More

    50 ವರ್ಷದ ಬಳಿಕ ಚಂದ್ರನ ಮೇಲೆ ಇಳಿಯಿತು ಅಮೆರಿಕಾ ಬಾಹ್ಯಾಕಾಶ ನೌಕೆ..!!

    ನ್ಯೂಯಾರ್ಕ್: ಬರೋಬ್ಬರಿ 50 ವರ್ಷದ ಬಳಿಕ ಅಮೆರಿಕ ಮತ್ತೊಮ್ಮೆ ಚಂದ್ರನ ಮೇಲೆ ಕಾಲಿಟ್ಟಿದೆ. ಅಮೆರಿಕದ ‘ಇಂಟ್ಯೂಟಿವ್ ಮೆಷಿನ್ಸ್’ ಕಂಪನಿಯ ಮೊದಲ ಚಂದ್ರನ ಲ್ಯಾಂಡರ್ ‘ಒಡಿಸ್ಸಿಯಸ್’ ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿದಿದೆ.

    ಇದನ್ನೂ ಓದಿ: Gmail: ಆಗಸ್ಟ್ 1 ರಿಂದ ಜಿಮೇಲ್ ಸೇವೆ ಸ್ಥಗಿತ?! ಇದಕ್ಕೆ ಗೂಗಲ್​ ಕೊಟ್ಟ ಸ್ಪಷ್ಟನೆ ಏನು? ವಿವರ ಇಲ್ಲಿದೆ ನೋಡಿ..

    ಒಡಿಸ್ಸಿಯಸ್ ಲ್ಯಾಂಡರ್ ಅಮೆರಿಕ ಕಾಲಮಾನ ಗುರುವಾರ ಸಂಜೆ 6:23ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಿತು. ನಾಸಾ ಮತ್ತು ಇತರ ವಾಣಿಜ್ಯ ಕಂಪನಿಗಳ ಉಪಕರಣಗಳನ್ನು ಒಡಿಸ್ಸಿಯಸ್ ಚಂದ್ರನ ಮೇಲೆ ಸಾಗಿಸಿತು. ಕೊನೆಯ ಅಮೇರಿಕನ್ ಮೂನ್ ಲ್ಯಾಂಡಿಂಗ್ ಮಿಷನ್ ಡಿಸೆಂಬರ್ 1972 ರಲ್ಲಿ ಆಗಿತ್ತು. ಅಪೊಲೊ ಮಿಷನ್‌ನ ಭಾಗವಾಗಿ ‘ಅಪೊಲೊ-17’ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಯಲ್ಲಿ ಇಳಿದಿದೆ ಎಂದು ತಿಳಿದು ಬಂದಿದೆ.

    ಫ್ಲೋರಿಡಾದಲ್ಲಿರುವ ನಾಸಾದ ಕೆನಡಿಯನ್​ ಬಾಹ್ಯಾಕಾಶ ಕೇಂದ್ರದಿಂದ ಕಳೆದ ಗುರುವಾರ ಈ ಪ್ರಯೋಗವನ್ನು ನಡೆಸಲಾಯಿತು. ಬಾಹ್ಯಾಕಾಶ ನೌಕೆಯನ್ನು ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಉಡಾವಣೆ ಮಾಡಲಾಯಿತು. ಈ ಕಾರ್ಯಾಚರಣೆಗೆ ಐಎಂ-1 ಎಂದು ಹೆಸರಿಸಲಾಯಿತು. ‘ಇಂಟ್ಯೂಟಿವ್ ಮೆಷಿನ್ಸ್’ ಎಂಬ ಖಾಸಗಿ ಸಂಸ್ಥೆ ಚಂದ್ರನತ್ತ ಕಳುಹಿಸಿದ ಮೊದಲ ರೊಬೊಟಿಕ್ ನೌಕೆ ಇದಾಗಿದೆ ಎಂಬುದು ಗಮನಾರ್ಹ.

    ಚಂದ್ರನ ಮೇಲ್ಮೈ ಪರಸ್ಪರ ಕ್ರಿಯೆಗಳು, ವಾತಾವರಣದ ಪ್ರಕ್ರಿಯೆಗಳು ಮತ್ತು ರೇಡಿಯೋ ಖಗೋಳಶಾಸ್ತ್ರವನ್ನು ತನಿಖೆ ಮಾಡುವುದು ಮಿಷನ್‌ನ ಮುಖ್ಯ ಉದ್ದೇಶಗಳಾಗಿವೆ. ಲ್ಯಾಂಡಿಂಗ್ ತಂತ್ರಜ್ಞಾನ, ಸಂವಹನ ಮತ್ತು ನ್ಯಾವಿಗೇಷನ್‌ಗೆ ಸಂಬಂಧಿಸಿದ ಸಾಮರ್ಥ್ಯಗಳನ್ನು ಸಹ ಪರಿಶೀಲಿಸಲಾಗುವುದು ಎಂದು ನಾಸಾ ವರದಿಗಳು ಹೇಳುತ್ತವೆ. ನಾಸಾ ಚಂದ್ರನ ಮೇಲೆ ಸಂಶೋಧನೆಗಾಗಿ ಅನೇಕ ಅಮೇರಿಕನ್ ಕಂಪನಿಗಳೊಂದಿಗೆ ಕೆಲಸ ಮಾಡುತ್ತಿದೆ.

    ‘ಎಲ್ಲ ಅರಿತೇ ಸಿರಿಯಾಗೆ’..ಐಸಿಸ್​ ವಧುವಿಗೆ ಮತ್ತೊಮ್ಮೆ ಸೋಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts