ ಉಪನ್ಯಾಸಕ ಅತುಲ್​ ಭಟ್​ ತಿಳಿಸಿದ್ದಾರೆ.

    ದೇಶದಲ್ಲಿ ಇಂದು ಅರೆನೆರಳಿನ ಚಂದ್ರಗ್ರಹಣ ಗೋಚರ
    ಹುಬ್ಬಳ್ಳಿಯಲ್ಲಿ ಗೋಚರಿಸಿದ ಚಂದ್ರಗ್ರಹಣ. (ಚಿತ್ರ: ರಾಜು ಹಿರೇಮಠ)

    ಅಮೆರಿಕದಲ್ಲಿ ಟೆಸ್ಲಾ ಕಾರಿಗೆ ಬಿಎಂಟಿಸಿಯ ಹಳೇ ಬಸ್​ನ ನಂಬರ್; ಏನಿದರ ಹಿನ್ನೆಲೆ?

    ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts